ಪ್ರೇಕ್ಷಕರ ಬಗ್ಗೆ ಆಕ್ಷೇಪಾರ್ಹ ಮಾತು; ನಿರೂಪಕಿ ರ‍್ಯಾಪಿಡ್‌ ರಶ್ಮಿ ಕ್ಷಮೆ

ಪ್ರೇಕ್ಷಕರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ ಚಿತ್ರನಿರ್ದೇಶಕ ಅನೂಪ್‌ ಮತ್ತು ನಟ ನಿರೂಪ್‌ ನಿನ್ನೆ ಕ್ಷಮೆಯಾಚಿಸಿದ್ದರು. ಇಂದು ಅರ್‌ಜೆ ರ‍್ಯಾಪಿಡ್‌ ರಶ್ಮಿ ಫೇಸ್‌ಬುಕ್‌ನಲ್ಲಿ ತಮ್ಮ ಸಂದರ್ಶನದ ಬಗ್ಗೆ ಕೆಲವು ಸಮರ್ಥನೆಗಳನ್ನು ಕೊಡುವುದರ ಜೊತೆಗೆ ಆದ ತಪ್ಪಿಗೆ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ

ಚಿತ್ರನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ನಿರೂಪ್ ಭಂಡಾರಿ ಪ್ರೇಕ್ಷಕರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ಕ್ಷಮೆಯಾಚಿಸಿದ್ದಾಗಿದೆ. ಅವರಿಬ್ಬರೂ ಹೀಗೆ ಮಾತನಾಡಿದ್ದು ರ‍್ಯಾಪಿಡ್‌ ರಶ್ಮಿ ಅವರ ಯೂ ಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ. ಇವರಿಬ್ಬರ ಮಾತುಗಳಿಗೆ ಎಲ್ಲೆಡೆ ಆಕ್ರೋಷ ವ್ಯಕ್ತವಾಗಿತ್ತು. ನಿನ್ನೆ (ಏ 4) ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಬ್ಬರೂ ಕ್ಷಮೆಯಾಚಿಸಿ ಮತ್ತೊಮ್ಮೆ ತಪ್ಪಾಗದು ಎಂದಿದ್ದರು. ಈ ಪ್ರಕರಣದ ಬಗ್ಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು, ಸಂದರ್ಶಕಿ ರ‍್ಯಾಪಿಡ್‌ ರಶ್ಮಿ ಅವರ ಕುರಿತು ಕಿಡಿಕಾರಿದ್ದರು. ಮುಂದಿನ ದಿನಗಳಲ್ಲಿ ಸಿನಿಮಾ ಪ್ರಚಾರಕ್ಕೆ ಅವರಲ್ಲಿಗೆ ಹೋಗದಂತೆ ಕನ್ನಡ ಚಿತ್ರನಿರ್ಮಾಪಕರಿಗೆ ಅವರು ತಾಕೀತು ಮಾಡಿದ್ದರು.

ಇದನ್ನೂ ಓದಿ : ಆಕ್ಷೇಪಾರ್ಹ ಮಾತುಗಳಿಗೆ ಪ್ರೇಕ್ಷಕರ ಕ್ಷಮೆ ಯಾಚಿಸಿದ ಭಂಡಾರಿ ಸಹೋದರರು

ಇಂದು ರ‍್ಯಾಪಿಡ್‌ ರಶ್ಮಿ ತಮ್ಮ ಎಫ್‌ಬಿ ಪೇಜ್‌ನಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ತಮ್ಮಿಂದಾದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. “ಹನ್ನೊಂದು ವರ್ಷಗಳಿಂದ ನಟಿ, ನಿರೂಪಕಿಯಾಗಿ ಕನ್ನಡಿಗರಾದ ನೀವು ಬೆಳೆಸಿದ್ದೀರಿ. ನಾನು ಸಂದರ್ಶನದಲ್ಲಿ ಪ್ರಚೋದಾನಾತ್ಮಕ ಪ್ರಶ್ನೆಗಳನ್ನು ಕೇಳಿದ್ದೇನೆ, ಈ ಶೋಗಾಗಿ ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದೆಲ್ಲಾ ಹಲವಾರು ರೀತಿಯ ಕಾಮೆಂಟ್‌ಗಳು ಬಂದಿವೆ. ಅದೆಲ್ಲಾ ಸುಳ್ಳು. ಎಡಿಟೆಡ್‌ ವಿಡಿಯೋ ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಇದೆಲ್ಲಾ ಬೇಕೆಂದೇ ಆಗಿರೋದಲ್ಲ. ಎಡವಟ್ಟಾಗಿ ಊಹಿಸದೇ ತೆಗೆದುಕೊಂಡ ತಿರುವಿಗೆ ಕ್ಷಮೆ ಇರಲಿ. ಈ ಘಟನೆಯಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಜವಾಬ್ದಾರಿಯಿಂದ ಶೋ ನಡೆಸುತ್ತೇನೆ,” ಎಂದು ಬರೆದುಕೊಂಡಿರುವ ರಶ್ಮಿ ಎಫ್ಬಿಯಲ್ಲಿ ಸಂದರ್ಶನದ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ.

ಎಲ್ಲರಿಗು ನಮಸ್ಕಾರ - ರಾಜರಥ ವಿವಾದದ ಬಗ್ಗೆ ನನ್ನ ಉತ್ತರ ವನ್ನ ಎದುರು ನೋಡ್ತಿರೋರಿಗೆ ನನ್ನ ಆಲೋಚನೆಗಳು ಹೀಗೆ... ಈ ಸಮಯದಲ್ಲಿ ಕೆಲವರು ಏನು...

Posted by RJ Rapid Rashmi on Tuesday, April 3, 2018
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More