ಸ್ಟೀವನ್ ಸ್ಪಿಲ್‌ಬರ್ಗ್‌ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್‌ ‘ದಿ ಪೋಸ್ಟ್‌’ ತೆರೆಗೆ

ಅಮೆರಿಕ ಸರ್ಕಾರದ ಪೆಂಟಗಾನ್‌ ಪೇಪರ್ಸ್‌ ವಿವಾದದ ಸುತ್ತ ಹೆಣೆದ ಸಿನಿಮಾ ‘ದಿ ಪೋಸ್ಟ್‌’. ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶನದ ಈ ಪೊಲಿಟಿಕಲ್ ಥ್ರಿಲ್ಲರ್ 2017ರ ಡಿಸೆಂಬರ್ 22ರಂದು ಅಮೆರಿಕದಲ್ಲಿ ತೆರೆಕಂಡಿತ್ತು. ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ ನಾಳೆ (ಜ.12) ಜಗತ್ತಿನಾದ್ಯಂತ ತೆರೆಕಾಣುತ್ತಿದೆ.

ಜುರಾಸಿಕ್‌ ಸರಣಿ ಸಿನಿಮಾ ಖ್ಯಾತಿಯ ಸ್ಟೀವನ್‌ ಸ್ಪೀಲ್‌ಬರ್ಗ್‌ ‘ದಿ ಪೋಸ್ಟ್‌’ ಪೊಲಿಟಿಕಲ್ ಥ್ರಿಲ್ಲರ್‌ ಸಿನಿಮಾದೊಂದಿಗೆ ತೆರೆಗೆ ಮರಳಿದ್ದಾರೆ. 2017ರ ಡಿಸೆಂಬರ್‌ 22ರಂದು ಅಮೆರಿಕದಲ್ಲಿ ಬಿಡುಗಡೆಯಾಗಿದ್ದ ಚಿತ್ರ ವಿಶ್ಲೇಷಕರ ಗಮನ ಸೆಳೆದಿತ್ತು. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡಿದ ಸಿನಿಮಾ ನಾಳೆ (ಜ.12) ಜಗತ್ತಿನಾದ್ಯಂತ ತೆರೆಕಾಣುತ್ತಿದೆ.

ಇದು ಎಪ್ಪತ್ತರ ದಶಕದ ಸಂದರ್ಭದ ಕತೆ. ದಿ ವಾಶಿಂಗ್ಟನ್‌ ಪೋಸ್ಟ್‌ ಮತ್ತು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಗಳು ವಿಯೆಟ್ನಾಮ್‌ ಯುದ್ಧದಲ್ಲಿನ ಅಮೆರಿಕದ ಮೋಸದ ಯುದ್ಧನೀತಿ, ತಂತ್ರಗಳನ್ನು ಹೊರಗೆಡಹಿದ್ದವು. ಪತ್ರಿಕೆಗಳ ಈ ‘ಪೆಂಟಗಾನ್‌ ಪೇಪರ್ಸ್‌’ ಮಾಹಿತಿಯಿಂದ ಅಮೆರಿಕ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. ಈ ವಿವಾದವೇ ‘ದಿ ಪೋಸ್ಟ್‌’ನ ಕಥಾಹಂದರ. ಚಿತ್ರವೀಗ ಅಲ್ಲಿನ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಕಾಲಿವುಡ್‌ | ಪೊಂಗಲ್‌ ರಿಲೀಸ್‌ನಲ್ಲಿ ಸೂರ್ಯ, ವಿಕ್ರಂ ಮಧ್ಯೆ ಪೈಪೋಟಿ

ದಿ ವಾಶಿಂಗ್ಟನ್‌ ಪೋಸ್ಟ್‌ನ ಪ್ರಕಾಶಕಿ ಕ್ಯಾಥರಿನ್‌ ಗ್ರಹಾಂ ಅವರ ಪಾತ್ರದಲ್ಲಿ ಮೆರಿಲ್‌ ಸ್ಟ್ರೀಪ್‌ ಕಾಣಿಸಿಕೊಂಡಿದ್ದಾರೆ. ಅಗ ಪತ್ರಿಕೆ ಸಂಪಾದಕರಾಗಿದ್ದ ಬೆನ್‌ ಬ್ರ್ಯಾಡ್ಲೀ ಪಾತ್ರವನ್ನು ಟಾಮ್‌ ಹ್ಯಾಂಕ್ಸ್‌ ನಿರ್ವಹಿಸಿದ್ದಾರೆ. ಸರಾಹ್‌ ಪಾಲ್ಸನ್‌, ಟ್ರೇಸಿ ಲೆಟ್ಸ್, ಬ್ರಾಡ್ಲೇ ವೈಟ್‌ಫೋರ್ಡ್‌, ಬ್ರ್ಯೂಸ್‌ ಗ್ರೀನ್‌ವುಡ್‌ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ‌ ಚಿತ್ರವನ್ನು ಒಂಬತ್ತು ತಿಂಗಳಲ್ಲೇ ಚಿತ್ರಿಸಿರುವುದಾಗಿ ಹೇಳಿಕೊಂಡಿದ್ದಾರೆ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್‌ . ‘ಈಗ ನಾವಿರುವುದು ಫೇಕ್‌ನ್ಯೂಸ್‌ಗಳ ಕಾಲ. ಇದಕ್ಕೆ ನಾನು ಟ್ವೀಟ್‌ಗಳ ಮೂಲಕ ನನ್ನ ಅಸಮಾಧಾನ ವ್ಯಕ್ತಪಡಿಸಲಾರೆ, ಶೂಟ್‌ ಮಾಡ್ತೀನಿ! ನನ್ನ ಸಿನಿಮಾ ಇದನ್ನು ಹೊರಗೆಡಹಿದೆ’ ಎಂದಿದ್ದಾರೆ ಸ್ಟೀವನ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More