ಚಾಪ್ಲಿನ್‌ ನೆನಪು | ಕಾಮಿಡಿ ಲೆಜೆಂಡ್‌ ಚಾರ್ಲಿ ನಟನೆಯ ಕಾಡುವ ಐದು ವಿಡಿಯೋ

ಜಾಗತಿಕ ಹಾಸ್ಯ ಸಿನಿಮಾದ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌. ಮೌನದಲ್ಲೇ ಎಲ್ಲವನ್ನೂ ಹೇಳುವ ಕಲೆಗಾರ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರದು ಮಹತ್ವದ ಸಾಧನೆ. ಇಂದು (ಏ 16) ಚಾಪ್ಲಿನ್‌ (16/04/1889 - 25/12/1977) ಜನ್ಮದಿನ. ಅವರ ಸಿನಿಮಾಗಳ ಕಾಡುವ ದೃಶ್ಯಗಳು ಇಲ್ಲಿವೆ

ಜಾಗತಿಕ ಸಿನಿಮಾ ಜಗತ್ತಿನ ಮೇರು ನಟ, ನಿರ್ದೇಶಕ, ಚಿತ್ರಸಾಹಿತಿ, ನಿರ್ಮಾಪಕ ಚಾರ್ಲಿ ಚಾಪ್ಲಿನ್‌. ತಮ್ಮ ಮೂಕಿ ಸಿನಿಮಾಗಳೊಂದಿಗೆ ಮನುಷ್ಯ ಸಂಬಂಧಗಳು, ರಾಜಕೀಯ ಮೇಲಾಟ, ಅಸಮಾನತೆಯಂತಹ ಸೂಕ್ಷ್ಮ ಸಂಗತಿಗಳಿಗೆ ಕನ್ನಡಿ ಹಿಡಿದ ಪ್ರತಿಭಾವಂತ ತಂತ್ರಜ್ಞ. ಅವರ ‘ದಿ ಟ್ರ್ಯಾಂಪ್‌’ ಪಾತ್ರ ಜಗತ್ತಿನ ಸಿನಿಮಾ ಸಂದರ್ಭದಲ್ಲೇ ಅಪರೂಪದ ಪಾತ್ರವೆಂದು ಗುರುತಿಸಲಾಗುತ್ತದೆ. ಒಂಬತ್ತು ವರ್ಷದ ಬಾಲಕನಿದ್ದಾಗ ನಾಟಕದ ಪಾತ್ರದೊಂದಿಗೆ ನಟನೆ ಶುರುಮಾಡಿದ ಚಾರ್ಲಿ ಮುಂದೆ ಏಳೂವರೆ ದಶಕ ನಟನೆ, ನಿರ್ದೇಶನದಲ್ಲಿ ತೊಡಗಿಸಿಕೊಂಡರು. ಅವರ ಸಿನಿಮಾಗಳ ಆಯ್ದ ಐದು ಜನಪ್ರಿಯ ವಿಡಿಯೋ ತುಣುಕುಗಳು ಇಲ್ಲಿವೆ.

ದಿ ಬ್ಯಾಂಕ್‌ (1915)

ದಿ ಫ್ಲೋರ್ ವಾಕರ್‌ (1916)

ಮಾಡರ್ನ್‌ ಟೈಮ್ಸ್‌ (1936)

ದಿ ಇಮಿಗ್ರೆಂಟ್ (1917)

ಸಿಟಿ ಲೈಟ್ಸ್‌ (1931)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More