ಜನುಮದಿನ | ನಟ ರಾಜೇಶ್ ಅಭಿನಯದ ಹತ್ತು ಮಧುರ ಹಾಡುಗಳ ವಿಡಿಯೋ

ಕುಮಾರತ್ರಯರು ನಾಯಕನಟರಾಗಿ ಜನಪ್ರಿಯತೆ ಗಳಿಸಿದ್ದ ಅವಧಿಯಲ್ಲಿ ತಮ್ಮದೇ ಹಾದಿ ಕಂಡುಕೊಂಡವರು ರಾಜೇಶ್‌. ಮುಂದೆ ಪೋಷಕ ಪಾತ್ರಗಳಿಗೆ ಜೀವ ತುಂಬಿದ ಅವರು, ಶಿಸ್ತಿನ ನಟ ಎಂದೇ ಕರೆಸಿಕೊಳ್ಳುತ್ತಾರೆ. ಇಂದು (ಏ.15) ಅವರ 86ನೇ ಜನ್ಮದಿನ. ರಾಜೇಶ್ ಸಿನಿಮಾಗಳ ಹಾಡಿನ ಗುಚ್ಛ ಇಲ್ಲಿದೆ

ರಂಗಭೂಮಿ ಹಿನ್ನೆಲೆಯ ರಾಜೇಶ್ ಬೆಳ್ಳಿಪರದೆಗೆ ಪರಿಚಯವಾಗಿದ್ದು ‘ವೀರಸಂಕಲ್ಪ’ (1964) ಚಿತ್ರದಲ್ಲಿ. ‘ನಮ್ಮ ಊರು’ (1968) ಚಿತ್ರದೊಂದಿಗೆ ನಾಯಕನಟರಾದರು. ಈ ಚಿತ್ರದ ಯಶಸ್ಸು ಅವರಿಗೆ ಚಿತ್ರರಂಗದಲ್ಲಿ ಭದ್ರ ಸ್ಥಾನ ಕಲ್ಪಿಸಿತು. ಸದಭಿರುಚಿಯ ಚಿತ್ರಗಳಲ್ಲಿ ನಟಿಸುತ್ತ ಬಂದ ರಾಜೇಶ್ ಮುಂದೆ ಪೋಷಕ ಕಲಾವಿದರಾಗಿ ಕನ್ನಡಿಗರ ಮೆಚ್ಚುಗೆಯ ನಟರಾದರು. ಇಂದು (ಏ.15) ಅವರು 85 ವರ್ಷ ಪೂರೈಸುತ್ತಿದ್ದಾರೆ. ಅವರ ಚಿತ್ರಗಳ ಹತ್ತು ಮಧುರ ವಿಡಿಯೋ ಹಾಡುಗಳು ಇಲ್ಲಿವೆ.

ಗೀತೆ: ರವಿವರ್ಮನ ಕುಂಚದ | ಸಿನಿಮಾ: ಸೊಸೆ ತಂದ ಸೌಭಾಗ್ಯ (1977) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಜಿ ಕೆ ವೆಂಕಟೇಶ್‌ | ಗಾಯನ: ಪಿ ಬಿ ಶ್ರೀನಿವಾಸ್‌, ಎಸ್‌ ಜಾನಕಿ

ಗೀತೆ: ಕಂಗಳು ವಂದನೆ ಹೇಳಿದೆ | ಸಿನಿಮಾ: ಮುಗಿಯದ ಕತೆ (1976) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್‌-ನಾಗೇಂದ್ರ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್‌ ಜಾನಕಿ

ಗೀತೆ: ಈ ದೇಶ ಚೆನ್ನ | ಸಿನಿಮಾ: ಕಾವೇರಿ (1975) | ಸಂಗೀತ: ಎಂ ರಂಗರಾವ್ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ

ಗೀತೆ: ಒಳಗಿನ ಕಣ್ಣನು | ಸಿನಿಮಾ: ದೇವರ ದುಡ್ಡು (1977) | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಸಂಗೀತ: ರಾಜನ್‌-ನಾಗೇಂದ್ರ | ಗಾಯನ: ಪಿ ಬಿ ಶ್ರೀನಿವಾಸ್‌

ಗೀತೆ: ಬೆಳವಲದ ಮಡಿಲಲ್ಲಿ | ಸಿನಿಮಾ: ಬೆಳವಲದ ಮಡಿಲಲ್ಲಿ (1975) | ಸಾಹಿತ್ಯ: ಗೀತಪ್ರಿಯ| ಸಂಗೀತ: ರಾಜನ್‌-ನಾಗೇಂದ್ರ | ಗಾಯನ: ಎಸ್‌ ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ

ಗೀತೆ: ಹೋಗದಿರಿ ಸೋದರರೆ | ಸಿನಿಮಾ: ನಮ್ಮ ಊರು (1968) | ಸಾಹಿತ್ಯ: ಸಿ ವಿ ಶಿವಶಂಕರ್‌ | ಸಂಗೀತ: ಅರ್‌ ರತ್ನಂ | ಗಾಯನ: ಪಿ ಬಿ ಶ್ರೀನಿವಾಸ್‌

ಗೀತೆ: ಕಾಣದ ದೇವರು ಊರಿಗೆ ನೂರು | ಸಿನಿಮಾ: ಸುವರ್ಣ ಭೂಮಿ (1969) | ಸಾಹಿತ್ಯ: ಕು ರಾ ಸೀ | ಸಂಗೀತ: ವಿಜಯ ಭಾಸ್ಕರ್‌ | ಗಾಯನ: ಪಿ ಬಿ ಶ್ರೀನಿವಾಸ್‌, ಯೇಸುದಾಸ್‌

ಗೀತೆ: ಮುತ್ತು ಉರುಳಿ ಹೋಗಿ | ಸಿನಿಮಾ: ಮುಗಿಯದ ಕತೆ (1976) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್‌-ನಾಗೇಂದ್ರ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ

ಗೀತೆ: ಸಾಗರಕೆ ಚಂದಿರ ತಂದ | ಸಿನಿಮಾ: ಒಂದು ಹೆಣ್ಣಿನ ಕತೆ (1972) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಟಿ ಜಿ ಲಿಂಗಪ್ಪ | ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ

ಗೀತೆ: ಆಕಾಶದಲ್ಲಿ ಬಾನಾಡಿಯಾಗಿ | ಸಿನಿಮಾ: ಕಾವೇರಿ (1975) | ಸಾಹಿತ್ಯ: ವಿಜಯ ನಾರಸಿಂಹ | ಸಂಗೀತ: ಎಂ ರಂಗರಾವ್‌ | ಗಾಯನ: ಪಿ ಬಿ ಶ್ರೀನಿವಾಸ್‌, ಎಸ್ ಜಾನಕಿ

ಇದನ್ನೂ ಓದಿ : ಸ್ಮರಣೆ | ಮೇರುಗಾಯಕ ಪಿ ಬಿ ಶ್ರೀನಿವಾಸ್ ಗಾಯನದ ಚಿತ್ರಗೀತೆಗಳ ವಿಡಿಯೋ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More