ನೆನಪು | ಹಿಂದಿ ಚಿತ್ರರಂಗದ ಮೊಟ್ಟಮೊದಲ ಸ್ಟಾರ್ ಸಿಂಗರ್‌, ನಟ ಕೆ ಎಲ್‌ ಸೈಗಲ್‌

ಹಿಂದಿ ಸಿನಿಮಾ ಸಂಗೀತದ ಮೇರು ತಾರೆ ಕೆ ಎಲ್ ಸೈಗಲ್‌. 30, 40ರ ದಶಕಗಳ ಸಿನಿಮಾಗಳಿಗೆ ಹಾಡಿದ ಅವರು ಆ ನಂತರದ ಗಾಯಕ-ಗಾಯಕಿಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಇಂದು ಸೈಗಲ್‌ (11/04/1904 - 18/01/1947) ಜನ್ಮದಿನ. ಅವರ ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ.

ಕುಂದನ್ ಲಾಲ್ ಸೈಗಲ್‌ ಹಿಂದಿ ಸಿನಿಮಾ ಜಗತ್ತಿನದಲ್ಲಿ ಕೆ ಎಲ್ ಸೈಗಲ್ ಎಂದೇ ಹೆಸರಾಗಿದ್ದಾರೆ. ಹಿಂದಿ ಸಿನಿಮಾ ಕೊಲ್ಕೊತ್ತಾದಲ್ಲಿ ನೆಲೆ ನಿಂತಿದ್ದ ಮೂವತ್ತರ ದಶಕದಲ್ಲಿ ಸೈಗಲ್‌ ಸ್ಟಾರ್‌ ಹೀರೋ ಮತ್ತು ಗಾಯಕ ಎಂದು ಕರೆಸಿಕೊಂಡಿದ್ದರು. ‘ಕೊಲ್ಕತ್ತಾ ನ್ಯೂ ಥಿಯೇಟರ್ಸ್‌’ ಮಾಲೀಕ ಬಿ ಎನ್ ಸರ್ಕಾರ್ ಅವರು ಮೂವತ್ತರ ದಶಕದ ಆರಂಭದಲ್ಲಿ ಸೈಗಲ್‌ರನ್ನು ಗಾಯಕ, ನಟನಾಗಿ ಜನರಿಗೆ ಪರಿಚಯಿಸಿದರು. ‘ಯಹೂದಿ ಕಿ ಲಡ್ಕೀ’ (1933) ಚಿತ್ರದ ಯಶಸ್ಸಿನೊಂದಿಗೆ ಸೈಗಲ್‌ ಹಿಂದಿ ಚಿತ್ರರಂಗದ ಜನಪ್ರಿಯ ನಟ, ಗಾಯಕನಾದರು. ‘ಶೆಹನ್ಶಾ ಎ ಮ್ಯೂಸಿಕಿ’, ‘ಸಂಗೀತ್ ಸಾಮ್ರಾಟ್‌’ ಎಂದು ಕರೆಸಿಕೊಂಡಿದ್ದ ಕೆ ಎಲ್ ಸೈಗಲ್‌ ಹದಿನೈದು ವರ್ಷಗಳ ವೃತ್ತಿ ಬದುಕಿನಲ್ಲಿ 36 ಚಿತ್ರಗಳಲ್ಲಿ ನಟಿಸಿದ್ದಾರೆ. 185 ಗೀತೆಗಳನ್ನು ಹಾಡಿದ್ದಾರೆ. ಸೈಗಲ್ ಸಿನಿಮಾಗಳ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಗೀತೆ: ಏಕ್‌ ಬಂಗ್ಲಾ ಬನೆ ನ್ಯಾರಾ | ಸಿನಿಮಾ: ಪ್ರೆಸಿಡೆಂಟ್‌ (1937) | ಸಂಗೀತ: ಆರ್ ಸಿ ಬೊರಾಲ್‌ ಮತ್ತು ಪಂಕಜ್‌ ಮಲ್ಲಿಕ್‌

ಗೀತೆ: ಬಾಬುಲ್ ಮೊರಾ | ಸಿನಿಮಾ: ಸ್ಟ್ರೀಟ್ ಸಿಂಗರ್‌ (1938) | ಸಂಗೀತ: ಆರ್ ಸಿ ಬೊರಾಲ್‌

ಗೀತೆ: ದುಖಃ ಕೆ ಅಬ್‌ | ಸಿನಿಮಾ: ದೇವ್‌ದಾಸ್‌ (1935) | ಸಂಗೀತ: ತಿಮಿರ್ ಬರಾನ್‌, ಅರ್ ಸಿ ಬೊರಾಲ್‌, ಪಂಕಜ್ ಮಲ್ಲಿಕ್‌

ಗೀತೆ: ಜಬ್‌ ದಿಲ್ ಹಿ ಟೂಟ್‌ ಗಯಾ | ಸಿನಿಮಾ: ಷಹಜಹಾನ್‌ (1946) | ಸಂಗೀತ: ನೌಶಾದ್‌ ಅಲಿ

ಗೀತೆ: ಕಾತಿಬ್‌ ಏ ತಕ್ದೀರ್‌ | ಸಿನಿಮಾ: ಮೈ ಸಿಸ್ಟರ್‌ (1944) | ಸಂಗೀತ: ಪಂಕಜ್ ಮಲ್ಲಿಕ್‌

ಗೀತೆ: ಮೇ ಕ್ಯಾ ಜಾನೂ | ಸಿನಿಮಾ: ಜಿಂದಗಿ (1940) | ಸಂಗೀತ: ಪಂಕಜ್ ಮಲ್ಲಿಕ್‌

ಗೀತೆ: ಘಮ್‌ ದಿಯೆ ಮುಷ್ತಾಕಿಲ್‌ | ಸಿನಿಮಾ: ಷಹಜಹಾನ್‌ (1946) | ಸಂಗೀತ: ನೌಶಾದ್‌ ಅಲಿ

ಗೀತೆ: ಸೋ ಜಾ ರಾಜಕುಮಾರಿ | ಸಿನಿಮಾ: ಜಿಂದಗಿ (1940) | ಸಂಗೀತ: ಪಂಕಜ್ ಮಲ್ಲಿಕ್‌

ಗೀತೆ: ದುನಿಯಾ ರಂಗ್‌ | ಸಿನಿಮಾ: ಧರ್ತಿಮಾತಾ (1939) | ಸಂಗೀತ: ಪಂಕಜ್ ಮಲ್ಲಿಕ್‌ | ಸಹಗಾಯಕರು: ಕೆ ಸಿ ಡೇ, ಉಮಾ ಶಶಿ

ಗೀತೆ: ಬಲಮ್‌ ಆಯೇ | ಸಿನಿಮಾ: ದೇವ್‌ದಾಸ್‌ (1935) | ಸಂಗೀತ: ತಿಮಿರ್ ಬರಾನ್‌, ಅರ್ ಸಿ ಬೊರಾಲ್‌, ಪಂಕಜ್ ಮಲ್ಲಿಕ್‌

ಇದನ್ನೂ ಓದಿ : ಜನುಮದಿನ | ಬಹುಮುಖ ಪ್ರತಿಭೆಯ ಕಲಾವಿದೆ ರೋಹಿಣಿ ಹಟ್ಟಂಗಡಿ 
ಸೈಗಲ್‌ ಅವರಿಗೆ ಗೂಗಲ್‌ ಗೌರವ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More