ಟ್ರೈಲರ್‌ | ನಿರ್ದೇಶಕ ಪುರಿ ಜಗನ್ನಾಥ್‌ ಪುತ್ರ ಆಕಾಶ್‌ ತೆಲುಗು ಸಿನಿಮಾ ‘ಮೆಹಬೂಬ‌’

‘ಟೆಂಪರ್‌’ ಚಿತ್ರದ ನಂತರ ಪುರಿ ಜಗನ್ನಾಥ್ ನಿರ್ದೇಶನದ ಯಾವ ಸಿನಿಮಾಗಳೂ ಗೆದ್ದಿಲ್ಲ. ಇದೀಗ ಅವರು ‘ಮೆಹಬೂಬ’ ಚಿತ್ರದೊಂದಿಗೆ ಪುತ್ರ ಆಕಾಶ್‌ರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಹೆಣೆದ ಪ್ರೇಮಕತೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ

ಮೇಘನಾ ಗುಲ್ಜಾರ್ ನಿರ್ದೇಶನದ ‘ರಾಝಿ’ ಹಿಂದಿ ಸಿನಿಮಾದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. 1971ರ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯ ಪತ್ತೇದಾರಿ ಥ್ರಿಲ್ಲರ್ ಕಥಾನಕವದು. ಇದೀಗ ಬಿಡುಗಡೆಯಾಗಿರುವ ‘ಮೆಹಬೂಬ’ ತೆಲುಗು ಚಿತ್ರದ ಟ್ರೈಲರ್‌ ಕೂಡ 1971ರ ಯುದ್ಧದ ಹಿನ್ನೆಲೆಯಲ್ಲಿ ಹೇಳುವ ಪ್ರೇಮಕಥೆಯನ್ನು ಹೇಳುತ್ತಿದೆ. ಆಕರ್ಷಕ ಮೇಕಿಂಗ್‌ನಿಂದ ಹೆಸರು ಮಾಡಿರುವ ಪುರಿ ಜಗನ್ನಾಥ್‌ ಇಲ್ಲಿಯೂ ಆ ಸೂಚನೆ ನೀಡುತ್ತಾರೆ. ಈ ಚಿತ್ರಕ್ಕಾಗಿ ಅವರು ಕೊಂಚ ಹೆಚ್ಚೇ ಕಾಳಜಿ ವಹಿಸಿರುವಂತಿದೆ. ‘ಮೆಹಬೂಬ’ದಲ್ಲಿ ಅವರು ತಮ್ಮ ಪುತ್ರ ಆಕಾಶ್‌ರನ್ನು ತೆರೆಗೆ ಪರಿಚಯಿಸುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯೂ ಅವರದೆ.

ಮೂರು ವರ್ಷಗಳ ಹಿಂದೆ ನಟ ಜ್ಯೂನಿಯರ್ ಎನ್‌ಟಿಆರ್‌ಗಾಗಿ ಪುರಿ ಜಗನ್ನಾಥ್‌ ನಿರ್ದೇಶಿಸಿದ್ದ ‘ಟೆಂಪರ್‌’ ಯಶಸ್ವಿಯಾಗಿತ್ತು. ಇದಾದ ನಂತರದ ಪುರಿಯವರ ಯಾವ ಚಿತ್ರವೂ ಗೆದ್ದಿಲ್ಲ. ಸತತ ಐದು ಸಿನಿಮಾಗಳ ಸೋಲುಗಳಿಂದ ಬಸವಳಿದಿರುವ ಅವರಿಗೆ ಈಗ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಅಲ್ಲದೆ ‘ಮೆಹಬೂಬ’ ಚಿತ್ರದಲ್ಲಿ ಅವರ ಪುತ್ರ ಆಕಾಶ್‌ ಭವಿಷ್ಯವೂ ಇದೆ. “ಸಿನಿಮಾದೆಡೆಗಿನ ಆಕಾಶ್‌ನ ಪ್ರೀತಿ ನಾನು ಈ ಮೆಹಬೂಬ ಮಾಡಲು ಕಾರಣ,” ಎನ್ನುತ್ತಾರೆ ಪುರಿ. ಆಕಾಶ್‌ಗೆ ನಾಯಕಿಯಾಗಿ ಕನ್ನಡದ ಹುಡುಗಿ ನೇಹಾ ಶೆಟ್ಟಿ ನಟಿಸಿದ್ದಾರೆ. ಸಂದೀಪ್ ಚೌಟ ಸಂಗೀತ ಸಂಯೋಜನೆಯಿರುವ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ತಯಾರಾಗಿದೆ. ಪಂಜಾಬ್‌, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಸಿನಿಮಾ ಚಿತ್ರಿಸಲಾಗಿದೆ. ಟ್ರೈಲರ್ ನಿರೀಕ್ಷೆ ಹುಟ್ಟುಹಾಕಿದ್ದು, ಮೇ 11ರಂದು ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ : ಅನಿತಾ ಭಟ್‌ ಮನದ ಮಾತು | ತಾಳ್ಮೆಯಿಂದ ಕಾದಿದ್ದಕ್ಕೆ ಉದ್ಯಮ ಕೈಹಿಡಿಯಿತು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More