ಟ್ರೈಲರ್ | ಎಲ್ಲರೂ ಸಿದ್ಧರಾಗಿ, ಸೆಲ್ಫಿಪ್ರಿಯ ಪ್ರಧಾನಿಯವರು ಬರುತ್ತಿದ್ದಾರೆ!

ಭಾರತದಲ್ಲಿ ಇಬ್ಬರು ಮಹಿಳೆಯರು ರಾಜಕೀಯ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿದ್ದರೆ ಆ ಆಡಳಿತ ಹೇಗಿರಬಹುದು? ಇಂತಹ ಚಿತ್ರಣವನ್ನು ಆಲ್ಟ್‌ ಬಾಲಾಜಿ ‘ಪಿಎಂ ಸೆಲ್ಫೀವಾಲಿ’ ಎಂಬ ವೆಬ್‌ಸಿರೀಸ್‌‌ ಮೂಲಕ ಜನರ ಮುಂದಿಡಲು ಹೊರಟಿದ್ದಾರೆ. ನಾನಾ ಕಾರಣಗಳಿಗೆ ಇದು ಕುತೂಹಲ ಕೆರಳಿಸುವಂತಿದೆ

ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ನಾಯಕತ್ವ ಬಹಳ ಕಡಿಮೆ. ಭಾರತದಲ್ಲಿ ಇಬ್ಬರು ಮಹಿಳೆಯರು ರಾಜಕೀಯ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿದ್ದರೆ ಆ ಆಡಳಿತ ಚಿತ್ರಣ ಹೇಗಿರಬಹುದು? ಇಂತಹ ಚಿತ್ರಣವನ್ನು ಆಲ್ಟ್‌ ಬಾಲಾಜಿ ‘ಪಿಎಂ ಸೆಲ್ಫಿವಾಲಿ’ ಎಂಬ ವೆಬ್‌ಸಿರೀಸ್‌‌ ಮೂಲಕ ಜನರ ಮುಂದಿಡಲು ಹೊರಟಿದ್ದಾರೆ.

‘ಪಿಎಂ ಸೆಲ್ಫಿವಾಲಿ’ ವೆಬ್‌ ಸೀರೀಸ್‌ ಟ್ರೈಲರ್‌ ಕಳೆದ ವಾರ ಬಿಡುಗಡೆಯಾಗಿದ್ದು ವೀಕ್ಷಕರಲ್ಲಿ ಕುತೂಹಲ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ವೆಬ್ ಸೀರೀಸ್‌ನ ಪ್ರಮುಖ ಪಾತ್ರ ತನ್ಯಾ ಮೂಲಕ ಹೊಸಮುಖ ನಿತ್ಯಾಮಿ ಶಿರ್ಕೆಯವರನ್ನು ಜನರಿಗೆ ಪರಿಚಯಿಸಲಾಗಿದೆ. ಬೀನಾ ಬೇನರ್ಜಿ, ರಮಕಾಂತ್ ಡಯಾಮ, ಪ್ರಣಯ್‌ ಪಚೌರಿ, ಅಂಜಲಿ ಶೀವರಾಮನ್‌, ಪರಾಸ್‌ ಝುಟ್ಶಿ ನಟಿಸಿದ್ದಾರೆ. ರಾಜಕೀಯ ಕ್ಷೇತ್ರದ ಒಳನೋಟವನ್ನು ಪರದೆ ಮೇಲೆ ತೋರಿಸಲು ಧೈರ್ಯ ಮಾಡಿರುವುದನ್ನು ಮೆಚ್ಚಲೇಬೇಕು. ಪ್ರಸ್ತುತ ರಾಜಕೀಯಕ್ಕೆ ಸಂಬಂಧಿಸಿಯೂ ಸಾಕಷ್ಟು ಹೋಲಿಕೆಗಳನ್ನು ಕಾಣಬಹುದು. ಹಗರಣ ಆರೋಪಗಳಿಂದ ಸ್ಥಾನ ಕಳೆದುಕೊಳ್ಳುವ ಭಯವನ್ನು ಹೊರತುಪಡಿಸಿ, ಆರಂಭದಲ್ಲಿ ಕೈಗೊಂಬೆಯಾಗಿದ್ದು ನಂತರ ಪ್ರಭಾವಿಯಾಗುವ ಪ್ರಧಾನಿ ವಿಚಾರಗಳು ಸ್ವಲ್ಪಮಟ್ಟಿಗೆ ದೇಶದ ರಾಜಕೀಯವನ್ನು ಹೋಲುತ್ತದೆ. ತನ್ಯಾ ಆಕೆಯ ಫೇಸ್‌ಬುಕ್‌ ಸ್ನೇಹಿತರನ್ನು ‘ಮಿತ್ರೋಂ’ ಎಂದು ಕರೆಯುವುದು ಗಮನಾರ್ಹ.

‘ಆಮ್‌ ಇನ್ಸಾನ್‌ ಪಕ್ಷ’ ಹಾಗೂ ತನ್ನ ಉದ್ದುದ್ದ ಮಾತಿನ ಮೂಲಕ ಎಲ್ಲರನ್ನು ಟೀಕಿಸುವ ‘ಅರುಣವ್‌ ಓಸ್ವಾಮಿ’ ಎಂಬ ಪಾತ್ರವೂ ಬರುತ್ತದೆ. ಸಲಿಂಗಕಾಮಿ ರಾಜಕಾರಣಿಯನ್ನು ತೋರಿಸುವ ಮೂಲಕ ಹಾಗೂ ಇಂಡಿಯನ್ ಪಿನಲ್‌ಕೋಡ್‌‌ ಸೆಕ್ಷನ್‌ ೩೭೭ನ್ನು ರದ್ದುಪಡಿಸುವ ಮೂಲಕ ರಾಜಕೀಯ ಕ್ಷೇತ್ರ ಹೊರತುಪಡಿಸಿ ಪ್ರಗತಿಶೀಲ ಕ್ಷೇತ್ರಗಳಿಗೆ ಭಾರತ ತೆರೆದುಕೊಳ್ಳುವುದನ್ನು ತೋರಿಸಲಾಗಿದೆ.

