ರೊಮ್ಯಾನ್ಸ್‌, ಕಾಮಿಡಿ ನಂತರ ಥ್ರಿಲ್ಲರ್ ಹಾದಿಯಲ್ಲಿ ರಮೇಶ್‌ ಅರವಿಂದ್

ನಟ ರಮೇಶ್‌ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸತೊಡಗಿದ್ದಾರೆ. ಈಗಾಗಲೇ ಎರಡು ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡಿರುವ ಅವರು, ಇಮ್ರಾನ್‌ ಸರ್ದಾರಿಯಾ ನಿರ್ದೇಶನದ ಮತ್ತೊಂದು ಥ್ರಿಲ್ಲರ್‌ನಲ್ಲಿ ಸಿಬಿಐ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜೂನ್‌ನಲ್ಲಿ ಸೆಟ್ಟೇರಲಿದೆ

“ಲವ್‌, ರೊಮ್ಯಾನ್ಸ್ ಸಿನಿಮಾಗಳ ನಂತರ ಒಂದಷ್ಟು ಕಾಮಿಡಿ ಸಿನಿಮಾಗಳಲ್ಲಿ ನಟಿಸಿದೆ. ಈಗ ಥ್ರಿಲ್ಲರ್‌ ಮಾದರಿಯಲ್ಲಿ ಅವಕಾಶಗಳು ಬರುತ್ತಿವೆ. ನನಗೇ ಅರಿವಿಲ್ಲದಂತಾಗುತ್ತಿರುವ ಬೆಳವಣಿಗೆಗಳಿವು,” ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ನಟ ರಮೇಶ್ ಅರವಿಂದ್‌. ಇಮ್ರಾನ್ ಸರ್ದಾರಿಯಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ನೂತನ ಥ್ರಿಲ್ಲರ್ ಸಿನಿಮಾದಲ್ಲಿ ರಮೇಶ್‌ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಕ್ವೀನ್‌’ ಹಿಂದಿ ಸಿನಿಮಾದ ರೀಮೇಕ್‌ಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ಅವರು, ಜೂನ್‌ನಿಂದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.

“ಹತ್ತು ವರ್ಷದ ಹಿಂದೆ ಆಕ್ಸಿಡೆಂಟ್‌ ಕನ್ನಡ ಚಿತ್ರದಲ್ಲಿ ನಟಿಸಿ, ನಿರ್ದೇಶಿಸಿದ್ದೆ. ಆನಂತರ ವೃತ್ತಿಬದುಕು ಹಾಸ್ಯಚಿತ್ರಗಳತ್ತ ಹೊರಳಿತು. ಕಳೆದ ವರ್ಷದಿಂದೀಚೆಗೆ ಥ್ರಿಲ್ಲರ್ ಜಾನರ್‌ನತ್ತ ಹೊರಳಿದ್ದೇನೆ. ‘ಭೈರಾದೇವಿ’ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಇನ್ನೂ ಹೆಸರಿಡದ ಮತ್ತೊಂದು ಪತ್ತೇದಾರಿ ಸಿನಿಮಾದಲ್ಲೂ ಇಂಥದ್ದೇ ಪಾತ್ರವಿದೆ. ಈಗ ಇಮ್ರಾನ್‌ ನಿರ್ದೇಶನದ ಥ್ರಿಲ್ಲರ್‌ ಸಿನಿಮಾ,” ಎನ್ನುವ ರಮೇಶ್‌, ಸದ್ಯ ‘ಕ್ವೀನ್‌’ ಹಿಂದಿ ರಿಮೇಕ್‌ಗಳ ನಿರ್ದೇಶನದ ಚಿತ್ರಗಳಿಗಾಗಿ ಲೊಕೇಶನ್‌ ಹುಡುಕಾಟದಲ್ಲಿದ್ದಾರೆ.

‘ಬಟರ್ ಫ್ಲೈ’ ಚಿತ್ರದ ತೆರೆಯ ಹಿಂದಿನ ದೃಶ್ಯಾವಳಿ

ಇದನ್ನೂ ಓದಿ : ವೈರಲ್ ಅಯ್ತು ಜರ್ಮನ್‌ನ ಜ್ಯೂಲಿಯನ್ ಹಾಡಿರುವ ‘ದೊಡ್ಮನೆ ಹುಡ್ಗ’ ಹಾಡು

ವಿಕಾಸ್ ಬೆಹ್ಲ್‌ ನಿರ್ದೇಶನದಲ್ಲಿ ಕಂಗನಾ ರನಾವತ್‌ ನಟಿಸಿದ್ದ ‘ಕ್ವೀನ್‌’ (2014) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದ್ದಲ್ಲದೆ, ವಿಶ್ಲೇಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ರಮೇಶ್‌ ‘ಕ್ವೀನ್‌’ ಸಿನಿಮಾದ ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಗಳ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕನ್ನಡ ಅವರಣಿಕೆ ‘ಬಟರ್ ಫ್ಲೈ’ನಲ್ಲಿ ಪರೂಲ್ ಯಾದವ್ ನಾಯಕಿಯಾಗಿ ನಟಿಸುತ್ತಿದ್ದಾರೆ. "ಈಗಾಗಲೇ ಮೂರೂ ಅವತರಣಿಕೆಗಳ ಶೇ.80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಮೈಸೂರು, ಊಟಿ ಸುತ್ತಮುತ್ತ ಲೊಕೇಶನ್‌ಗಳ ಹುಡುಕಾಟದಲ್ಲಿದ್ದೇವೆ,” ಎನ್ನುತ್ತಾರೆ ರಮೇಶ್‌. ಹಾಡಿನ ಚಿತ್ರೀಕರಣ ಮುಗಿಸಿದ ನಂತರ ಇಮ್ರಾನ್‌ ನಿರ್ದೇಶನದ ಥ್ರಿಲ್ಲರ್‌ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More