ಅಮಿತಾಭ್ ಬ್ಲಾಗ್‌ಗೆ ಹತ್ತು ವರುಷ, ಟ್ವೀಟ್‌ ಮಾಡಿ ಸಂಭ್ರಮಿಸಿದ ಬಾದ್‌ಶಾ

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್‌ ಬ್ಲಾಗ್‌ಗೆ ಇಂದು (ಏ.17) ಹತ್ತು ವರ್ಷ ತುಂಬಿದೆ. 2008ರಿಂದ ಬ್ಲಾಗಿಂಗ್‌ನಲ್ಲಿ ಸಕ್ರಿಯರಾಗಿದ್ದ ಬಚ್ಚನ್‌ ತಮ್ಮ ವೈಯಕ್ತಿಕ ಬದುಕು, ಸಿನಿಮಾರಂಗದ ಅಪರೂಪದ ಅನಿಸಿಕೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ

“ಈ ಜಗತ್ತಿನಲ್ಲಿ ತನ್ನಿಂದತಾನೇ ಏನೂ ಆಗದು. ಪರಸ್ಪರ ಪ್ರೀತಿ, ಅಕ್ಕರೆ, ಅನುಕಂಪದಿಂದ ಎಲ್ಲರೂ ಕೈಜೋಡಿಸಬೇಕು. ಆಗ ಮಾತ್ರ ಎಲ್ಲರೂ ಖುಷಿಯಿಂದಿರಲು ಸಾಧ್ಯ,” ಎಂದು ಅಮಿತಾಭ್‌ ಟ್ವೀಟ್ ಮಾಡಿದ್ದಾರೆ. ಬ್ಲಾಗಿಂಗ್‌ಗೆ ಹತ್ತು ವರ್ಷ ಪೂರೈಸಿದ ಖುಷಿಯಲ್ಲಿ ಅವರು ಪ್ರೋತ್ಸಾಹಿಸಿದ ಅಭಿಮಾನಿಗಳು, ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಚ್ಚನ್ ತಮ್ಮ ಅಭಿಮಾನಿಗಳೊಂದಿಗೆ ಬ್ಲಾಗ್ ಮೂಲಕ ಸಂಪರ್ಕದಲ್ಲಿದ್ದಾರೆ. ಮೊಮ್ಮಕ್ಕಳಾದ ನವ್ಯಾ ನವೇಲಿ ಮತ್ತು ಆರಾಧ್ಯಾರ ಬೆಳವಣಿಗೆ ಹಾಗೂ ಆಟೋಟಗಳು, ಜಗತ್ತಿನ ಆಗುಹೋಗುಗಳ ಬಗೆಗಿನ ತಮ್ಮ ಅನಿಸಿಕೆಗಳು, ವೃತ್ತಿಬದುಕಿನ ಆರಂಭದ ದಿನಗಳ ಕಷ್ಟ-ಸುಖಗಳು... ಹೀಗೆ ಅವರ ಬದುಕಿನ ಒಂದು ಭಾಗವೇ ಆಗಿತ್ತು ಬ್ಲಾಗಿಂಗ್‌. ಅಭಿಮಾನಿಗಳು ಬ್ಲಾಗ್‌ನೊಂದಿಗೆ ಭಾವನಾತ್ಮಕವಾಗಿ ಬಚ್ಚನ್‌ರೊಂದಿಗೆ ಕನೆಕ್ಟ್‌ ಅಗಿದ್ದರು.

ಇತ್ತೀಚೆಗೆ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಅಭಿಮಾನಿಗಳಿಗೆ ಆಪ್ತವಾದ ಪತ್ರವೊಂದನ್ನು ಬರೆದಿದ್ದರು. "ಪರಸ್ಪರರ ಬಗ್ಗೆ ನಮಗೇನೂ ಗೊತ್ತೇ ಇರಲಿಲ್ಲ. ಹೀಗಿರುವಾಗ, ಅದೊಂದು ಸುಂದರವಾದ ದಿನ ನಾವೆಲ್ಲರೂ ಪರಿಚಿತರಾಗಿ ಮನೆಯವರಂತೆಯೇ ಆದೆವು. ನಾನು ಬರೆಯುತ್ತ ಹೋದಂತೆ ನೀವು ಭಾವನಾತ್ಮಕವಾಗಿ ಸ್ಪಂದಿಸಿದಿರಿ. ನೀವು ಪ್ರತಿಕ್ರಿಯಿಸದಿದ್ದಾಗ ದೊಡ್ಡ ನಷ್ಟವೆಂದೇ ನಾನು ಭಾವಿಸಿದೆ. ಈ ಬಾಂಧವ್ಯ ಹೀಗೇ ಮುಂದುವರಿಯಲಿ, ನಾವೆಲ್ಲ ಒಟ್ಟಿಗೆ ಸಾಗೋಣ,” ಎನ್ನುವ ಬಚ್ಚನ್ ಪತ್ರ ಅವರ ಅಭಿಮಾನಿಗಳಿಗೆ ತುಂಬಾ ಮೆಚ್ಚುಗೆಯಾಗಿತ್ತು. ಇತ್ತೀಚೆಗೆ ಅವರು ಪುತ್ರಿ ಶ್ವೇತಾ ಬಚ್ಚನ್ ರಚಿಸಿರುವ ಪುಸ್ತಕದ ಬಗ್ಗೆ ಬರೆದು, ಆಕೆ ತಮ್ಮ ಹೆಮ್ಮೆಯ ಮಗಳು ಎಂದು ಬರೆದಿದ್ದರು. ಅವರ ಶುಭಾಶಯದ ಟ್ವೀಟ್‌ಗೆ ಅಭಿಮಾನಿಗಳಿಂದ ಆತ್ಮೀಯ ಮೆಚ್ಚುಗೆ ವ್ಯಕ್ತವಾಗಿವೆ.

ಇದನ್ನೂ ಓದಿ : ಸಲ್ಮಾನ್ ‘ಭಾರತ್‌’ ಸಿನಿಮಾದೊಂದಿಗೆ ಬಾಲಿವುಡ್‌ಗೆ ಮರಳಿದ ಪ್ರಿಯಾಂಕಾ ಚೋಪ್ರಾ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More