ವೈರಲ್ ಅಯ್ತು ಜರ್ಮನ್‌ನ ಜ್ಯೂಲಿಯನ್ ಹಾಡಿರುವ ‘ದೊಡ್ಮನೆ ಹುಡ್ಗ’ ಹಾಡು

ಜರ್ಮನ್‌ ಮೂಲದ ಜ್ಯೂಲಿಯನ್‌, ಸ್ಯಾಂಡಲ್‌ವುಡ್‌ ನಟ ಪುನೀತ್ ರಾಜಕುಮಾರ್ ಅಭಿಮಾನಿ. ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿ ‘ದೊಡ್ಮನೆ ಹುಡ್ಗ’ ಸಿನಿಮಾದ ಹಾಡು ಹಾಡಿದ್ದಾರೆ. ಪುನೀತ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿರುವ ಈ ಹಾಡು ವೈರಲ್‌ ಆಗಿದೆ

ಜರ್ಮನಿಯ ಯುವಕ ಜ್ಯೂಲಿಯನ್‌ ಹಾಡಿರುವ ‘ದೊಡ್ಮನೆ ಹುಡ್ಗ’ ಸಿನಿಮಾದ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿನ ‘ಯಾಕ್ಲ ಹುಡ್ಗ ಮೈಯಾಗ ಹೆಂಗೈತಿ..’ ಹುಬ್ಳಿ ಕನ್ನಡ ಧಾಟಿಯ ಹಾಡನ್ನು ಜ್ಯೂಲಿಯನ್‌ ನಟ ಪುನೀತ್ ರಾಜಕುಮಾರ್ ಅವರಿಗೋಸ್ಕರ ಹಾಡಿದ್ದಾರೆ. ಪುನೀತ್ ಇದನ್ನು ರೆಕಾರ್ಡ್ ಮಾಡಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಹಾಕಿಕೊಂಡು, ‘ಜರ್ಮನಿಯ ಜ್ಯೂಲಿಯನ್ ಅವರಿಗೆ ಕನ್ನಡದ ಮೇಲಿರುವ ಪ್ರೀತಿ, ಅಭಿಮಾನ ನೀವೇ ನೋಡಿ. ಕನ್ನಡ ಉಳಿಸಿ ಕನ್ನಡ ಬೆಳೆಸಿ’ ಎನ್ನುವ ಸಂದೇಶ ಹಾಕಿದ್ದಾರೆ.

ಜರ್ಮನಿಯ ಜ್ಯೂಲಿಯನ್‌ ಕಾರ್ಯನಿಮಿತ್ತ ಸದ್ಯ ಮೈಸೂರಿನ ಹುಣಸವಾಡಿಯಲ್ಲಿ ನೆಲೆಸಿದ್ದಾರೆ. ಕನ್ನಡ ಮಾತನಾಡುವುದನ್ನು ಕಲಿತಿರುವ ಅವರು ಕೆಲವು ಕನ್ನಡ ಸಿನಿಮಾ ಹಾಡುಗಳನ್ನೂ ಹಾಡಬಲ್ಲರು. ವಿಶೇಷವೆಂದರೆ ಅವರು ಪುನೀತ್ ರಾಜಕುಮಾರ್‌ ಅಭಿನಯದ ಸಿನಿಮಾಗಳನ್ನು ನೋಡಿದ್ದು, ಅವರನ್ನು ಭೇಟಿ ಮಾಡುವ ಆಸೆ ಹೊಂದಿದ್ದರು. ಮೈಸೂರಿನ ಪುನೀತ್‌ ಅಭಿಮಾನಿಗಳ ಮೂಲಕ ಬೆಂಗಳೂರಿನಲ್ಲಿ ಪುನೀತ್‌ ಅವರನ್ನು ಮೊನ್ನೆ ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಜ್ಯೂಲಿಯನ್ ಅವರನ್ನು ಮಾತನಾಡಿಸಿರುವ ಪುನೀತ್‌ ಅವರಿಂದ ತಮ್ಮ ಸಿನಿಮಾದ ಹಾಡನ್ನು ಹಾಡಿಸಿದ್ದಾರೆ.

ಕನ್ನಡ ಉಳಿಸೆ ಕನ್ನಡ ಬೆಳಿಸಿ

ಜೆರ್ಮನಿಯ Julien ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಅಭಿಮಾನ ನೀವೇ ನೋಡಿ, ಕನ್ನಡ ಉಳಿಸಿ ಕನ್ನಡ ಬೆಳಿಸಿ

Posted by Puneeth Rajkumar on Saturday, March 10, 2018

ಜ್ಯೂಲಿಯನ್ ತಮ್ಮನ್ನು ಪರಿಚಯಿಸಿಕೊಂಡ ನಂತರ ಪುನೀತ್‌, ‘ನನಗೋಸ್ಕರ ಹಾಡೊಂದನ್ನು ಹಾಡುತ್ತೀರಾ?’ ಎಂದು ಪ್ರಶ್ನಿಸುತ್ತಾರೆ. ಜ್ಯೂಲಿಯನ್‌, ‘ಯಾಕ್ಲ ಹುಡ್ಗ ಮೈಯಾಗ ಹೆಂಗೈತಿ.. ತ್ರಾಸ ಆಕ್ಕತಿ’ ಎಂದು ತಮ್ಮದೇ ಶೈಲಿಯಲ್ಲಿ ಹಾಡುತ್ತಾರೆ. ನಂತರ ಪುನೀತ್‌, ‘ನಿಮ್ಮನ್ನು ಭೇಟಿ ಮಾಡಿದ್ದು, ನೀವು ಕನ್ನಡ ಮಾತನಾಡಿದ್ದು ಖುಷಿ ಆಯ್ತು’ ಎಂದಾಗ ಜ್ಯೂಲಿಯನ್‌ ಕೂಡ ಪುನೀತ್ ಭೇಟಿಯನ್ನು ಸ್ಮರಿಸಿಕೊಳ್ಳುತ್ತಾರೆ. ಪುನೀತ್‌ ಶೇರ್ ಮಾಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More