ಫೈನಾನ್ಸ್‌ ದಂಧೆಯ ಒಳಸುಳಿಗಳ ಕತೆಯ ‘ಸೀಜರ್‌’ನಲ್ಲಿ ಏನೇನಿದೆ?

ವಿನಯ್ ಕೃಷ್ಣ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಸೀಜರ್‌’ ಸಿನಿಮಾ ಶೂಟಿಂಗ್ ಮುಗಿದಿದ್ದು, ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಚಿರಂಜೀವಿ ಸರ್ಜಾ ಮತ್ತು ರವಿಚಂದ್ರನ್‌ ನಟಿಸುತ್ತಿರುವ ಇದು ಆಕ್ಷನ್‌-ಎಂಟರ್‌ಟೈನರ್‌ ಮಾದರಿಯ ಪ್ರಯೋಗ. ಮುಂದಿನ ವರ್ಷದ ಪ್ರಮುಖ ಸಿನಿಮಾಗಳಲ್ಲೊಂದು

ಮೂಲತಃ ಉದ್ಯಮಿಯಾದ ವಿನಯ್ ಕೃಷ್ಣ ಅವರು ತಾವು ಕಂಡ ನೈಜ ಘಟನೆಗಳನ್ನು ಚಿತ್ರಕತೆ ಮಾಡಿಕೊಂಡು 'ಸೀಜರ್’ ಸಿನಿಮಾ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಹೀರೋ ಆಗಿ ನಟಿಸುತ್ತಿರುವ ಸಿನಿಮಾದ ನಾಯಕಿ ಪರೂಲ್ ಯಾದವ್‌. ಇದೀಗ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಅವು ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಬಿಚ್ಚಿಡುತ್ತವೆ.

ಕಾರು ಫೈನಾನ್ಸ್‌ ದಂಧೆಯಲ್ಲಿನ ಏಳುಬೀಳುಗಳು, ಅಲ್ಲಿನ ರೌಡಿಸಂ, ಇದರಿಂದ ಸಾಮಾನ್ಯರು ಎದುರಿಸಬಹುದಾದ ಸಮಸ್ಯೆಗಳ ಸುತ್ತ ಕತೆ ಹೆಣೆಯಲಾಗಿದೆಯಂತೆ. ಬೆಂಗಳೂರಿನಲ್ಲಿ ಬಹುಪಾಲು ಚಿತ್ರೀಕರಣ ನಡೆಯಲಿದ್ದು, ಶಬರಿಮಲೈ ಮತ್ತು ಕದ್ರಿಯಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರಿಸಿದ್ದಾರೆ. ರ್ಯಾಪ್ ಸ್ಟಾರ್ ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆಯ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ.

ಇದನ್ನೂ ಓದಿ : ಪುತ್ರಿಗಾಗಿ ಅರ್ಜುನ್‌ ಸರ್ಜಾ ನಿರ್ಮಿಸಿ, ನಿರ್ದೇಶಿಸಿರುವ ‘ಪ್ರೇಮಬರಹ’ ರೆಡಿ

ಹಿರಿಯ ನಟರಾದ ರವಿಚಂದ್ರನ್‌ ಮತ್ತು ಪ್ರಕಾಶ್‌ ರೈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ ಎನ್ನುವುದು ಹೈಲೈಟ್‌. ಬಹಳ ದಿನಗಳ ನಂತರ ನಟಿ ಪರೂಲ್ ಯಾದವ್ ದೊಡ್ಡ ಚಿತ್ರದ ಮೂಲಕ ತೆರೆಗೆ ಮರಳುತ್ತಿದ್ದಾರೆ. ಸಾಮಾನ್ಯವಾಗಿ ಶಬರಿಮಲೈನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ. 'ಸೀಜರ್‌’ ನಿರ್ದೇಶಕ ವಿನಯ್ ಕೃಷ್ಣ ಅಲ್ಲಿ ಚಿತ್ರಿಸುವುದಾಗಿ ಹೇಳಿದ್ದರು. ಈ ವಿಷಯವನ್ನು ಗೌಪ್ಯವಾಗಿಡುವ ಅವರು, ತೆರೆ ಮೇಲೆಯೇ ಅದಕ್ಕೆ ಉತ್ತರ ಸಿಗಲಿದೆ ಎಂದಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More