ಐದನೇ ದಿನಕ್ಕೆ ಶತಕೋಟಿ ಕ್ಲಬ್‌ಗೆ ಸೇರ್ಪಡೆಯಾದ ಟೈಗರ್‌ ಶ್ರಾಫ್‌ ‘ಬಾಘಿ 2’

ಟೈಗರ್ ಶ್ರಾಫ್‌ ಮತ್ತು ದಿಶಾ ಪಟಾನಿ ಅಭಿನಯದ ‘ಬಾಘಿ 2’ ಸಿನಿಮಾ ಶತಕೋಟಿ ಕ್ಲಬ್‌ಗೆ ಸೇರ್ಪಡೆಗೊಂಡಿದೆ. ಚಿತ್ರದ ಮತ್ತೊಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ ‘ಬಾಘಿ 3’ ಸರಣಿ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಅಹ್ಮದ್ ಖಾನ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ

ಅಹ್ಮದ್‌ ಖಾನ್‌ ನಿರ್ದೇಶನದಲ್ಲಿ ಟೈಗರ್ ಶ್ರಾಫ್ ನಟಿಸಿರುವ ‘ಬಾಘಿ 2’ ಹಿಂದಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಐದನೇ ದಿನಕ್ಕೆ ಚಿತ್ರ ನೂರು ಕೋಟಿ ವಹಿವಾಟು ದಾಖಲಿಸಿದ್ದು, ಬಾಲಿವುಡ್ ಬೆರಗಾಗಿದೆ. ಮೊದಲ ದಿನವೇ ಚಿತ್ರ 25.10 ಕೋಟಿ ರೂಪಾಯಿ ದಾಖಲೆ ಗಳಿಕೆಯೊಂದಿಗೆ ಮುನ್ನುಗ್ಗಿತ್ತು. ಇದೀಗ ಐದನೇ ದಿನದಲ್ಲಿ ಭಾರತದ ಮಾರುಕಟ್ಟೆಯಿಂದಲೇ ನೂರು ಕೋಟಿ ವಹಿವಾಟು ನಡೆಸಿದೆ. ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್‌, ಅನಿಲ್‌ ಕಪೂರ್, ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಹಲವರು ಟ್ವೀಟ್‌ಗಳೊಂದಿಗೆ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ‘ಬಾಘಿ 2’ ತಂಡ ಚಿತ್ರದ ಮತ್ತೊಂದು ರೊಮ್ಯಾಂಟಿಕ್‌ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿದ್ದು, ಪ್ರಚಾರಕ್ಕೆ ಇದು ನೆರವಾಗಿದೆ.

ಇದನ್ನೂ ಓದಿ : ನೆನಪು | ಆಧುನಿಕ ಯುವತಿ ಪಾತ್ರಗಳ ಬಾಲಿವುಡ್‌ ನಾಯಕಿ ಪರ್ವೀನ್‌ ಬಾಬಿ

‘ಬಾಘಿ 2’ ಗೆಲುವಿನೊಂದಿಗೆ ಆಕ್ಷನ್‌ ಸಿನಿಮಾಗಳಿಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಸಿಗುತ್ತದೆ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿನ ‘ಟೈಗರ್ ಜಿಂದಾ ಹೈ’ (ಸಲ್ಮಾನ್ ಖಾನ್‌), ‘ಸಿಂಗಂ ರಿಟರ್ನ್ಸ್‌’ (ಅಜಯ್ ದೇವಗನ್), ‘ರೌಡಿ ರಾಥೋಡ್‌’ (ಅಕ್ಷಯ್ ಕುಮಾರ್‌), ‘ದಂಗಲ್‌’ (ಅಮೀರ್ ಖಾನ್‌) ಸಿನಿಮಾಗಳು ಉತ್ತಮ ಓಪನಿಂಗ್‌ನಿಂದ ಗಮನ ಸೆಳೆದಿದ್ದವು. ಇದೀಗ ‘ಬಾಘಿ 2’ ಈ ಪಟ್ಟಿಗೆ ಸೇರ್ಪಡೆಯಾಗಿದೆ. ನಟ ಅಕ್ಷಯ್ ಕುಮಾರ್‌ ಅವರು ಟೈಗರ್‌ ಆಕ್ಷನ್‌ನಿಂದ ಪ್ರಭಾವಿತರಾಗಿ, “ಯುವನಟ ಟೈಗರ್‌ ಶ್ರಾಫ್‌ ಬಾಲಿವುಡ್‌ನ ಟೋನಿ ಜಾ,” ಎಂದು ಅವರನ್ನು ಥೈಲ್ಯಾಂಡ್‌ ನಟನಿಗೆ ಹೋಲಿಸಿದ್ದಾರೆ. ಚಿತ್ರದ ಯಶಸ್ಸಿನೊಂದಿಗೆ ‘ಬಾಘಿ 3’ ಸರಣಿ ಸಿನಿಮಾ ವಿಚಾರ ಚರ್ಚೆಗೆ ಬಂದಿದೆ. ಸರಣಿ ಚಿತ್ರವನ್ನು ಅಹ್ಮದ್ ಖಾನ್‌ ಅವರೇ ನಿರ್ದೇಶಿಸಲಿದ್ದು ಟೈಗರ್ ಶ್ರಾಫ್ ನಾಯಕನಾಗಿ ನಟಿಸಲಿದ್ದಾರೆ. ಇದು ‘ಬಾಘಿ 2’ ಚಿತ್ರದ ಮುಂದುವರಿದ ಚಿತ್ರಕಥೆಯಾಗಿರಲಿದೆ ಎನ್ನುವ ಸೂಚನೆ ಸಿಕ್ಕಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More