ನಿರ್ದೇಶಕ ಯೋಗರಾಜ ಭಟ್ಟರ ಜೊತೆ ಮುಗುಳುನಗೆ ಹುಡುಗಿ ಆಶಿಕಾ ತರ್ಲೆ ಚಾಟಿಂಗ್

‘’ನನ್ನಲ್ಲಿ ನಿಮಗೆ ಇಷ್ಟವಾಗಿದ್ದೇನು?’’ ಎಂದು ಪ್ರಶ್ನೆ ಎಸೆದರು ಆಶಿಕಾ. “ನೀವೊಬ್ಬ ಮಾಮೂಲಿ ಕನ್ನಡದ ಹುಡ್ಗಿ. ಎಕ್ಸ್‌ಟ್ರಾ ಬಿಲ್ಡಪ್‌ ಇಲ್ಲ. ನೋಡೋದಕ್ಕೆ ಗಂಡ್ ಹುಡ್ಗಿ ಥರ ಇದೀರ,” ಎಂದು ಉತ್ತರಿಸಿ, ಮುಗುಳ್ನಕ್ಕರು ಭಟ್ಟರು! ಇವರಿಬ್ಬರ ಇಂಥದೇ ತರ್ಲೆ ಪ್ರಶ್ನೋತ್ತರ ಈ ವೀಡಿಯೋದಲ್ಲಿವೆ.

ಕನ್ನಡದ ಲೇಟೆಸ್ಟ್‌ ಮುದ್ದು ನಟಿಯರಲ್ಲಿ ‘ಮುಗುಳುನಗೆ'ಯ ಆಶಿಕಾ ರಂಗನಾಥ್ ಅವರಿಗೆ ಹೆಚ್ಚು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. 2014ರ 'ಫ್ರೆಶ್ ಫೇಸ್ ಬೆಂಗಳೂರು' ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕಿರೀಟ ತೊಟ್ಟು ಬಂದ ಅವರಿಗೆ ಸಿನಿಮಾ ನಟಿಯಾಗುವ ಉಮೇದು ಇರಲಿಲ್ಲ. ಸಹೋದರಿ, ನಟಿ ಅನುಷಾರ ಒತ್ತಾಯ, ಪ್ರೋತ್ಸಾಹದ ಮೇರೆಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ 'ಕ್ರೇಜಿ ಬಾಯ್ಸ್‌'ನಲ್ಲೇ ಸುದ್ದಿಯಾದರು.

ಯೋಗರಾಜ್‌ ಭಟ್‌ ನಿರ್ದೇಶನದ 'ಮುಗುಳುನಗೆ' ಅವರ ವೃತ್ತಿಬದುಕಿಗೆ ಒಂದೊಳ್ಳೆಯ ತಿರುವಾಯ್ತು. ಗಾಂಧಿನಗರದ ಮಂದಿ ಅವರನ್ನು ಭರವಸೆಯ ಹಿರೋಯಿನ್‌ ಎಂದೇ ಕರೆಯುತ್ತಿದ್ದಾರೆ. “ಗೆಲುವು ನನ್ನಲ್ಲಿ ವಿಶ್ವಾಸ ಹೆಚ್ಚಿಸಿದೆ. ಮುಗುಳುನಗೆ ನಂತರ ಹೆಚ್ಚು ಜನರು ನನ್ನನ್ನು ಗುರುತಿಸುತ್ತಿದ್ದಾರೆ,” ಎನ್ನುವ ಸಂಭ್ರಮ ಆಶಿಕಾರದ್ದು.

ಆಶಿಕಾರನ್ನು ಸಿನಿಮಾಗೆ ಪರಿಚಯಿಸಿದ್ದು ಅವರ ಸಹೋದರಿ, ನಟಿ ಅನುಷಾ. ಕೊಂಚ ಅಕ್ಕನನ್ನೇ ಹೋಲುವ ಆಶಿಕಾ ಅಕ್ಕನ ಸ್ಮರಿಸುವುದನ್ನು ಮರೆಯುವುದಿಲ್ಲ. “ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಾಗ ಭಯ ಆಗಿತ್ತು. ನನಗೆ ಸಂಬಂಧ ಇಲ್ದೇ ಇರೋ ಜಾನರ್ ಅಂತ ಸುಮ್ಮನಾಗಿದ್ದೆ. ಎಲ್ಲರಿಗೂ ಇಂತಹ ಅವಕಾಶ ಸಿಗೋಲ್ಲ, ಸಿಕ್ಕಾಗ ಬಳಸಿಕೊಳ್ಳಬೇಕು ಅಂತ ಅಕ್ಕ ಗೈಡ್ ಮಾಡಿದಳು,” ಎನ್ನುತ್ತಾರೆ.

ಆಶಿಕಾ ಮೂಲತಃ ಡ್ಯಾನ್ಸರ್‌. ಚಿಕ್ಕವರಿದ್ದಾಗ ತುಂಬಾ ಸಂಕೋಚ ಸ್ವಭಾವದ ಹುಡುಗಿಯಾಗಿದ್ದರಂತೆ. ಡ್ಯಾನ್ಸ್‌ ಕ್ಲಾಸ್‌ನಲ್ಲಿ ಅಕ್ಕ ಮಾಡುತ್ತಿದ್ದ ನೃತ್ಯ ನೋಡಿ ಮನೆಗೆ ಬಂದು ರೂಂ ಬಾಗಿಲು ಹಾಕಿಕೊಂಡು ಅಭ್ಯಾಸ ಮಾಡುತ್ತಿದ್ದರಂತೆ! ಕ್ರಮೇಣ ಆಸಕ್ತಿ ಹೆಚ್ಚಾಗಿ ತಾವೂ ನೃತ್ಯ ಕಲಿಕೆಗೆ ಮುಂದಾಗಿದ್ದಾರೆ. ಫ್ರೀಸ್ಟೈಲ್, ವೆಸ್ಟರ್ನ್‌ ಡ್ಯಾನ್ಸ್‌ ಫಾರ್ಮ್‌ಗಳಲ್ಲಿ ಅವರಿಗೆ ಪರಿಣತಿ ಇದೆ.

ಸದ್ಯ ಆಶಿಕಾ “Rambo 2 ” ಕನ್ನಡ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಇತ್ತೀಚೆಗಷ್ಟೇ ಗೋವಾ, ರಾಜಸ್ಥಾನದಲ್ಲಿ ಈ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ಮತ್ತೊಂದು ಸಿನಿಮಾ 'ಗರುಡ'ದ ಟಾಕಿ ಪೋರ್ಷನ್‌ ಮುಗಿದಿದೆ. ನಟನೆಯ ಬಿಝಿ ಶೆಡ್ಯೂಲ್‌ ಮಧ್ಯೆ ಆಶಿಕಾ ವಿದ್ಯಾಭ್ಯಾಸವನ್ನೂ ಮುಂದುವರಿಸಿದ್ದಾರೆ. ಪ್ರಸ್ತುತ ಅವರು ಫೈನಲ್ ಇಯರ್ ಬಿಕಾಂ ವಿದ್ಯಾರ್ಥಿನಿ. ನಟನೆಯಷ್ಟೇ ಆದ್ಯತೆ ಓದಿಗೂ ಇರಲಿದೆಯಂತೆ. ಕೈತುಂಬಾ ಅವಕಾಶಗಳಿರುವ ಆಶಿಕಾ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More