ಜಾಹಿರಾತಿನಲ್ಲೂ ಕಣ್ಣು ಮಿಟುಕಿಸಿ ಸುದ್ದಿ ಮಾಡಿದ ನಟಿ ಪ್ರಿಯಾ ವಾರಿಯರ್

’ಒರು ಅಡಾರ್ ಲವ್‌’ ಮಲಯಾಳಂ ಸಿನಿಮಾದ ವಿಡಿಯೋ ತುಣುಕುಗಳಿಂದ ದಿನಬೆಳಗಾಗುವುದರೊಳಗೆ ಸುದ್ದಿಯಾಗಿದ್ದ ಪ್ರಿಯಾ, ಈಗ ಜಾಹೀರಾತು ಮಾಡೆಲ್‌. ಈ ಚಾಕೊಲೇಟ್‌ ಜಾಹೀರಾತಿನಲ್ಲೂ ಅವರ ಕಣ್ಣು ಹೊಡೆಯುವ ಆಕ್ಟ್‌ ಬಳಕೆಯಾಗಿದ್ದು, ಪ್ರಿಯಾ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ

ತಿಂಗಳುಗಳ ಹಿಂದೆ ಹುಬ್ಬು ಹಾರಿಸಿ, ಕಣ್ಹೊಡೆಯುವ ಸಿನಿಮಾ ವಿಡಿಯೋ ತುಣುಕಿನೊಂದಿಗೆ ದೊಡ್ಡ ಸುದ್ದಿಯಾಗಿದ್ದ ಪ್ರಿಯಾ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಬಾರಿ ಅವರು ಚಾಕೋಲೆಟ್‌‌ ಜಾಹೀರಾತಿನಲ್ಲಿ ಕಣ್ಣು ಹೊಡೆದಿದ್ದಾರೆ. ‘ಒರು ಅಡಾರ್ ಲವ್‌’ ಮಲಯಾಳಂ ಸಿನಿಮಾದಲ್ಲಿನ ಪ್ರಿಯಾ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಟಿಯ ಈ ಜನಪ್ರಿಯತೆಯನ್ನು ಮಂಚ್ ಚಾಕೋಲೆಟ್‌ ಕಂಪನಿ ಜಾಹೀರಾತಿಗೆ ಬಳಕೆ ಮಾಡಿಕೊಂಡಿದೆ. ಸದ್ಯ ನಡೆಯುತ್ತಿರುವ ಐಪಿಎಲ್‌ ಸರಣಿಗೆಂದು ಈ 25 ಸೆಕೆಂಡ್‌ಗಳ ಜಾಹೀರಾತು ತಯಾರಿಸಲಾಗಿದೆಯಂತೆ. ಕ್ರಿಕೆಟ್‌ ಥೀಮ್‌ನೊಂದಿಗೆ ರೂಪಿಸಿರುವ ಜಾಹೀರಾತಿನಲ್ಲಿ ಪ್ರಿಯಾ ಅಕರ್ಷಕವಾಗಿ ಕಾಣಿಸುತ್ತಾರೆ. ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಜಾಹೀರಾತು ಮೂಡಿಬರುತ್ತಿದೆ.

ಪ್ರಿಯಾ ವಾರಿಯರ್ ನಟಿಸಿರುವ, ಒಮರ್ ಲುಲು ನಿರ್ದೇಶನದ ‘ಒರು ಅಡಾರ್‌ ಲವ್‌’ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕೆಂದು ಬಿಡಲಾಗಿದ್ದ ವಿಡಿಯೋ ತುಣುಕುಗಳೇ ವೈರಲ್ ಆಗಿದ್ದವು. ಪ್ರಿಯಾರ ಜನಪ್ರಿಯತೆಯನ್ನು ಚಿತ್ರರಂಗದವರು ಎನ್‌ಕ್ಯಾಶ್ ಮಾಡಿಕೊಳ್ಳಲು ಹೊರಟಿದ್ದರು. ತೆಲುಗು, ತಮಿಳು, ಕನ್ನಡ ಮಾತ್ರವಲ್ಲ, ಹಿಂದಿ ಚಿತ್ರರಂಗದಲ್ಲೂ ಪ್ರಿಯಾಗೆ ಆಫರ್‌ಗಳಿವೆ ಎನ್ನಲಾಗಿತ್ತು. ನಿರ್ದೇಶಕ ಯೋಗಿ ಅವರು ತಮ್ಮ ‘ಯೋಗಿ ಲವ್ಸ್ ಸುಪ್ರಿಯಾ’ ಕನ್ನಡ ಚಿತ್ರಕ್ಕೆ ಪ್ರಿಯಾರನ್ನು ಕರೆತರುವುದಾಗಿ ಹೇಳಿದ್ದರು. ಆದರೆ ಅದಿನ್ನೂ ಅಧಿಕೃತವಾಗಿಲ್ಲ. ಇತರ ಸಿನಿಮಾಗಳ ಬಗೆಗೂ ಪ್ರಿಯಾ ಏನೂ ಮಾತನಾಡುತ್ತಿಲ್ಲ. ‘ಒರು ಅಡಾರ್‌ ಲವ್‌’ ಇದೇ ವರ್ಷ ಜೂನ್‌ ಎರಡನೇ ವಾರದಲ್ಲಿ ತೆರೆಕಾಣುತ್ತಿದೆ. ಈ ಚಿತ್ರ ತೆರೆಕಂಡ ನಂತರ ಪ್ರಿಯಾಗೆ ಹೆಚ್ಚು ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ಸದ್ಯ ಆಕೆಯೀಗ ಜಾಹೀರಾತಿನೊಂದಿಗೆ ಅಭಿಮಾನಿಗಳೆದುರು ಪ್ರತ್ಯಕ್ಷವಾಗಿದ್ದಾರೆ.

ಇದನ್ನೂ ಓದಿ : ಸಲ್ಮಾನ್ ‘ಭಾರತ್‌’ ಸಿನಿಮಾದೊಂದಿಗೆ ಬಾಲಿವುಡ್‌ಗೆ ಮರಳಿದ ಪ್ರಿಯಾಂಕಾ ಚೋಪ್ರಾ

ಇತ್ತೀಚಿನ ‘ರಂಗಸ್ಥಳಂ’ ತೆಲುಗು ಚಿತ್ರದ ದೃಶ್ಯಗಳೊಂದಿಗೆ ಪ್ರಿಯಾ ವಿಡಿಯೋ ಜೋಡಿಸಿದ ಫನ್ನಿ ವಿಡಿಯೋ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More