‘ಅರ್ಜುನ್‌ ರೆಡ್ಡಿ’ ತಮಿಳು ರಿಮೇಕ್‌ಗೆ ನಟಿ ಗೌತಮಿ ಪುತ್ರಿ ಸುಬ್ಬುಲಕ್ಷ್ಮಿ ಹಿರೋಯಿನ್‌

ತೆಲುಗು ಸೂಪರ್ ಹಿಟ್‌ ಸಿನಿಮಾ ‘ಅರ್ಜುನ್‌ ರೆಡ್ಡಿ’ ತಮಿಳು ರಿಮೇಕ್‌ ‘ವರ್ಮಾ’ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ತಮಿಳು ನಟ ವಿಕ್ರಂ ಪುತ್ರ ಧ್ರುವ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅವರಿಗೆ ನಾಯಕಿಯಾಗಿ ಗೌತಮಿ ಪುತ್ರಿ ಸುಬ್ಬುಲಕ್ಷ್ಮಿ ಆಯ್ಕೆಯಾಗಿದ್ದಾರೆ

ಕಳೆದ ವರ್ಷದ ಸೂಪರ್‌ಹಿಟ್‌ ‘ಅರ್ಜುನ್‌ ರೆಡ್ಡಿ’ ತೆಲುಗು ಸಿನಿಮಾ ‘ವರ್ಮಾ’ ಶೀರ್ಷಿಕೆಯಡಿ ತಮಿಳಿನಲ್ಲಿ ರೀಮೇಕಾಗುತ್ತಿದೆ. ಖ್ಯಾತ ನಿರ್ದೇಶಕ ಬಾಲಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದೊಂದಿಗೆ, ಕಾಲಿವುಡ್ ನಟ ವಿಕ್ರಂ ಪುತ್ರ ಧ್ರುವ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಸುಬ್ಬುಲಕ್ಷ್ಮಿ ಆಯ್ಕೆಯಾಗಿರುವುದು ಹೊಸ ಬೆಳವಣಿಗೆ. ದಕ್ಷಿಣದ ಖ್ಯಾತ ನಟಿ ಗೌತಮಿ ಮತ್ತು ಸಂದೀಪ್ ಭಾಟಿಯಾ ದಾಂಪತ್ಯಕ್ಕೆ ಜನಿಸಿದವರು ಸುಬ್ಬುಲಕ್ಷ್ಮಿ.

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದ್ದ ‘ಅರ್ಜುನ್‌ ರೆಡ್ಡಿ’ ವಿಶಿಷ್ಟ ಕಥಾವಸ್ತು ಮತ್ತು ಭಿನ್ನ ನಿರೂಪಣೆಯಿಂದಾಗಿ ಗಮನ ಸೆಳೆದಿತ್ತು. ಚಿತ್ರದಲ್ಲಿನ ಅತಿಯಾದ ಚುಂಬನ ದೃಶ್ಯಗಳ ಕುರಿತಾಗಿ ಆಕ್ಷೇಪಗಳೂ ಕೇಳಿಬಂದಿದ್ದವು. ಇಂತಹ ವಿವಾದಗಳು ಕೂಡ ಚಿತ್ರಕ್ಕೆ ಪ್ರಚಾರ ಕೊಟ್ಟದ್ದು ಹೌದು. ಆಂಧ್ರ, ತೆಲಂಗಾಣ ಮಾತ್ರವಲ್ಲದೆ ದಕ್ಷಿಣ ಭಾರತದ ಇತರೆಡೆ ಮತ್ತು ಉತ್ತರ ಭಾರತದಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ ತಮಿಳಿನಲ್ಲಿ ಬಾಲಾ ಈ ಚಿತ್ರವನ್ನು ರೀಮೇಕ್ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಕಾಲಿವುಡ್‌ನ ಖ್ಯಾತ ನಟ ವಿಕ್ರಂ ಪುತ್ರ ಧ್ರುವ ‘ವರ್ಮಾ’ ಚಿತ್ರದೊಂದಿಗೆ ಹೀರೋ ಆಗುತ್ತಿದ್ದಾರೆ.

ಇದನ್ನೂ ಓದಿ : ಧೂಮಪಾನ ಜಾಹೀರಾತಿನ ಪುಟಾಣಿ ಈಗ ‘ಕಾಜಲ್‌’ ಕನ್ನಡ ಚಿತ್ರದ ಹಿರೋಯಿನ್‌!

‘ಅರ್ಜುನ್ ರೆಡ್ಡಿ’ ಸಿನಿಮಾ ನಟ ವಿಜಯ್ ದೇವರಕೊಂಡ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಚಿತ್ರದ ನಾಯಕಿಯಾಗಿ ನಟಿಸಿದ್ದ ಶಾಲಿನಿ ಪಾಂಡೆ ಅವರಿಗೀಗ ಕೈತುಂಬಾ ಅವಕಾಶಗಳಿವೆ. ತಮಿಳು ರೀಮೇಕ್‌ನಲ್ಲಿ ಮೂಲ ಚಿತ್ರದ ನಟಿ ಶಾಲಿನಿ ಪಾಂಡೆ ಅವರೇ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಗೌತಮಿ ಪುತ್ರಿ ಸುಬ್ಬುಲಕ್ಷ್ಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೊಡ್ಡ ಚಿತ್ರದೊಂದಿಗೆ ಪುತ್ರಿಯನ್ನು ಬೆಳ್ಳಿತೆರೆಗೆ ಪರಿಚಯಿಸಬೇಕೆನ್ನುವ ಗೌತಮಿ ಆಸೆಯೂ ಈಡೇರಿದೆ. ಇತ್ತೀಚೆಗಷ್ಟೇ ನಟ ಕಮಲ ಹಾಸನ್‌ ಅವರೊಂದಿಗಿನ ಲಿವ್‌-ಇನ್‌ ಸಂಬಂಧದಿಂದ ನಟಿ ಗೌತಮಿ ಹೊರಬಂದಿದ್ದರು. ಈಗ ನಟಿಯನ್ನು ಸಿನಿಮಾಗೆ ಪರಿಚಯಿಸುವ ಖುಷಿ ಅವರದಾಗಿದೆ. ಸುಬ್ಬುಲಕ್ಷ್ಮಿಗೆ ಇದು ಮೊದಲ ಸಿನಿಮಾ.

ಆಸ್ಕರ್‌ಗೆ ನಾಮನಿರ್ದೇಶನಗೊಂಡ ಅಸ್ಸಾಮಿ ಸಿನಿಮಾ ‘ವಿಲೇಜ್‌ ರಾಕ್‌ಸ್ಟಾರ್ಸ್‌’
ವಿಡಿಯೋ | ‘ಮಂಟೋ’ ಸಿನಿಮಾ ಕುರಿತು ನವಾಜುದ್ದೀನ್ ಸಿದ್ದಿಕಿ ಮಾತು
ಪ್ರತಿಭಟನೆಗೆ ಮಣಿದ ನಿರ್ದೇಶಕ ಕಶ್ಯಪ್‌; ‘ಮನ್‌ಮರ್ಝಿಯಾ’ ದೃಶ್ಯಗಳಿಗೆ ಕತ್ತರಿ
Editor’s Pick More