ಹಾರರ್‌ ಸಿನಿಮಾಗಳ ಸರಣಿಯಲ್ಲಿ ತ್ರಿಷಾ ಕೈಹಿಡಿಯುವುದೇ ‘ಮೋಹಿನಿ’?

ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆ ನಟಿ ನಯನತಾರಾ ಹಾರರ್‌ ಸಿನಿಮಾಗಳತ್ತ ಹೊರಳಿದರು. ಈ ನಾಯಕಿಪ್ರಧಾನ ಸಿನಿಮಾಗಳು ಅವರಿಗೆ ಹೊಸತೊಂದು ಇಮೇಜು ಸೃಷ್ಟಿಸಿಕೊಟ್ಟವು. ಅದೇ ಹಾದಿಯಲ್ಲಿ ಯಶಸ್ಸು ಕಂಡ ತ್ರಿಷಾರ ‘ಮೋಹಿನಿ’ ಚಿತ್ರ ತೆರೆಗೆ ಸಿದ್ಧವಾಗಿದೆ

ದಕ್ಷಿಣ ಭಾರತದ ನಟಿ ತ್ರಿಷಾ ಬೆಳ್ಳಿತೆರೆಗೆ ಕಾಲಿಟ್ಟು ಒಂದೂವರೆ ದಶಕವೇ ಆಯ್ತು. ತಮಿಳು, ತೆಲುಗು ಮತ್ತು ಮಲಯಾಳಂನ ದೊಡ್ಡ ಹೀರೋಗಳೊಂದಿಗೆ ಅವರು ನಟಿಸಿದರು. 2015ರಿಂದೀಚೆಗೆ ಅವರ ವೃತ್ತಿಬದುಕಿನಲ್ಲಿ ದೊಡ್ಡ ಬೆಳವಣಿಗೆಗಳೇ ಕಾಣಿಸಲಿಲ್ಲ. ಹೊಸ ನಟಿಯರ ಪೈಪೋಟಿ ಎದುರಿಸುವಲ್ಲಿ ವಿಫಲರಾದ ಅವರು ಮಂಕಾಗಿದ್ದರು. ಆಗ ಅವರ ಕೈಹಿಡಿದದ್ದು ಹಾರರ್‌ ಸಿನಿಮಾಗಳು.

‘ಅರನ್‌ಮನೈ2’ ಮತ್ತು ‘ಮಾಯಾ’ ಸಿನಿಮಾಗಳ ನಂತರ ಅವರೀಗ ‘ಮೋಹಿನಿ’ ಚಿತ್ರದೊಂದಿಗೆ ತೆರೆಗೆ ಬರಲು ಸಜ್ಜಾಗಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ. "ಹಾರರ್‌-ಥ್ರಿಲ್ಲರ್‌ ಸಿನಿಮಾಗಳಲ್ಲಿ ಕತೆಯೇ ಮುಖ್ಯ. ನಾಯಕಿಪ್ರಧಾನ ಸಿನಿಮಾಗಳು ನಟಿಯರ ಸಿನಿಮಾ ಕೆರಿಯರ್‌ಗೆ ಬ್ರೇಕ್‌ ಕೊಡುತ್ತವೆ. ನಾನು ಹಾರರ್‌ಗೆ ಋಣಿ,” ಎನ್ನುತ್ತಾರೆ ತ್ರಿಷಾ.

ಇದನ್ನೂ ಓದಿ : ಕಾಲಿವುಡ್‌ | ಪೊಂಗಲ್‌ ರಿಲೀಸ್‌ನಲ್ಲಿ ಸೂರ್ಯ, ವಿಕ್ರಂ ಮಧ್ಯೆ ಪೈಪೋಟಿ

ಸುಂದರ್‌ ಸಿ ನಿರ್ದೇಶನದ ‘ಅರನ್‌ಮನೈ 2’ ತಮಿಳು ಸಿನಿಮಾ ತ್ರಿಷಾ ವೃತ್ತಿಬದುಕಿಗೆ ತಿರುವಾಯ್ತು. 2014ರಲ್ಲಿ ತೆರೆಕಂಡ ‘ಅರನ್‌ಮನೈ’ ಸರಣಿ ಚಿತ್ರವಿದು. ನಾಯಕಿಪ್ರಧಾನ ಹಾರರ್‌-ಥ್ರಿಲ್ಲರ್‌ನಲ್ಲಿ ಅವರೇ ಹೀರೋ! ತ್ರಿಷಾ ಸಿನಿಮಾ ಬದುಕಿಗೆ ಮತ್ತೆ ಹುರುಪು ತುಂಬುವಲ್ಲಿ ಈ ಚಿತ್ರ ಒಳ್ಳೆಯ ವೇದಿಕೆಯಾಯ್ತು. ಇದಾದ ನಂತರ ಅವರ ‘ಮಾಯಾ’ ತೆಲುಗು-ತಮಿಳು ದ್ವಿಭಾಷಾ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಕಂಡಿತು. ಈಗ ‘ಮೋಹಿನಿ’ ಚಿತ್ರದೊಂದಿಗೆ ಮರಳುತ್ತಿರುವ ತ್ರಿಷಾ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೆನ್ಸಾರ್‌ಶಿಪ್‌ ಏಕೆ ಬೇಕು?: ಎಂ ಎಸ್ ಸತ್ಯು
ಯುಎಫ್‌ಓ-ಕ್ಯೂಬ್‌ ಮತ್ತು ನಿರ್ಮಾಪಕರ ಜಗಳ; ಆತಂಕದಲ್ಲಿ ಪ್ರದರ್ಶಕರು
ಚಿತ್ರೋತ್ಸವ | ‘ಬೆಟ್ಟದ ಹೂ’ ಪ್ರದರ್ಶನ, ನಟ ಪುನೀತ್‌ ರಾಜಕುಮಾರ್‌ ಜೊತೆ ಸಂವಾದ
Editor’s Pick More