ನೆಲ, ಜಲದ ಅರಿವು ಮೂಡಿಸುವ ಮೌನ ಕ್ರಾಂತಿ ಮಾಡುತ್ತಿರುವ ಶಿಕ್ಷಕ ಶಿವಲಿಂಗಪ್ಪ

ಈ ಶಾಲೆಯ ಮಕ್ಕಳು ಇಡೀ ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಿದ್ದಾರೆ. ಗ್ರಾಮದಲ್ಲಿದ್ದ ವಿಪರೀತ ಪ್ಲೋರೈಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮೇಲ್ಛಾವಣಿ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ ಮಳೆಕೊಯ್ಲು ಘಟಕ ಸ್ಥಾಪಿಸಿ ಶಾಲೆಯ ಶಿಕ್ಷಕ ಶಿವಲಿಂಗಪ್ಪ ರಾಜೂರ್ ಇಡೀ ಗ್ರಾಮಸ್ಥರ ಮನಗೆದ್ದಿದ್ದಾರೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ತಿಪ್ಪಾಪೂರ್ ಎನ್ನುವ ಪುಟ್ಟ ಗ್ರಾಮವಿದೆ. 70 ಮನೆಗಳಿರುವ ಈ ಗ್ರಾಮಕ್ಕೆ ಹಲವು ದಶಕಗಳಿಂದ ಫ್ಲೋರೈಡ್ ಸಮಸ್ಯೆ ಶಾಪವಾಗಿ ಪರಿಣಮಿಸಿತ್ತು. ಸರ್ಕಾರಿ ಶಾಲೆ ಇದ್ದರೂ ಕೂಡ ಹೆಚ್ಚಿನ ವಿದ್ಯಾರ್ಥಿಗಳಿಗೆ ಕುರಿ ಹಾಗೂ ದನ ಕಾಯುವುದು ವೃತ್ತಿಯಾಗಿತ್ತು. ಈ ಗ್ರಾಮಕ್ಕೆ 2000 ಇಸ್ವಿಯಲ್ಲಿ ಬಂದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕೇವಲ ಅಕ್ಷರದರಿವು ಮೂಡಿಸಲಿಲ್ಲ. ಬದಲಾಗಿ ಗ್ರಾಮದ ಅಭಿವೃದ್ಧಿಗಾಗಿ ಮೌನ ಕ್ರಾಂತಿ ಮಾಡಿದ್ದಾರೆ.

ತಮ್ಮ ಕಾರ್ಯದ ಮೂಲಕ ಶಿಕ್ಷಕ ಶಿವಲಿಂಗಪ್ಪ ರಾಜೂರ್ ಇಡೀ ಗ್ರಾಮಸ್ಥರ ಮನಗೆದ್ದಿದ್ದಾರೆ. ಆಟ ಪಾಠದ ಜೊತೆಗೆ ಇಲ್ಲಿನ ಮಕ್ಕಳಿಗೆ ಪರಿಸರ, ಸ್ವಚ್ಛತೆ, ಜೀವಜಲದ ಬಗ್ಗೆ ಮಕ್ಕಳಿಗೆ ಜ್ಞಾನ ನೀಡಲಾಗುತ್ತಿದೆ. ಜೊತೆಗೆ ಈ ಶಾಲೆಯ ಮಕ್ಕಳು ಇಡೀ ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ. ಜೊತೆಗೆ ರಾಜೂರ್ ಗುರುಗಳ ಪ್ರಯತ್ನದಿಂದ ಮುಳ್ಳು ಗಿಡಗಳ ಮಧ್ಯ ಮುಚ್ಚಿ ಹೋದ ಶಾಲೆ ಇವತ್ತು ನಂದನವನವಾಗಿದೆ. ಗ್ರಾಮದಲ್ಲಿದ್ದ ವಿಪರೀತ ಫ್ಲೋರೈಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮೇಲ್ಛಾವಣಿ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ ಮಳೆಕೊಯ್ಲು ಘಟಕ ಸ್ಥಾಪಿಸಿದ್ದಾರೆ.

