ಮೇಕಿಂಗ್ ವಿಡಿಯೋ | ಬಹುತಾರಾಗಣದ ಐತಿಹಾಸಿಕ ಸಿನಿಮಾ ‘ಕುರುಕ್ಷೇತ್ರ’

ಮುನಿರತ್ನ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ‘ಕುರುಕ್ಷೇತ್ರ’ ಸಿನಿಮಾ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಇಲ್ಲಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಕಲಾವಿದರ ಲುಕ್‌ಗಳು ರಿವೀಲ್ ಆಗಿವೆ. ವಿಧಾನಸಭಾ ಚುನಾವಣೆ ನಂತರ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ

ದುರ್ಯೋಧನನ ದೃಷ್ಟಿಕೋನದಿಂದ ಮಹಾಭಾರತವನ್ನು ಹೇಳುವ ಸಿನಿಮಾ ‘ಕುರುಕ್ಷೇತ್ರ’. ದಕ್ಷಿಣ ಭಾರತ ಚಿತ್ರರಂಗದ ಗಮನ ಸೆಳೆದಿರುವ ಚಿತ್ರ ಕನ್ನಡದ ಮಟ್ಟಿಗೆ ದಶಕದ ಐತಿಹಾಸಿಕ ಸಿನಿಮಾ ಎಂದೇ ಕರೆಸಿಕೊಂಡಿದೆ. ದಕ್ಷಿಣ ಭಾರತದ ಜನರಿಗೆ ಚಿರಪರಿಚಿತರಿರುವ ನಟ-ನಟಿಯರು ತಾರಾಬಳಗದಲ್ಲಿದ್ದು ಚಿತ್ರ ಹಿಂದಿ ಸೇರಿದಂತೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಾಗಣ್ಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಭಾರಿ ಬಜೆಟ್‌ ಸಿನಿಮಾ ಕುರಿತಾಗಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ನಿರೀಕ್ಷೆಯಿದೆ. ಈ ಹಿಂದೆ ಬಿಡಗಡೆಯಾಗಿದ್ದ ಚಿತ್ರದ ಟೀಸರ್‌ಗಳು ದರ್ಶನ್‌ ಮತ್ತು ನಿಖಿಲ್ ಕುಮಾರ್‌ ಪಾತ್ರಗಳನ್ನು ಪರಿಚಯಿಸಿದ್ದವು. ಚಿತ್ರದ ಇತರೆ ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಡದ ಚಿತ್ರರಂಗ ಪಾತ್ರಧಾರಿಗಳ ಲುಕ್‌ ರಿವೀಲ್ ಮಾಡಿರಲಿಲ್ಲ. ಇದೀಗ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋದಲ್ಲಿ ಕಲಾವಿದರೆಲ್ಲರ ಪಾತ್ರಗಳು ತಿಳಿದುಬರುತ್ತವೆ. ವೈಭವದ ಸೆಟ್‌, ಅದ್ಧೂರಿ ಮೇಕಿಂಗ್‌ ಕಾಣಿಸುತ್ತದೆ.

ಇದುವರೆಗಿನ ದುಬಾರಿ ಬಜೆಟ್‌ನ ಕನ್ನಡ ಸಿನಿಮಾ ಇದಾಗಲಿದ್ದು, ದಕ್ಷಿಣದ ಹಲವಾರು ಖ್ಯಾತನಾಮ ನಟ-ನಟಿಯರು ಚಿತ್ರದ ಭಾಗವಾಗಿದ್ದಾರೆ. ಟೀಸರ್‌ನಲ್ಲಿ ಬಹುತೇಕ ಕಲಾವಿದರ ಪಾತ್ರಗಳು ರಿವೀಲ್ ಆಗಿವೆ. ತಮ್ಮ ವೃತ್ತಿ ಬದುಕಿನ ಐವತ್ತನೇ ಚಿತ್ರ ‘ಕುರುಕ್ಷೇತ್ರ’ದಲ್ಲಿ ದರ್ಶನ್‌, ದುರ್ಯೋಧನನಾಗಿ ಅಭಿನಯಿಸುತ್ತಿದ್ದಾರೆ. ರವಿಚಂದ್ರನ್‌ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಅರ್ಜುನ್ ಸರ್ಜಾ (ಕರ್ಣ), ಸ್ನೇಹಾ (ದ್ರೌಪದಿ), ಮೇಘನಾ ರಾಜ್‌ (ಭಾನುಮತಿ), ಭಾರತಿ ವಿಷ್ಣುವರ್ಧನ್‌ (ಕುಂತಿ), ನಿಖಿಲ್‌ ಗೌಡ (ಅಭಿಮನ್ಯು), ರವಿಶಂಕರ್ (ಶಕುನಿ), ಸೋನು ಸೂದ್‌ (ಅರ್ಜುನ), ರವಿ ಚೇತನ್ (ದುಶ್ಯಾಸನ), ಶಶಿಕುಮಾರ್‌ (ಧರ್ಮರಾಯ), ಡ್ಯಾನಿಶ್‌ ಅಖ್ತರ್ ಸೈಫಿ (ಭೀಮ), ಅದಿತಿ ಆರ್ಯ (ಉತ್ತರ), ಶ್ರೀನಿವಾಸ ಮೂರ್ತಿ (ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ಅನಂತನಾಗ್ (ಗಂಧರ್ವ ರಾಜ) ಹರಿಪ್ರಿಯ (ನೃತ್ಯಗಾರ್ತಿ) ಸೇರಿದಂತೆ ಚಿತ್ರರಂಗದ ಪ್ರಮುಖರು ‘ಕುರುಕ್ಷೇತ್ರ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರನ್ನನ ಗದಾಯುದ್ಧ ಆಧರಿಸಿ ಜೆ ಕೆ ಭಾರವಿ ಚಿತ್ರಕಥೆ ಹೆಣೆದಿರುವ ಚಿತ್ರವಿದು. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಿದ್ದು ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ : ‘ಸ್ಟೇಟ್‌ಮೆಂಟ್‌’ ಚಿತ್ರಕ್ಕೆ ಹಾಡಿದ ಸುಹಾನಾ ಸೈಯದ್‌ ಈಗ ಹಿನ್ನೆಲೆ ಗಾಯಕಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More