ಸೈಕಲಾಜಿಕಲ್‌ ಥ್ರಿಲ್ಲರ್‌ ‘ಜವ’ ಚಿತ್ರದಲ್ಲಿ ಉ‍ಷಾ ಉತ್ತುಪ್‌ ಗಾಯನ ಹೈಲೈಟ್‌

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ‘ಜವ’ ಕನ್ನಡ ಸಿನಿಮಾ ಮುಂದಿನ ವಾರ ತೆರೆಕಾಣಬೇಕಿತ್ತು. ಹೆಚ್ಚು ಚಿತ್ರಗಳಿರುವುದರಿಂದ ಈ ಸಿನಿಮಾ ಫೆಬ್ರವರಿ 2ಕ್ಕೆ ಮುಂದೂಡಲ್ಪಟ್ಟಿದೆ. ಉಷಾ ಉತ್ತುಪ್‌ ಹಾಡಿರುವ ಗೀತೆ ಕ್ಲಿಕ್ಕಾಗಿದ್ದು, ಮೊನ್ನೆ ಬಿಡುಗಡೆಯಾಗಿರುವ ಟ್ರೈಲರ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

ಖ್ಯಾತ ಗಾಯಕಿ ಉಷಾ ಉತ್ತುಪ್‌ ಹಾಡಿರುವ ‘ಜವ’ ಚಿತ್ರದ ‘ಆನಂದಂ ಅಂತ್ಯಾರಂಭಮ್‌’ ಹಾಡು ಭರ್ಜರಿಯಾಗಿ ಕ್ಲಿಕ್ಕಾಗಿದೆ. ಈ ಖುಷಿಯಲ್ಲಿರುವ ಚಿತ್ರತಂಡ ಮೊನ್ನೆ ಟ್ರೈಲರ್ ಬಿಡುಗಡೆ ಮಾಡಿದ್ದು, ಫೆಬ್ರವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ. ಅಭಯ್ ಚಂದ್ರ ನಿರ್ದೇಶನದಲ್ಲಿ ತಯಾರಾಗಿರುವ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್‌.

ಮುಹೂರ್ತದ ದಿನದಿಂದಲೂ ಚಿತ್ರದ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿರುವ ನಿರ್ದೇಶಕ ಅಭಯ್‌, ಕತೆಯನ್ನು ಹೊರಗೆಡಹುವುದಿಲ್ಲ. ‘ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಜೀವಿತ ಅವಧಿಯಲ್ಲೇ ಅನುಭವಿಸಬೇಕು’ ಎನ್ನುವ ಒಂದು ಸಾಲಿನ ಕತೆಯ ಎಳೆಯನ್ನು ಅವರು ಬಿಚ್ಚಿಡುತ್ತಾರೆ. “ದಿಲೀಪ್‌ ರಾಜ್‌, ಸಾಯಿಕುಮಾರ್ ಮತ್ತು ಭವಾನಿ ಪ್ರಕಾಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ನಟಿ ಭವಾನಿ ಪ್ರಕಾಶ್‌ ಅವರಿಗೆ ಚಿತ್ರದಲ್ಲಿ ವಿಶಿಷ್ಟ ಪಾತ್ರವಿದ್ದು, ಇದು ವೃತ್ತಿಬದುಕಿನಲ್ಲೇ ಉತ್ತಮ ಪಾತ್ರಗಳಲ್ಲೊಂದು.” ಎನ್ನುತ್ತಾರವರು.

ಇದನ್ನೂ ಓದಿ : ಸ್ಮರಣೆ | ಕನ್ನಡದ ಹೊಸ ಅಲೆಯ ಸಿನಿಮಾಗಳ ‘ಕ್ಯಾಮರಾ ಕಣ್ಣು’ ಎಸ್‌ ರಾಮಚಂದ್ರ

ನಿರ್ದೇಶಕ ಅಭಯ್‌ಚಂದ್ರ ಅವರ ಸಹೋದರ ವಿನಯ್ ಚಂದ್ರ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಹಾಲಿವುಡ್‌ ಮಾದರಿಯಲ್ಲಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿರುವುದಾಗಿ ಹೇಳುತ್ತಾರವರು. "ಉಷಾ ಉತ್ತುಪ್‌ ಹಾಡಿರುವ ಗೀತೆ ನಮ್ಮ ಚಿತ್ರಕ್ಕೆ ಹೆಚ್ಚಿನ ಪ್ರಚಾರ ತಂದುಕೊಟ್ಟಿದೆ. ಅವರ ಧ್ವನಿ ಚಿತ್ರದ ಸನ್ನಿವೇಶಗಳಿಗೆ ಒಂದು ರೀತಿಯ ಶಕ್ತಿ ತುಂಬಿದೆ,” ಎನ್ನುವ ಖುಷಿ ಅವರದು. ಈ ಚಿತ್ರ ಬಿಡುಗಡೆಗೆ ಮುನ್ನವೇ ಅವರು ಐದಾರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಲು ಒಪ್ಪಿಕೊಂಡಿದ್ದಾರೆ. ವಚನ್‌ ಶೆಟ್ಟಿ ಮತ್ತು ವೀರೇಂದ್ರ ವಿದ್ಯಾವರ್ಥ್‌ ನಿರ್ಮಾಣದ ‘ಜವ’ ಸಿನಿಮಾ, ಕತೆಯ ಕಾರಣಕ್ಕೆ ಉದ್ಯಮದ ಗಮನ ಸೆಳೆದಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More