ಸ್ಮರಣೆ | ಮೇರುನಟಿ ಪಂಢರೀಬಾಯಿ ಸಿನಿಮಾಗಳ ಹತ್ತು ವಿಡಿಯೋ ಹಾಡುಗಳು

ಕನ್ನಡ ಚಿತ್ರರಂಗದ ಮೊದಲ ಯಶಸ್ವೀ ನಾಯಕನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು ಪಂಢರೀಬಾಯಿ. ವಿವಿಧ ಭಾಷೆಗಳ ಏಳುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇಂದು (ಜ.29) ಅವರು ಅಗಲಿದ ದಿನ. ವಿಡಿಯೋ ಹಾಡುಗಳೊಂದಿಗೆ ಮೇರುನಟಿಯನ್ನು ಸ್ಮರಿಸೋಣ

ದಕ್ಷಿಣ ಭಾರತದ ಐವತ್ತು, ಅರವತ್ತರ ದಶಕಗಳ ಜನಪ್ರಿಯ ತಾರೆ ಪಂಢರೀಬಾಯಿ. ‘ವಾಣಿ’ (1943) ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿಯ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ. ದಕ್ಷಿಣದ ಖ್ಯಾತ ನಾಯಕನಟರಾದ ರಾಜಕುಮಾರ್, ಎಂ ಜಿ ರಾಮಚಂದ್ರನ್‌, ಶಿವಾಜಿ ಗಣೇಶನ್‌ ಅವರಿಗೆ ನಾಯಕಿಯಾಗಿ ಮಾತ್ರವಲ್ಲದೆ ತಾಯಿಯಾಗಿಯೂ ಪಂಢರೀಬಾಯಿ ನಟಿಸಿದ್ದಾರೆ. ರಾಜಕುಮಾರ್ (ಬೇಡರ ಕಣ್ಣಪ್ಪ) ಮತ್ತು ಶಿವಾಜಿ ಗಣೇಶನ್‌ (ಪರಾಶಕ್ತಿ) ನಾಯಕರಾಗಿ ಪದಾರ್ಪಣೆ ಮಾಡಿದ ಚಿತ್ರಗಳಲ್ಲಿ ಅವರು ನಾಯಕಿ.

ನಾಯಕಿ ಪಾತ್ರಗಳ ನಂತರ ಪೋಷಕ ಪಾತ್ರಗಳಲ್ಲಿ ಅವರು ಹೆಚ್ಚು ಜನಪ್ರಿಯತೆ ಗಳಿಸಿದರು. ಪೋಷಕರಾಗಿ ಅಶ್ವಥ್ ಮತ್ತು ಪಂಢರೀಬಾಯಿ ಜೋಡಿ ಬಹುಜನಪ್ರಿಯ. ಅತಿ ಹೆಚ್ಚು ಸಿನಿಮಾಗಳಲ್ಲಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಂಡು ‘ಸ್ಯಾಂಡಲ್‌ವುಡ್‌ನ ಅಮ್ಮ’ನೆಂದೇ ಕರೆಸಿಕೊಂಡಿದ್ದಾರೆ. ‘ಶ್ರೀ ಕೃಷ್ಣ ನಾಟಕ ಸಭಾ’ ರಂಗತಂಡ ಕಟ್ಟಿ, ರಾಜ್ಯದ ಹಲವೆಡೆ ನಾಟಕಗಳನ್ನು ಪ್ರದರ್ಶಿಸಿದರು. ನಟಿ, ಚಿತ್ರನಿರ್ಮಾಪಕಿ ಪಂಢರೀಬಾಯಿ (18: 09: 1928-29: 01: 2003) ಅವರಿಗೆ ಹಲವು ಗೌರವಗಳು ಸಂದಿವೆ. ಅವರ ಸಿನಿಮಾಗಳ ಆಯ್ದ ಹತ್ತು ವಿಡಿಯೋಗಳು ಇಲ್ಲಿವೆ.

ಗೀತೆ: ನಲಿಯುವ ಬಾ ಇನಿಯಾ | ಸಿನಿಮಾ: ಬೇಡರ ಕಣ್ಣಪ್ಪ (1954) | ಸಂಗೀತ: ಅರ್ ಸುದರ್ಶನಂ | ಸಾಹಿತ್ಯ: ಎಸ್ ನಂಜಪ್ಪ | ಗಾಯನ: ಟಿ ಎಸ್‌ ಭಗವತಿ | ನಾಯಕ: ರಾಜಕುಮಾರ್‌

