ರೆಕಾರ್ಡ್‌ ಬ್ರೇಕ್‌ ಮಾಡುವ ಹಾದಿಯಲ್ಲಿ ‘ಟೈಗರ್‌ ಜಿಂದಾ ಹೈ’ ಬುಕಿಂಗ್‌!

ಸಲ್ಮಾನ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ‘ಟೈಗರ್ ಜಿಂದಾ ಹೈ’ ಸಿನಿಮಾ ಇದೇ 22ರಂದು ತೆರೆಕಾಣುತ್ತಿದೆ. ಅಡ್ವಾನ್ಸ್ ಬುಕಿಂಗ್‌ಗೆ ಚಾಲನೆ ಸಿಕ್ಕಿದ್ದು, ಟಿಕೆಟ್‌ಗಳು ಭರ್ಜರಿಯಾಗಿ ಬಿಕರಿಯಾಗಿವೆ. ಚಿತ್ರದ ಮೊದಲ ದಿನದ ವಹಿವಾಟು 30 ಕೋಟಿ ರು. ದಾಟಲಿದೆ ಎಂದು ಬಾಲಿವುಡ್‌ ಅಂದಾಜಿಸಿದೆ

ಇದೇ 22ರಂದು ತೆರೆಕಾಣುತ್ತಿರುವ ಸಲ್ಮಾನ್‌ ಖಾನ್‌ ಅವರ ‘ಟೈಗರ್ ಜಿಂದಾ ಹೈ’ ಸಿನಿಮಾ ತೆರೆಕಾಣುವ ಮುನ್ನವೇ ಸಂಚಲನ ಸೃಷ್ಟಿಸಿದೆ. ಬಾಲಿವುಡ್‌ ಮೂಲಗಳು ಹೇಳುವಂತೆ, ಚಿತ್ರದ ಮೊದಲ ದಿನದ ಟಿಕೆಟ್‌ಗಳು ಈಗಾಗಲೇ ಸಂಪೂರ್ಣ ಬಿಕರಿಯಾಗಿವೆ. ಇದು ಚಿತ್ರಕ್ಕೆ ಶುಭ ಸೂಚನೆ ಎನ್ನುವುದು ಬಾಲಿವುಡ್‌ ಪಂಡಿತರ ಅಂದಾಜು. ಇದರ ಆಧಾರದ ಮೇಲೆ ಅವರು ಚಿತ್ರದ ಗಳಿಕೆಯನ್ನು ಲೆಕ್ಕ ಹಾಕಲು ಆರಂಭಿಸಿದ್ದಾರೆ.

ಇದೇ ವರ್ಷ ಜೂನ್‌ನಲ್ಲಿ ತೆರೆಕಂಡ ಸಲ್ಮಾನ್‌ ಅವರ ‘ಟ್ಯೂಬ್‌ಲೈಟ್‌’ ಸಿನಿಮಾದ ಮೊದಲ ದಿನದ ಬುಕಿಂಗ್‌ 20 ಕೋಟಿ ರು. ಎನ್ನಲಾಗಿತ್ತು. ಮೊದಲ ಎರಡು ದಿನಗಳ ನಂತರ ಚಿತ್ರದ ಗಳಿಕೆಯೂ ಇಳಿಯಿತು. ಹಾಗಾಗಿ ಚಿತ್ರದ ಮೊದಲ ವಾರದ ಗಳಿಕೆಯನ್ನು ಬುಕಿಂಗ್ ಆಧಾರದ ಮೇಲೆಯೇ ಬಾಲಿವುಡ್‌ ಪಂಡಿತರು ಲೆಕ್ಕ ಹಾಕುತ್ತಾರೆ. ಈ ನಿಟ್ಟಿನಲ್ಲಿ ‘ಟೈಗರ್ ಜಿಂದಾ ಹೈ’ ಸಿನಿಮಾಗೆ ಬುಕಿಂಗ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ : ‘ಒಡಿಯಾನ್‌’ ಸಿನಿಮಾದ ಮೋಹನ್‌ಲಾಲ್‌ ಲುಕ್‌ಗೆ ಮರುಳಾದ ರಜನೀಕಾಂತ್‌

ಭಾನುವಾರ ಚಿತ್ರದ ಬುಕಿಂಗ್ ಓಪನ್‌ ಆಗಿತ್ತು. ಅಭಿಮಾನಿಗಳು ಕಾದು ಕುಳಿತು ಟಿಕೆಟ್‌ ಖರೀದಿಸಿದ್ದಾರೆ. ಈ ಆಧಾರದ ಮೇಲೆ ಚಿತ್ರದ ಮೊದಲ ದಿನದ ವಹಿವಾಟು 30-32 ಕೋಟಿ ರುಪಾಯಿ ಎಂದು ಅಂದಾಜಿಸಲಾಗುತ್ತಿದೆ. ನಂತರದ ದಿನಗಳಲ್ಲೂ ಇದೇ ಪ್ರತಿಕ್ರಿಯೆ ಸಿಕ್ಕರೆ ಮೊದಲ ವಾರದಲ್ಲೇ ಚಿತ್ರ ನೂರು ಕೋಟಿ ರುಪಾಯಿ ವಹಿವಾಟು ನಡೆಸಲಿದೆ.

ಸುಮಾರು 175 ಕೋಟಿ ರು. ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ ನಾಲ್ಕು ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ. ಕ್ರಿಸ್‌ಮಸ್‌ ರಜೆ ಸಂದರ್ಭದಲ್ಲೇ ಬಿಡುಗಡೆ ಆಗುತ್ತಿರುವುದು ಚಿತ್ರಕ್ಕೆ ನೆರವಾಗಲಿದೆ. ಇತ್ತೀಚಿನ ಸಾಲುಸಾಲು ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ. ಈ ಹಿನ್ನೆಲೆಯಲ್ಲಿ ವರ್ಷದ ಕೊನೆಗೆ ತೆರೆಕಾಣುತ್ತಿರುವ ‘ಟೈಗರ್ ಜಿಂದಾ ಹೈ’ ದೊಡ್ಡ ಯಶಸ್ಸು ಕಾಣಬೇಕೆಂದು ಉದ್ಯಮವೂ ಆಶಿಸುತ್ತಿದೆ. ಈ ಯಶಸ್ಸು ಮುಂದಿನ ಸಿನಿಮಾಗಳ ಬಿಡುಗಡೆಗೆ ನೆರವಾಗಲಿದೆ ಎನ್ನುವುದು ಅಂದಾಜು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More