‘ಗೋದ್ರಾ’ ಸಿನಿಮಾದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ರಕ್ಷಾ ಆಯ್ಕೆ

‘ಎಂದೂ ಮುಗಿಯದ ಯುದ್ಧ’ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ತಯಾರಾಗುತ್ತಿರುವ ‘ಗೋದ್ರಾ’ ಸಿನಿಮಾದ ನಾಯಕಿಯಾಗಿ ರಕ್ಷಾ ಸೋಮಶೇಖರ್ ಆಯ್ಕೆಯಾಗಿದ್ದಾರೆ. ರಕ್ಷಾ ಅವರು ನಟ ವಸಿಷ್ಠ ಸಿಂಹಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಾ ಅವರಿಗೆ ಇದು ಐದನೇ ಸಿನಿಮಾ

ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ‘ಗೋದ್ರಾ’ ಸಿನಿಮಾದ ನಾಯಕಿಯಾಗಿ ರಕ್ಷಾ ಸೋಮಶೇಖರ್ ಆಯ್ಕೆಯಾಗಿದ್ದಾರೆ. ಚಿತ್ರದ ಹೀರೋ ಆಗಿ ನೀನಾಸಂ ಸತೀಶ್‌ ನಟಿಸುತ್ತಿದ್ದು, ಪ್ರಮುಖ ಪಾತ್ರವೊಂದರಲ್ಲಿ ಋತ್ವಿಕ್ ಸಿಂಹ ಇರುತ್ತಾರೆ. ಸತೀಶ್‌ಗೆ ಶ್ರದ್ಧಾ ಶ್ರೀನಾಥ್ ಜೋಡಿಯಾದರೆ, ಋತ್ವಿಕ್‌ ಸಿಂಹರಿಗೆ ನಾಯಕಿಯಾಗಿ ರಕ್ಷಾ ಸೋಮಶೇಖರ್‌ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಬೆಂಗಳೂರಿನ ರಕ್ಷಾ ಅವರಿಗೆ 'ಗೋದ್ರಾ’ ಐದನೇ ಸಿನಿಮಾ. ನಾಗೇಂದ್ರ ಅರಸ್‌ ಅವರ 'ಮೇ ಫಸ್ಟ್‌’ನೊಂದಿಗೆ ಕ್ಯಾಮೆರಾ ಎದುರಿಸಿದ ರಕ್ಷಾ, ಚಿತ್ರ ತೆರೆಕಾಣುವ ಮುನ್ನವೇ ಮೂರು ಸಿನಿಮಾಗಳ ನಾಯಕಿಯಾಗಿ ಆಯ್ಕೆಯಾದರು. 'ಮೇ ಫಸ್ಟ್‌’ ನಾಯಕ ಜೆಕೆ ಇದೀಗ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಹೋಗಿದ್ದಾರೆ. ಅವರು ಶೋನಿಂದ ಮರಳಿದ ನಂತರ ಚಿತ್ರೀಕರಣಕ್ಕೆ ಮರುಚಾಲನೆ ಸಿಗಲಿದೆಯಂತೆ. 'ಕೇಸ್ ನಂಬರ್‌ 33’ ಮತ್ತು ‘ಮಿಸ್ಟರ್ ಜೈ’ ಅವರ ಮತ್ತೆರೆಡು ಕನ್ನಡ ಸಿನಿಮಾಗಳು. ಎಲ್ಲ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿದ್ದು, ಇದೀಗ ರಕ್ಷಾ ‘ಗೋದ್ರಾ’ ಗ್ಯಾಂಗ್ ಸೇರಿಕೊಂಡಿದ್ದಾರೆ.

ಇದನ್ನೂ ಓದಿ : ಸಾಗರದಾಚೆಯೂ ತೆರೆಕಾಣಲಿದೆ ಪುನೀತ್‌ ಅಭಿನಯದ ‘ಅಂಜನಿಪುತ್ರ’

ತಮ್ಮ ಐದನೇ ವರ್ಷದಲ್ಲೇ ರಕ್ಷಾ ಮೊದಲ ಫೋಟೋಶೂಟ್‌ ಮಾಡಿಸಿದ್ದರಂತೆ. ಚಿಕ್ಕಂದಿನಲ್ಲಿ ಅವರು ಕೆಲವು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿನತ್ತ ಹೊರಳಿದ ಅವರು, ಬಿಬಿಎಂ ಮುಗಿಸಿಕೊಂಡು ಸಿನಿಮಾಗೆ ಕಾಲಿಟ್ಟಿದ್ದಾರೆ. ಮುಂದೆ ನಟನೆಯೇ ತಮ್ಮ ವೃತ್ತಿಯಾಗಲಿದೆ ಎನ್ನುವ ರಕ್ಷಾ, ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ.

ತಮ್ಮ ಚಿತ್ರಕ್ಕೂ, 2002ರ ವಿವಾದಕ್ಕೆ ಕಾರಣವಾದ ಗೋದ್ರಾ ಘಟನೆಗೂ ಸಂಬಂಧವಿಲ್ಲ ಎಂದು ನಿರ್ದೇಶಕ ನಂದೀಶ್‌ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದೊಂದು ಪ್ರಯೋಗಾತ್ಮಕ ಸಿನಿಮಾ ಎನ್ನುವ ಅವರು ಪ್ರೀತಿಯ ಕತೆ ಹೇಳಹೊರಟಿದ್ದಾರಂತೆ. ಸುಬ್ರಹ್ಮಣ್ಯದಿಂದ ಶುರುವಾಗುವ ಕತೆ ಉತ್ತರ ಭಾರತದತ್ತ ಹೊರಳುತ್ತದೆ. ಜಾರ್ಖಂಡ್‌ ಸುತ್ತಮುತ್ತ ಹೆಚ್ಚಿನ ಪಾಲು ಶೂಟಿಂಗ್ ನಡೆಯಲಿದ್ದು, ಅಲ್ಲಿನ ಸ್ಥಳೀಯರೂ ಚಿತ್ರದ ಭಾಗವಾಗಿರುತ್ತಾರೆ ಎನ್ನುತ್ತಾರವರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More