ಪಿಬಿಎಸ್‌ ಸ್ಮರಣೆ | ಅವರ ಹಾಡು ಹಾಕುತ್ತಿದ್ದಂತೆ ಸ್ಟುಡಿಯೋದಲ್ಲಿದ್ದ ಹಾವು ಮಾಯ!

ಕನ್ನಡಿಗರು ಸದಾ ಸ್ಮರಿಸುವ ಗಾಯಕರಲ್ಲಿ ಒಬ್ಬರಾದ ಪಿ ಬಿ ಶ್ರೀನಿವಾಸ್ ಅಗಲಿ ಇಂದಿಗೆ (ಏ.14) ಐದು ವರ್ಷ. ‘ಭಕ್ತ ಕನಕದಾಸ’ ಸಿನಿಮಾ ಚಿತ್ರೀಕರಣ ಸಂದರ್ಭವೊಂದರ ಪಿಬಿಎಸ್‌-ರಾಜ್‌ ತಮಾಷೆ ಪ್ರಸಂಗವೊಂದನ್ನು ಹಿರಿಯ ಚಿತ್ರಸಾಹಿತಿ ಸಿ ವಿ ಶಿವಶಂಕರ್ ಇಲ್ಲಿ ಸ್ಮರಿಸಿಕೊಂಡಿದ್ದಾರೆ

ಮದರಾಸಿನ ಗೋಲ್ಡನ್ ಸ್ಟುಡಿಯೋದಲ್ಲಿ ‘ಭಕ್ತ ಕನಕದಾಸ’ ಸಿನಿಮಾ ಶೂಟಿಂಗ್ ಸಂದರ್ಭ. ಈ ಚಿತ್ರದ ಎಲ್ಲ ಹಾಡುಗಳ ಗಾಯಕ ಪಿ ಬಿ ಶ್ರೀನಿವಾಸ್. ಅಂದು ಕನಕನ ಪಾತ್ರದಲ್ಲಿ ರಾಜಕುಮಾರ್ ಅಭಿನಯಿಸುತ್ತಿದ್ದರು. ವ್ಯಾಸರಾಯರು ಹಾವಿಗೆ ಹಾಲೆರೆಯುವ ಸನ್ನಿವೇಶವನ್ನು ಚಿತ್ರಿಸಲಾಗುತ್ತಿತ್ತು. ಹಿನ್ನೆಲೆಯಲ್ಲಿ ಕನಕದಾಸ ‘ಈತನೀಗ ವಾಸುದೇವನೋ...’ ಗೀತೆ ಹಾಡಬೇಕು. ನಿರ್ದೇಶಕ ವೈ ಆರ್ ಸ್ವಾಮಿ ಈ ಸನ್ನಿವೇಶ ಚಿತ್ರಿಸುತ್ತಿದ್ದಂತೆ ಸ್ಟುಡಿಯೋದಲ್ಲಿ ಲೈಟ್ ಶಟ್‌ಡೌನ್‌ ಆಗೋಯ್ತು. ಕತ್ತಲಲ್ಲಿ ಹಾವು ತಪ್ಪಿಸಿಕೊಂಡಿತು! ಕಲಾವಿದರು ಹಾಗೂ ತಂತ್ರಜ್ಞರೆಲ್ಲರೂ ಹಾವಿನ ಭಯದಿಂದ ಸ್ಟುಡಿಯೋ ಹೊರಗೆ ಓಡಿಬಂದರು.

ಪಕ್ಕದ ಫ್ಲೋರ್‌ನಲ್ಲಿದ್ದ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಗಾಯಕ ಪಿ ಬಿ ಶ್ರೀನಿವಾಸ್ ಇದ್ದರು. ನಾವೆಲ್ಲರೂ ಸ್ಟುಡಿಯೋ ಹೊರಗೆ ಕುಳಿತದ್ದು ನೋಡಿದವರೇ ವಿಷಯ ಏನೆಂದು ವಿಚಾರಿಸಿದರು. “ಅದೇನಪ್ಪಾ, ನೀವು ಹಾಡಿದ ಹಾಡು ಹಾಕುತ್ತಿದ್ದಂತೆ ಸೆಟ್‌ನಲ್ಲಿ ಹಾವೇ ಮಾಯವಾಗುತ್ತೆ! ಅದಕ್ಕೇ ಭಯದಿಂದ ನಾವು ಹೊರಗೆ ಬಂದು ಕುಳಿತಿದ್ದೀವಿ,” ಎಂದು ರಾಜಕುಮಾರ್ ತಮಾಷೆ ಮಾಡಿದರು. “ಅದಕ್ಯಾಕೆ ಭಯಪಡಬೇಕು? ಇದೇ ಚಿತ್ರದಲ್ಲಿ ನನ್ನ ಮತ್ತೊಂದು ಹಾಡು ಇದೆಯಲ್ಲ... ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂದು ಹಾಡಿದರೆ ಹಾವು ಪ್ರತ್ಯಕ್ಷವಾಗುತ್ತೆ!” ಎಂದು ಪಿಬಿಎಸ್ ಪರಿಹಾರ ಸೂಚಿಸಿದರು. ಅಷ್ಟು ಹೊತ್ತಿಗೆ, “ಹಾವು ಸಿಕ್ಕಿತು,” ಎಂದು ಸ್ಟುಡಿಯೋ ಸಹಾಯಕನೊಬ್ಬ ಕೂಗಿದ. “ನೋಡಿದ್ರಾ, ಹಾಡಿನಿಂದಲೇ ನಾನು ಹಾವನ್ನು ಮಾಯ ಮಾಡಬಲ್ಲೆ. ಬೇಕೆಂದಾಗ ಕರೆಸಿಕೊಳ್ಳುವುದನ್ನೂ ಬಲ್ಲೆ!,” ಎಂದು ಪಿಬಿಎಸ್ ಹುಬ್ಬೇರಿಸಿದರು.

ಈತನೀಗ ವಾಸುದೇವನೋ...

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ...

ಇದನ್ನೂ ಓದಿ : ಸ್ಮರಣೆ | ಹಿಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗುವ ‘ರಾಜ್‌ ಮಾದರಿ’
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More