ಬಾಲಿವುಡ್‌ ಪ್ರವೇಶಿಸಲು ಸಜ್ಜಾದ ನಟ ಮಿಥುನ್ ಚಕ್ರವರ್ತಿ ದತ್ತು ಪುತ್ರಿ ದಿಶಾನಿ

ನಟ ಮಿಥುನ್‌ ಚಕ್ರವರ್ತಿ ದತ್ತು ಪುತ್ರಿ ದಿಶಾನಿ. ಪೋಷಕರು ಬೇಡವೆಂದು ಕಸದ ತೊಟ್ಟಿಯಲ್ಲಿಟ್ಟಿದ್ದ ಮಗುವನ್ನು ತಂದು ತಮ್ಮ ಮಕ್ಕಳೊಂದಿಗೆ ಸಾಕಿದ್ದರು ಮಿಥುನ್ ದಂಪತಿ. ಈಗ ನ್ಯೂಯಾರ್ಕ್‌ ಫಿಲ್ಮ್ ಅಕಾಡೆಮಿಯಲ್ಲಿ ಕಲಿಯುತ್ತಿರುವ ದಿಶಾನಿ, ಮುಂದಿನ ದಿನಗಳಲ್ಲಿ ಬಾಲಿವುಡ್‌ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ

ತಮ್ಮ ಪುತ್ರ-ಪುತ್ರಿಯರನ್ನು ಬೆಳ್ಳಿತೆರೆಗೆ ಪರಿಚಯಿಸುವುದು ಬಾಲಿವುಡ್‌ ತಾರೆಯರ ಕನಸು. ಇತ್ತೀಚಿನ ವರ್ಷಗಳಲ್ಲಿ ಹತ್ತಾರು ತಾರಾ ಕುಡಿಗಳು ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಇವರಲ್ಲಿ ಕೆಲವರು ಯಶಸ್ಸು ಕಂಡಿದ್ದು ನಿಧಾನವಾಗಿ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ದಿಶಾನಿ ಚಕ್ರವರ್ತಿ ಹೊಸ ಸೇರ್ಪಡೆ. ಸದ್ಯ ಪ್ರತಿ‍ಷ್ಠಿತ ನ್ಯೂಯಾರ್ಕ್‌ ಫಿಲ್ಮ್ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದಿಶಾನಿ ನಟನೆ ಹಾಗೂ ಸಿನಿಮಾದ ಇತರ ವಿಭಾಗಗಳಿಗೆ ಸಂಬಂಧಿಸಿದಂತೆ ಕಲಿಕೆ ನಡೆಸಿದ್ದಾರೆ. ಸೂಕ್ತ ತಯಾರಿಯೊಂದಿಗೆ ಬಾಲಿವುಡ್ ಪ್ರವೇಶಿಸುವುದು ಆಕೆಯ ಕನಸು. ಚಕ್ರವರ್ತಿ ದಂಪತಿ ಪುತ್ರಿಯ ಆಸೆಗೆ ಒತ್ತಾಸೆಯಾಗಿ ನಿಂತಿದ್ದಾರೆ.

ಅಂದಹಾಗೆ ದಿಶಾನಿ ಮಿಥುನ್‌ ಚಕ್ರವತ್ರಿ ಮತ್ತು ಯೋಗಿತಾ ಬಾಲಿ ದಂಪತಿಯ ದತ್ತು ಪುತ್ರಿ. ಪೋಷಕರು ಬೇಡವೆಂದು ಕಸದ ತೊಟ್ಟಿಯಲ್ಲಿ ಮಗುವನ್ನು ಇಟ್ಟಿದ್ದರಂತೆ. ಮಗುವನ್ನು ಗಮನಿಸಿದ ಪಾದಚಾರಿಗಳು ಸರ್ಕಾರೇತರ ಸಂಸ್ಥೆಯೊಂದಕ್ಕೆ ಈ ಸುದ್ದಿ ಮುಟ್ಟಿಸಿದ್ದಾರೆ. ಎನ್‌ಜಿಒನವರು ಪುಟ್ಟ ಮಗುವನ್ನು ಕರೆತಂದು ಪೋಷಿಸಿದ್ದಾರೆ. ಪತ್ರಿಕೆಯಲ್ಲಿ ಈ ಸುದ್ದಿಯನ್ನು ಓದಿದ ಮಿಥುನ್ ದಂಪತಿ ಎನ್‌ಜಿಒಗೆ ಹೋಗಿ ಕಾನೂನಿನ ಪ್ರಕಾರ ಮಗುವನ್ನು ದತ್ತು ಪಡೆದರು. ಮುಂದೆ ಚಕ್ರವರ್ತಿ ದಂಪತಿಯ ಮೂವರು ಮಕ್ಕಳೊಂದಿಗೆ (ಮಿಮಾಹ್‌, ಉಶ್ಮೆ, ನಮಾಶಿ) ದಿಶಾನಿ ಕೂಡ ಬೆಳೆದರು. ಉತ್ತಮ ವಿದ್ಯಾಭ್ಯಾಸ ಪಡೆದ ದಿಶಾನಿ ಈಗ ನ್ಯೂಯಾರ್ಕ್‌ನಲ್ಲಿ ಕಲಿಯುತ್ತಿದ್ದಾರೆ. ಇಲ್ಲಿವರೆಗೆ ಸುದ್ದಿಯಲ್ಲಿರದ ದಿಶಾನಿ ಈಗ ಬಾಲಿವುಡ್‌ ಪ್ರವೇಶಿಸುವ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ : ‘ಕಾಜಿ’ ಕಿರುಚಿತ್ರದ ನಿರ್ದೇಶಕಿಯಾಗಿ ಸದ್ದು ಮಾಡುತ್ತಿದ್ದಾರೆ ನಟಿ ಐಶಾನಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More