ಸ್ಮರಣೆ | ಮೇರುಗಾಯಕ ಪಿ ಬಿ ಶ್ರೀನಿವಾಸ್ ಗಾಯನದ ಚಿತ್ರಗೀತೆಗಳ ವಿಡಿಯೋ

ಅಮರ ಗಾಯಕ ಪಿ ಬಿ ಶ್ರೀನಿವಾಸ್ ಅಗಲಿ ಇಂದಿಗೆ (ಏ.14) ಐದು ವರ್ಷ. ಜನಪ್ರಿಯ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ಅವರು ಹಾಡಿರುವ ಬಹುತೇಕ ಎಲ್ಲ ಹಾಡುಗಳೂ ಚಿರಸ್ಮರಣೀಯ, ಸದಾ ಗುನುಗುವಂಥವು. ಪಿಬಿಎಸ್‌ ಅವರ ಗಾಯನದ ಆಯ್ದ ಹತ್ತು ಸಿನಿಮಾ ವಿಡಿಯೋ ಹಾಡು ಇಲ್ಲಿವೆ 

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪಿ ಬಿ ಶ್ರೀನಿವಾಸ್‌. ಹಿಂದಿ ಸೇರಿದಂತೆ ಎಂಟು ಭಾಷೆಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಅವರು ದನಿಯಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿರುವ ಚಿತ್ರಗೀತೆ, ಭಕ್ತಿಗೀತೆಗಳ ಸಂಖ್ಯೆ ಸಾವಿರ ದಾಟುತ್ತದೆ. ವರನಟ ರಾಜಕುಮಾರ್ ಅವರಿಗೆ ಅತಿ ಹೆಚ್ಚು ಗೀತೆಗಳನ್ನು ಹಾಡಿರುವ ಪಿಬಿಎಸ್‌ ಕಂಠಸಿರಿಯ ನೂರಾರು ಮಧುರ ಹಾಡುಗಳು ಚಿರಸ್ಮರಣೀಯ. ಕರ್ನಾಟಕ ಶಾಸ್ತ್ರೀಯ ಸಂಗೀತ, ಘಜಲ್ ಗಾಯನದಲ್ಲಿ ವಿಶೇಷ ಪರಿಣತಿಯಿದ್ದ ಪಿಬಿಎಸ್‌ ಕವಿ ಕೂಡ ಹೌದು. ಪಿಬಿಎಸ್‌ರ ನೂರಾರು ಜನಪ್ರಿಯ ಹಾಡುಗಳ ಪೈಕಿ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಗೀತೆ: ಇಳಿದು ಬಾ ತಾಯಿ | ಸಿನಿಮಾ: ಅರಿಶಿಣ ಕುಂಕುಮ (1970) | ಸಾಹಿತ್ಯ: ದ ರಾ ಬೇಂದ್ರೆ | ಸಂಗೀತ: ವಿಜಯ ಭಾಸ್ಕರ್‌

ಗೀತೆ: ನೀ ಬಂದು ನಿಂತಾಗ | ಸಿನಿಮಾ: ಕಸ್ತೂರಿ ನಿವಾಸ (1971) | ಸಾಹಿತ್ಯ: ಆರ್‌ ಎನ್ ಜಯಗೋಪಾಲ್‌ | ಸಂಗೀತ: ಜಿ ಕೆ ವೆಂಕಟೇಶ್‌ | ಸಹಗಾಯನ: ಪಿ ಸುಶೀಲ

ಗೀತೆ: ಬಾಡಿಹೋದ ಬಳ್ಳಿಯಿಂದ | ಸಿನಿಮಾ: ಎರಡು ಕನಸು (1974) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್ - ನಾಗೇಂದ್ರ

ಗೀತೆ: ಆಕಾಶವೇ ಬೀಳಲಿ ಮೇಲೆ | ಸಿನಿಮಾ: ನ್ಯಾಯವೇ ದೇವರು (1971) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್ - ನಾಗೇಂದ್ರ

ಗೀತೆ: ಮಲೆನಾಡ ಹೆಣ್ಣ ಮೈಬಣ್ಣ | ಸಿನಿಮಾ: ಬೂತಯ್ಯನ ಮಗ ಅಯ್ಯು (1974) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ಜಿ ಕೆ ವೆಂಕಟೇಶ್

ಗೀತೆ: ರವಿವರ್ಮನ ಕುಂಚದ | ಸಿನಿಮಾ: ಸೊಸೆ ತಂದ ಸೌಭಾಗ್ಯ (1977) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಜಿ ಕೆ ವೆಂಕಟೇಶ್ | ಸಹಗಾಯನ: ಎಸ್ ಜಾನಕಿ

ಗೀತೆ: ಕನ್ನಡ ನಾಡಿನ ವೀರ ರಮಣಿಯ | ಸಿನಿಮಾ: ನಾಗರಹಾವು (1973) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ವಿಜಯ ಭಾಸ್ಕರ್‌

ಗೀತೆ: ಗಾಳಿಯ ಪಟದಂತೆ | ಸಿನಿಮಾ: ದೇವರ ದುಡ್ಡು (1977) | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಸಂಗೀತ: ರಾಜನ್-ನಾಗೇಂದ್ರ

ಗೀತೆ: ನಗುನಗುತಾ ನಲಿ ನಲಿ | ಸಿನಿಮಾ: ಬಂಗಾರದ ಮನುಷ್ಯ (1972) | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಸಂಗೀತ: ಜಿ ಕೆ ವೆಂಕಟೇಶ್‌

ಗೀತೆ: ನೀರಿನಲ್ಲಿ ಅಲೆಯ ಉಂಗುರ | ಸಿನಿಮಾ: ಬೇಡಿ ಬಂದವಳು (1968) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಆರ್ ಸುದರ್ಶನಂ | ಸಹಗಾಯಕಿ: ಪಿ ಸುಶೀಲ

ಇದನ್ನೂ ಓದಿ : ಪಿಬಿಎಸ್‌ ಸ್ಮರಣೆ | ಅವರ ಹಾಡು ಹಾಕುತ್ತಿದ್ದಂತೆ ಸ್ಟುಡಿಯೋದಲ್ಲಿದ್ದ ಹಾವು ಮಾಯ!
‘ಧಡಕ್’‌ ತೆರೆಗೆ | ಮೂಲ ‘ಸೈರಾಟ್’‌ ಸಿನಿಮಾದ ಮ್ಯಾಜಿಕ್‌ ವರ್ಕ್ ಆಗುವುದೇ?
ಬರ್ಗ್‌ಮನ್‌ ಸಿನಿಮಾ ಪ್ರದರ್ಶನದ ನಂತರ ಬೆಂಗಳೂರಿನಲ್ಲಿ ಹೊಸ ಅಲೆ ಎದ್ದಿತು
ಜನುಮದಿನ | 70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿನುಗಿದ ನಕ್ಷತ್ರ ಕಲ್ಪನಾ
Editor’s Pick More