ಗೀತೆ: ಬಂಗಾರ ಬೊಂಬೆಗಳೆ | ಸಿನಿಮಾ: ಶ್ರೀ ಬಾಲನಾಗಮ್ಮ (1966) | ಸಂಗೀತ: ಎಸ್‌ ರಾಜೇಶ್ವರ ರಾವ್‌ | ಸಾಹಿತ್ಯ: ಚಿ ಉದಯಶಂಕರ್ | ಗಾಯನ: ಎಲ್ ಆರ್ ಈಶ್ವರಿ

ಗೀತೆ: ಚಂದಮಾಮ ಬಂದನಮ್ಮ | ಸಿನಿಮಾ: ಪ್ರತಿಜ್ಞೆ (1964) | ಸಂಗೀತ: ಎಸ್ ಹನುಮಂತ ರಾವ್‌ | ಸಾಹಿತ್ಯ: ಚಿ ಸದಾಶಿವಯ್ಯ

ಗೀತೆ: ಹೇ ಚಂದ್ರಚೂಡ | ಸಿನಿಮಾ: ಸತ್ಯಹರಿಶ್ಚಂದ್ರ (1965) | ಸಂಗೀತ: ಪೆಂಡ್ಯಾಲ ನಾಗೇಶ್ವರ ರಾವ್‌ | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಗಾಯನ: ಘಂಟಸಾಲ, ಪಿ ಲೀಲಾ | ನಾಯಕ: ರಾಜಕುಮಾರ್‌

ಗೀತೆ: ಹೇ ಶೇಷಶಯನ ನಾರಾಯಣ | ಸಿನಿಮಾ: ಚಂದ್ರಹಾಸ (1965) | ಸಂಗೀತ: ಎಸ್‌ ಹನುಮಂತ ರಾವ್‌ | ಸಾಹಿತ್ಯ: ಚಿ ಸದಾಶಿವಯ್ಯ | ಗಾಯನ: ಪಿ ಲೀಲಾ

ಗೀತೆ: ಪ್ರೀತಿ ಹೊನಲೆ | ಸಿನಿಮಾ: ನವಜೀವನ (1964) | ಸಂಗೀತ: ರಾಜನ್ ನಾಗೇಂದ್ರ | ಸಾಹಿತ್ಯ: ಸೋರಟ್‌ ಅಶ್ವಥ್‌ | ಗಾಯನ: ಪಿ ಸುಶೀಲ

ಗೀತೆ: ಆದಿ ದೇವ ಆದಿ ಮೂಲ | ಸಿನಿಮಾ: ಮಹಾಸತಿ ಅನಸೂಯ (1965) | ಸಂಗೀತ: ಎಸ್ ಹನುಮಂತ ರಾವ್‌ | ಸಾಹಿತ್ಯ: ಚಿ ಉದಯಶಂಕರ್‌ | ಗಾಯನ: ಪಿ ಬಿ ಶ್ರೀನಿವಾಸ್‌, ಎಲ್‌ ಆರ್ ಈಶ್ವರಿ

ಗೀತೆ: ಸಕಲ ಲೋಕಾರಾಧ್ಯ | ಸಿನಿಮಾ: ಕನ್ಯಕಾಪರಮೇಶ್ವರಿ ಕಥೆ (1966) | ಸಂಗೀತ: ರಾಜನ್ ನಾಗೇಂದ್ರ | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಗಾಯನ: ಪಿ ಬಿ ಶ್ರೀನಿವಾಸ್‌

ಗೀತೆ: ಅಮ್ಮ ಅಮ್ಮ | ಸಿನಿಮಾ: ಭಲೇ ಜೋಡಿ (1970) | ಸಂಗೀತ: ಆರ್‌ ರತ್ನ | ಸಾಹಿತ್ಯ: ಚಿ ಉದಯಶಂಕರ್‌ | ಗಾಯನ: ಪಿ ಬಿ ಶ್ರೀನಿವಾಸ್‌

ಗೀತೆ: ಅಮ್ಮ ನೀನು ನಮಗಾಗಿ | ಸಿನಿಮಾ: ಕೆರಳಿದ ಸಿಂಹ (1981) | ಸಂಗೀತ: ಚೆನ್ನಪಿಲ್ಲ ಸತ್ಯಂ | ಸಾಹಿತ್ಯ: ಚಿ ಉದಯಶಂಕರ್‌ | ಗಾಯನ: ರಾಜಕುಮಾರ್, ಪಿ ಬಿ ಶ್ರೀನಿವಾಸ್‌

ಇದನ್ನೂ ಓದಿ : ಪದ್ಮಶ್ರೀ ವಿಶೇಷ | ದೊಡ್ಡರಂಗೇಗೌಡ ರಚನೆಯ ಜನಪ್ರಿಯ ಸಿನಿಮಾ ಹಾಡುಗಳು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More