ವಿವಾದದ ಸುಳಿಯಲ್ಲಿ ಜಾನ್ ಅಬ್ರಹಾಂ ನಟನೆ, ನಿರ್ಮಾಣದ ಸಿನಿಮಾ ‘ಪರಮಾಣು’

ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಜಾನ್‌ ಅಬ್ರಹಾಂ ಅಭಿನಯದ ‘ಪರಮಾಣು’ ವಿವಾದಕ್ಕೆ ಸಲುಕಿದೆ. ಎರಡು ನಿರ್ಮಾಣ ಸಂಸ್ಥೆಗಳ ಮಧ್ಯೆಯ ಮನಸ್ತಾಪದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ನಟ, ನಿರ್ಮಾಪಕ ಜಾನ್‌ ಅಬ್ರಹಾಂ ಮೇಲೆ ಎಫ್‌ಐಆರ್ ದಾಖಲಾಗಿದೆ

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜಾನ್‌ ಅಬ್ರಹಾಂ ಅಭಿನಯದ ‘ಪರಮಾಣು’ ಹಿಂದಿ ಸಿನಿಮಾ ಕಳೆದ ವರ್ಷ ಡಿಸೆಂಬರ್‌ನಲ್ಲೇ ತೆರೆಕಾಣಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. 1998ರಲ್ಲಿ ಭಾರತ ಸರ್ಕಾರ ಪೋಕ್ರಾನ್‌ನಲ್ಲಿ ನಡೆಸಿದ ಪರಮಾಣು ಬಾಂಬ್‌ ಪರೀಕ್ಷಾರ್ಥ ಪ್ರಯೋಗದ ಘಟನೆ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಇದೀಗ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ವಿವಾದಕ್ಕೆ ಸಲುಕಿದೆ. ಹೀರೋ ಜಾನ್ ಅಬ್ರಹಾಂ ಈ ಚಿತ್ರದ ನಿರ್ಮಾಣದಲ್ಲೂ ಹಣ ತೊಡಗಿಸಿದ್ದಾರೆ. ‘ಪರಮಾಣು’ ನಿರ್ಮಾಪಕರೊಲ್ಲಬ್ಬರಾದ ಕ್ರಿಆರ್ಜ್‌ ಎಂಟರ್‌ಟೇನ್‌ಮೆಂಟ್‌ ಈಗ ಸಹನಿರ್ಮಾಪಕ, ನಟ ಜಾನ್‌ ಅಬ್ರಹಾಂ ವಿರುದ್ಧ ಆರೋಪಿಸಿದೆ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಅವರ ಮೇಲೆ ಎಫ್‌ಐಆರ್ ದಾಖಲಿಸಿದೆ. ‘ಪರಮಾಣು’ ವಿವಾದ ದೊಡ್ಡದಾಗಿ ಬೆಳೆದಿದ್ದು, ಚಿತ್ರ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಕ್ರಿಆರ್ಜ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ, ಮೋಸ, ಅಪನಂಬಿಕೆ, ಹಣದುರುಪಯೋಗ ಮತ್ತು ಕಾಪಿರೈಟ್‌ಗೆ ಸಂಬಂಧಿಸಿದಂತೆ ಜಾನ್‌ ಅಬ್ರಹಾಂ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಮತ್ತೊಂದೆಡೆ ಜಾನ್‌ ಅಬ್ರಹಾಂ ನಿರ್ಮಾಣ ಸಂಸ್ಥೆ ಕ್ರಿಆರ್ಜ್‌ ಆರೋಪವನ್ನು ಅಲ್ಲಗಳೆದಿದೆ. “ನಿರ್ಮಾಪಕರೊಲ್ಲಬ್ಬರಾದ ಅವರಿಂದ ನಮಗೆ ಸೂಕ್ತ ರೀತಿಯಲ್ಲಿ ಹಣ ಬರಲಿಲ್ಲ. ಅವರ ವ್ಯವಹಾರ ಪಾರದರ್ಶಕವಾಗಿರಲಿಲ್ಲ. ಇದರಿಂದಾಗಿ ನಮ್ಮ ಸಿನಿಮಾದ ಚಿತ್ರೀಕರಣಕ್ಕೆ ತೊಂದರೆಯಾಯ್ತು,” ಎಂದಿರುವ ಜಾನ್‌ ತಮ್ಮ ತೇಜೋವಧೆ ಮಾಡುತ್ತಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿ ಆರ್ಜ್ ಎಂಟರ್‌ಟೇನ್‌ಮೆಂಟ್‌, “ದಶಕಗಳಿಂದ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ನಮಗೆ ಜಾನ್ ಅಬ್ರಹಾಂ ನಿರ್ಮಾಣದ ಆರ್ಥಿಕತೆಯ ಪಾಠ ಹೇಳುವ ಅಗತ್ಯವಿಲ್ಲ. ನಮ್ಮ ಹಣ ದುರುಪಯೋಗವಾಗಿದೆ,” ಎಂದಿದೆ. ನಿರ್ಮಾಪಕರ ಮಧ್ಯೆಯ ಮನಸ್ತಾಪದಿಂದಾಗಿ ‘ಪರಮಾಣು’ ಕಲಾವಿದರು ಮತ್ತು ತಂತ್ರಜ್ಞರು ಅತಂತ್ರರಾಗಿದ್ದಾರೆ.

ಇದನ್ನೂ ಓದಿ : ನೆನಪು | ಆಧುನಿಕ ಯುವತಿ ಪಾತ್ರಗಳ ಬಾಲಿವುಡ್‌ ನಾಯಕಿ ಪರ್ವೀನ್‌ ಬಾಬಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More