4 ಲಕ್ಷಕ್ಕೂ ಅಧಿಕ ಲೀ ಸಾಮರ್ಥ್ಯದ ಮಳೆ ನೀರು ಸಂಗ್ರಹ ಘಟಕ ಸ್ಥಾಪಿಸಿ, ಇದರಲ್ಲಿ ಸಂಗ್ರಹವಾದ ನೀರನ್ನೇ ಮಕ್ಕಳು ವರ್ಷಪೂರ್ತಿ ಕುಡಿಯಲು ಬಳುಸುತ್ತಾರೆ. ಜೊತೆಗೆ ಘಟಕದ ನಿರ್ವಹಣೆ ಕುರಿತು ಮಕ್ಕಳಿಗೆ ತಿಳುವಳಿಕೆ ಮೂಡಿಸಿದ್ದಾರೆ. ಜೀವಜಲದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಯಾವ ಮಕ್ಕಳು ಕೂಡ ಹನಿ ನೀರು ವ್ಯರ್ಥ ಮಾಡಲ್ಲ. ಜನಪ್ರತಿನಿಧಿ ಪರಿಹರಿಸದ ಫ್ಲೋರೈಡ್ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ.

ಶಾಲಾ ಆವರಣದಲ್ಲಿ ಜಲಸ್ಥರ ಮರುಪೂರ್ಣ ಘಟಕ ಸ್ಥಾಪನೆ

ಶಾಲಾ ಆವರಣದಲ್ಲಿ ಜಲಸ್ಥರ ಮರುಪೂರ್ಣ ಘಟಕವನ್ನು ಸ್ಥಾಪಿಸಿ, ಇದರಿಂದ ಶಾಲಾ ಆವರಣದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಿ ಪಾತಾಳಕ್ಕಿಳಿದ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಇವರ ಈ ಪ್ರಯತ್ನದಿಂದ 200 ಅಡಿಗೆ ಇಳಿದ ಗಂಗೆ ಇದೀಗ 100 ಅಡಿಗೆ ಸಿಗುವಂತಾಗಿದ್ದಾಳೆ.

ಶಾಲೆಯ ಆವರಣದಲ್ಲಿ ನಿರ್ಮಿಸಿರುವ ವ್ಹಿ ವೈಯರ್ ಇಂಜೆಕ್ಷನ್ ವೆಲ್ ಮಾದರಿಯಲ್ಲಿ ಮರುಪೂರ್ಣಕ್ಕೆ ಬಳಕೆಯಾಗುತ್ತದೆ. ಶಾಲೆಯ 814 ಚಮೀಟರ್ ವಿಸ್ತಿರ್ಣದಲ್ಲಿ ಬಿದ್ದ ಮಳೆಯ ನೀರು 2+1 ರ ಹಂತದಲ್ಲಿ ಇಂಗಿ, ನಂತರ 137ಫೂಟ್ ಒಳಗೆ ಹೋಗಿ ಅಂತರ್ಜಲ ಸೇರುತ್ತದೆ. ಮತ್ತೆ ಶಾಲಾ ಆವರಣದ ಕೊಳವೆ ಬಾವಿಯ ಮೂಲಕ ಬಳಕೆಯಾಗುತ್ತದೆ. ಶಾಲೆಯ ಆವರಣದಲ್ಲಿ ಮಳೆಮಾಪನ ಯಂತ್ರವನ್ನು ಸ್ಥಾಪಿಸಿದ್ದಾರೆ. ಇದರಿಂದ ಶಾಲಾ ಆವರಣದಲ್ಲಿ ಎಷ್ಟು ಮಳೆ ಆಗಿದೆ. ನೀರು ಸಂಗ್ರಹಿಸಲಾಯಿತು ಎಂಬುದನ್ನು ಕೂಡ ಮಕ್ಕಳು ತಿಳಿದುಕೊಳ್ಳುತ್ತಾರೆ. ಹನಿ ನೀರು ವ್ಯರ್ಥವಾಗದಂತೆ ನೀರಿನ ಸದ್ಬಳಕೆಯಾಗಬೇಕು ಅನ್ನೋ ಉದ್ದೇಶದಿಂದ ಯಂತ್ರ ಅಳವಡಿಸಿದ್ದಾರೆ.

