ಟ್ರೈಲರ್‌ | ಅಲಿಯಾ ವೃತ್ತಿಬದುಕಿಗೆ ಮತ್ತೊಂದು ತಿರುವಾಗಲಿದೆಯೇ ‘ರಾಝಿ’?

ಮೇಘನಾ ಗುಲ್ಜಾರ್‌ ನಿರ್ದೇಶನದಲ್ಲಿ ಅಲಿಯಾ ಭಟ್‌ ನಟಿಸಿರುವ ‘ರಾಝಿ’ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಈ ಪತ್ತೇದಾರಿ ಥ್ರಿಲ್ಲರ್‌ನಲ್ಲಿ ಅಲಿಯಾ ಪಾಕಿಸ್ತಾನಿ ಸೈನ್ಯದ ಅಧಿಕಾರಿಯನ್ನು ವಿವಾಹವಾಗುವ ಭಾರತೀಯ ಯುವತಿ. ಪ್ರೀತಿ, ಸೇಡು ಮತ್ತು ದೇಶಪ್ರೇಮ ಸಿನಿಮಾದ ವಸ್ತು

ಸದ್ದಿಲ್ಲದೆ ‘ರಾಝಿ’ ಚಿತ್ರೀಕರಣ ಪೂರ್ಣಗೊಳಿಸಿ ಇದೀಗ ಟ್ರೈಲರ್‌ನೊಂದಿಗೆ ಸದ್ದು ಮಾಡುತ್ತಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್‌. ಮೂರು ವರ್ಷಗಳ ಹಿಂದೆ ತೆರೆಕಂಡ ಅವರ ನಿರ್ದೇಶನದ ‘ತಲ್ವಾರ್‌’ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿತ್ತು. ಇದೀಗ ಅವರ ‘ರಾಝಿ’ ಕೂಡ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ತಂದೆಯ (ರಜತ್ ಕಪೂರ್‌) ಅಣತಿಯಂತೆ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಯನ್ನು (ವಿಕ್ಕಿ ಕೌಶಾಲ್‌) ವಿವಾಹವಾಗುವ ಸೆಹ್ಮತ್‌ ಆಗಿ ಅಲಿಯಾ ಭಟ್‌ ಪಾತ್ರಕ್ಕೆ ಭಿನ್ನ ಶೇಡ್‌ಗಳಿವೆ. ಪ್ರಿಯತಮೆ, ಪತ್ನಿ, ಪತ್ತೇಧಾರಿಣಿಯಾಗಿ ಅವರು ಗಮನ ಸೆಳೆಯುತ್ತಾರೆ. ಎರಡು ನಿಮಿಷಗಳ ಈ ವಿಡಿಯೋದಲ್ಲಿನ ವ್ಯತಿರಿಕ್ತ ಸನ್ನಿವೇಶಗಳಲ್ಲಿ ಕಾಣಿಸುವ ಅಲಿಯಾರನ್ನು ನೋಡಿದಾಗ ಆಕೆ ಅನುಭವಿ ನಟಿಯಂತೆ ಗೋಚರಿಸುತ್ತಾರೆ.

1971ರ ಭಾರತ-ಪಾಕಿಸ್ತಾನ‌ ಯುದ್ಧದ ಅವಧಿಯ ಕತೆ ಇದು. ಹರಿಂದರ್ ಸಿಕ್ಕಾ ಅವರ ‘ಕಾಲಿಂಗ್‌ ಸೆಹ್ಮತ್‌’ ಕೃತಿಯನ್ನು ಆಧರಿಸಿ ಮೇಘನಾ ಗುಲ್ಜಾರ್ ಸಿನಿಮಾ ಮಾಡಿದ್ದಾರೆ. ಪಂಜಾಬ್‌, ಜಮ್ಮು, ಕಾಶ್ಮೀರ ಮತ್ತು ಮುಂಬಯಿಯಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಕುತೂಹಲಕಾರಿ ಮಿಲಿಟರಿ ಸಂಗತಿಯ ಹಿನ್ನೆಲೆ, ವಿಶಿಷ್ಟ ತಿರುವುಗಳು ಮತ್ತು ಆಕರ್ಷಕ ಕಲಾಬಳಗದಿಂದಾಗಿ ಸಿನಿಮಾ ಭರವಸೆ ಮೂಡಿಸಿದೆ. ‘ದೇಶದ ಎದುರು ಯಾವುದೂ ಮುಖ್ಯವಲ್ಲ’ ಎನ್ನುವ ಸಂದೇಶದೊಂದಿಗೆ ನಟಿ ಅಲಿಯಾ ಟ್ವಿಟರ್‌ನಲ್ಲಿ ಟ್ರೈಲರ್ ಶೇರ್‌ ಮಾಡಿದ್ದಾರೆ. ಮತ್ತೊಂದೆಡೆ, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್‌ ಕೂಡ ತಮ್ಮ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರೆ, ಬಾಲಿವುಡ್‌ ತಾರೆಯರನೇಕರು ಟ್ರೈಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮೇ 11ಕ್ಕೆ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ : ಟೀಸರ್‌ | ಆರ್‌ಜಿವಿ-ನಾಗಾರ್ಜುನ ಜೋಡಿಯ ಆಕ್ಷನ್‌ ಡ್ರಾಮಾ ‘ಆಫೀಸರ್‌’ 

‘ರಾಝಿ’ ಸಿನಿಮಾ ಟ್ರೈಲರ್‌ ಮೆಚ್ಚಿ ಟ್ವೀಟ್ ಮಾಡಿರುವ ಬಾಲಿವುಡ್ ತಾರೆಯರ ಪಟ್ಟಿ ಕೆಳಗಿದೆ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More