ತುಂಟ ನೋಟದಿಂದ ಸಂಚಲನ ಸೃಷ್ಟಿಸಿದ ಪ್ರಿಯಾ ಹೆಸರಲ್ಲಿ ನೂರಾರು ಫೇಕ್‌ ಅಕೌಂಟ್!

ಒಂದು ತುಂಟ ನೋಟದಲ್ಲೇ ಸಂಚಲನ ಸೃಷ್ಟಿಸಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ಭರ್ಜರಿ ಸುದ್ದಿಯಲ್ಲಿದ್ದಾರೆ. ಈ ಜನಪ್ರಿಯತೆ ಅವರಿಗೆ ಬೇರೆ ರೀತಿಯ ಸಂಕಷ್ಟಗಳನ್ನೂ ತಂದೊಡ್ಡಿದೆ. ಅವರ ಹೆಸರಿನಲ್ಲೀಗ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಫೇಕ್‌ ಅಕೌಂಟ್‌ಗಳು ಸೃಷ್ಟಿಯಾಗುತ್ತಿವೆ

ಪ್ರೇಮಿಗಳ ದಿನದ ಸಂದರ್ಭಕ್ಕೆ ಸರಿಯಾಗಿ ಹರಿಬಿಟ್ಟಿರುವ ಪ್ರಿಯಾ ವಾರಿಯರ್‌ ವಿಡಿಯೋ ಕ್ಲಿಪಿಂಗ್‌ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ. ಒಂದೇ ದಿನದಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ‘ನ್ಯಾಷನಲ್ ಕ್ರಷ್‌’ ಅಗಿದ್ದಾರೆ! ಅವರ ಹೆಸರಿನಲ್ಲೀಗ ನೂರಾರು ಫೇಕ್‌ ಅಕೌಂಟ್‌ಗಳು ಸೃಷ್ಟಿಯಾಗಿವೆ. ಇದು ಪ್ರಿಯಾಗೆ ತಲೆನೋವಾಗಿದ್ದು, ಆಕೆಗೆ ತಮ್ಮ ಅಫಿಷಿಯಲ್ ಅಕೌಂಟ್‌ಗಳ ಬಗ್ಗೆ ಸ್ಪಷ್ಟನೆ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಒರು ಅಡಾರ್‌ ಲವ್‌’ ಮಲಯಾಳಂ ಚಿತ್ರದ ಹಾಡು ಮೊನ್ನೆ ರಿಲೀಸ್ ಆಗಿತ್ತು. ಈ ಹಾಡಿನಲ್ಲಿನ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ಲುಕ್‌, ಎಕ್ಸ್‌ಪ್ರೆಶನ್‌ಗೆ ಯುವಪೀಳಿಗೆ ಮರುಳಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕ್ರೇಜ್‌ ಸೃಷ್ಟಿಸಿರುವ ಪ್ರಿಯಾ ಹೆಸರಿನಲ್ಲಿ ಫೇಕ್‌ ಅಕೌಂಟ್‌ಗಳು ಸೃಷ್ಟಿಯಾಗುತ್ತಿವೆ. ಇದು ಅಭಿಮಾನದ ಪರಾಕಾಷ್ಠೆ ಎಂದು ಹೇಳಿಕೊಂಡು ಖುಷಿಯಾಗಿರುವ ಪ್ರಿಯಾ, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಮತ್ತೊಂದೆಡೆ, ಫೇಕ್‌ ಅಕೌಂಟ್‌ಗಳು ಅವರಿಗೆ ಆತಂಕ ಸೃಷ್ಟಿಸಿವೆ.

Thank you for all the love and support💙

A post shared by priya prakash varrier (@priya.p.varrier) on

ಟ್ರೆಂಡಿಂಗ್‌ ವಿಡಿಯೋ | ಪ್ರಿಯಾ ಪ್ರಕಾಶ್‌ ವಾರಿಯರ್‌ ಹುಬ್ಬೇರಿಸುವ, ಕಣ್ಣು ಹೊಡೆಯುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿನ್ನೆಯಿಂದ ಕಂಪೈಲೇಷನ್‌ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿವೆ. ತಮ್ಮ ನೆಚ್ಚಿನ ಸಿನಿಮಾ, ಸೀರಿಯಲ್ ಹೀರೋಗಳ ವಿಡಿಯೋ ಕ್ಲಿಪಿಂಗ್‌ಗಳ ಜೊತೆ ಪ್ರಿಯಾ ಎಕ್ಸ್‌ಪ್ರೆಷನ್ಸ್‌ ಜೋಡಿಸಿ ಹಲವರು ಕ್ರಿಯಾಶೀಲತೆ ಮೆರೆಯುತ್ತಿದ್ದಾರೆ. ರಾಜಕೀಯ, ಕ್ರಿಕೆಟ್‌ ಸೇರಿದಂತೆ ಇತರ ಕ್ಷೇತ್ರಗಳ ಖ್ಯಾತನಾಮರ ಎಕ್ಸ್‌ಪ್ರೆಶನ್ಸ್‌ಗಳನ್ನೂ ಪ್ರಿಯಾ ಲುಕ್‌ಗೆ ಜೋಡಿಸಲಾಗುತ್ತದೆ! ಮಿಸ್ಟರ್‌ ಬೀನ್‌ ಕೂಡ ಈ ಕಂಪೈಲೇಷನ್ ವಿಡಿಯೋದಲ್ಲಿದ್ದಾನೆ

ಇದನ್ನೂ ಓದಿ : 35 MM | ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಕುರಿತು ಪಿ ಶೇಷಾದ್ರಿ ಮಾತು

ಹದಿನೆಂಟರ ಹರೆಯದ ಪ್ರಿಯಾ ವಾರಿಯರ್‌, ಕೇರಳದ ತ್ರಿಶೂರ್‌ನ ವಿಮಲಾ ಕಾಲೇಜ್‌ನ ಬಿಕಾಂ ವಿದ್ಯಾರ್ಥಿನಿ. ಮಾಡೆಲಿಂಗ್‌ ಮೂಲದ ಹುಡುಗಿ ‘ಒರು ಅಡಾರ್‌ ಲವ್‌’ ಮಲಯಾಳಂ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಹಾಡಿನ ದೃಶ್ಯವೇ ಈಗ ವೈರಲ್ ಅಗಿರುವುದು. ಇದೇ ಮಾ.3ಕ್ಕೆ ಸಿನಿಮಾ ತೆರೆಕಾಣುತ್ತಿದೆ. ಈ ಚಿತ್ರದ ಬಿಡುಗಡೆಗೆ ಮುನ್ನವೇ ಪ್ರಿಯಾಗೆ ಮತ್ತೊಂದು ಮಲಯಾಳಂ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅವರ ವೈರಲ್‌ ವಿಡಿಯೋ ಮತ್ತಷ್ಟು ಅವಕಾಶಗಳನ್ನು ತಂದುಕೊಡುವುದರಲ್ಲಿ ಅಚ್ಚರಿಯೇನಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More