2015ರಲ್ಲಿ ಒಟ್ಟು ವರ್ಷದ 365 ದಿನಗಳಲ್ಲಿ 43 ದಿನದಲ್ಲಿ 919 ಮಿ.ಮೀ ಮಳೆಯಾಗಿದೆ. ಈ ಮಳೆಯಿಂದ ಈ ಶಾಲಾ ಆವರಣದಲ್ಲಿ 7.48 ಲಕ್ಷ ಲೀಟರ್ ನೀರು ಶಾಲಾ ಆವರಣದಲ್ಲಿ ಬಂದಿದೆ. ಈವರೆಗೆ ಪ್ರತಿ ವರ್ಷ ನೀರಿನ ಸಂಗ್ರಹಣಾ ಸಾಮಾರ್ಥ್ಯ ಹೆಚ್ಚುತ್ತಾ ಸಾಗಿದೆ.

ಇದನ್ನೂ ಓದಿ : ಶಾಲೆ ಆರಂಭವಾದರೂ ಹೋಗಲಾಗದ ಬೇಸರದಲ್ಲಿ ಮುಳುಗಿದ ಕೊಡಗಿನ ಮಕ್ಕಳು

ಶಿಕ್ಷಕರ ಶಿವಲಿಂಗಪ್ಪ ರಾಜೂರ್ ಅವರ ತಿಪ್ಪಾಪೂರ್ ಗ್ರಾಮದ ಶಾಲೆಗೆ ವರ್ಗವಾಗಿ ಹೋದಾಗ ಆ ಶಾಲೆಯಲ್ಲಿದ್ದು ಕೇವಲ 8 ವಿದ್ಯಾರ್ಥಿಗಳು ಮಾತ್ರ ಅವರು ಕೂಡ ಸರಿಯಾಗಿ ಶಾಲೆಗೆ ವರುತ್ತಿರಲಿಲ್ಲ. ಕುರಿ ಹಾಗೂ ದನ ಕಾಯಲು ಮಕ್ಕಳೇ ಹೋಗುವ ಸ್ಥಿತಿ ಇತ್ತು. ಸ್ವತಃ ವಿದ್ಯಾರ್ಥಿಗಳನ್ನು ಬೆಂಬತ್ತಿ ಹೋಗಿ, ಪಾಲಕರ ಮನಃ ಪರಿವರ್ತಿಸಿದ ಪರಿಣಾಮ ಇದೀಗ ನೂರಕ್ಕೂ ಕಡಿಮೆ ಮನೆಗಳಿರೋ ಈ ಗ್ರಾಮದ ಶಾಲೆಯಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಇದೆ. ಶಾಲೆ ಅಂಗಳದಲ್ಲಿ ಸುಂದರ ಕೈ ತೋಟವನ್ನು ನಿರ್ಮಿಸಿದ್ದಾರೆ. ಈ ತೋಟದಲ್ಲಿ ಬಾಳೆ, ಪಪ್ಪಾಯಿ, ನೆರಳೆ, ಹೀರೆಕಾಯಿ, ವಿವಿಧ ರೀತಿಯ ಸೊಪ್ಪುಗಳು, ಬೇವು, ಹೊಂಗೆ ಹೀಗೆ 120 ಕ್ಕೂ ಹೆಚ್ಚು ಬಗೆಯ ತರಕಾರಿ ಹಾಗೂ ಗಿಡಮರಗಳನ್ನು ಬೆಳದಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಇದೇ ತರಕಾರಿಯನ್ನು ಬಳಸುವುದು ಕೂಡ ಈ ಶಾಲೆಯ ವಿಶೇಷ‌.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More