ಇದನ್ನೂ ಓದಿ : ಧೋನಿ ಆಯ್ತು, ಸಚಿನ್ ಆಯ್ತು, ಇದೀಗ ಟೆನಿಸ್ ತಾರೆ ಸಾನಿಯಾ ಸಿನೆಮಾ ಸರದಿ

ಪ್ರಧಾನಿ ಪ್ರಿಯಂವದ ಥಾಕೋರ್‌ ‌(ಬೀಣಾ ಬೇನರ್ಜಿ) ಸ್ಥಾನಕ್ಕೆ ಭ್ರಷ್ಟಾಚಾರ ಆರೋಪದಿಂದಾಗಿ ಸಮಸ್ಯೆಯಾಗುತ್ತದೆ. ಆಕೆಯ ಸಲಹೆಗಾರ್ತಿ ನೀಡುವ ಸಲಹೆಯ ಅನುಷ್ಠಾನದಿಂದ ದೇಶದ ಜನತೆ, ಮತ್ತೆ ಭ್ರಷ್ಟಾಚಾರದ ಸರಕಾರವೇ ಸಾಕು ಎಂದು ಬೇಡುವ ಮಟ್ಟಿಗೆ ಜನ ಬೇಸತ್ತು ಹೋಗುವಂತಾಗುತ್ತದೆ. ಹೀಗೆ ಅನಿರೀಕ್ಷಿತವಾಗಿ ಪ್ರಧಾನಿ ಸ್ಥಾನಕ್ಕೆ ಬರುವಾಕೆ ೨೫ ವರ್ಷದ ಫ್ಯಾಶನೆಬಲ್‌ ತರುಣಿ. ರಾಜಕೀಯಕ್ಕಿಂತಲೂ ಇಟಲಿಯ ವೈಭವಯುತ ಫ್ಯಾಶನ್ ಸಂಸ್ಥೆ ‘ಪ್ರಡ’ ಕುರಿತು ಹೆಚ್ಚು ತಿಳಿದುಕೊಂಡಿರುವ ಆಕೆ, ಮುಂದೆ ಹೇಗೆ ರಾಜಕಾರಣಿಯಾಗಿ ೧೩೦ ಕೋಟಿ ಭಾರತೀಯರ ಜವಾಬ್ದಾರಿ ನಿಭಾಯಿಸುತ್ತಾಳೆ ಎಂಬುದೇ ಇದರ ತಿರುಳು. ಪ್ರಿಯಂವದಾಳ ಮೊಮ್ಮಗಳು ಎಂಬುದೇ ತನ್ಯಾಗೆ ಪ್ರಧಾನಿಯಾಗುವುದಕ್ಕಿರುವ ಏಕೈಕ ಅರ್ಹತೆಯಾಗಿರುತ್ತದೆ.

ತನ್ಯಾ ಎಲ್ಲ ವಿಚಾರಗಳನ್ನು ತಲೆಕೆಳಗಾಗಿಸುತ್ತಾಳೆ ಎಂಬ ಭಯ ಪ್ರಿಯಂವದಾಳನ್ನು ಕಾಡುತ್ತಿರುತ್ತದೆ. ಅದೇ ನಿಜ ಎಂಬಂತೆ ಆರಂಭದಲ್ಲಿ ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಾಳೆ ತನ್ಯಾ. ತನ್ಯಾಳ ಪ್ರಕಾರ, ವಿದೇಶಾಂಗ ಸಚಿವರು ಬಾಲಿವುಡ್‌‌ನ ರೊಮ್ಯಾಂಟಿಕ್‌ ಸಂಬಂಧಗಳನ್ನು ನೋಡುವವರು ಹಾಗೂ ಭಯೋತ್ಪಾದಕರನ್ನು ಭೇಟಿ ಮಾಡುವಂತಹ ಅವಕಾಶ ಸಿಗುವಂಥವರು. ಇದು ತನ್ಯಾಳ ಪಾಲಿಗೆ ಅತ್ಯಂತ ವಿಸ್ಮಯವುಳ್ಳ ವಿಚಾರ. ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವುದರಲ್ಲಿ ತನ್ಯಾ ಎತ್ತಿದ ಕೈ. ಅಂತಾರಾಷ್ಟ್ರೀಯ ಸಭೆ, ಸಮ್ಮೇಳನದಿಂದ ಆರಂಭಿಸಿ, ಚುನಾವಣಾ ಪ್ರಚಾರದಲ್ಲಿಯೂ ಆಕೆ ಬಾತುಕೋಳಿಯಂತೆ ಫೋಸ್ ಕೊಟ್ಟು ಸೆಲ್ಫಿ ತೆಗೆದುಕೊಳ್ಳುತ್ತಾಳೆ. ಹ್ಯಾಶ್‌ಟ್ಯಾಗ್‌‌ ಮತ್ತು ಸ್ಟೇಟಸ್‌ ಅಪ್‌ಡೇಟ್‌ಗಳ‌ ಮೂಲಕವೇ ಸಂವಹನ ನಡೆಸುತ್ತಾಳೆ. ರಾಜಕೀಯ ಕ್ಷೇತ್ರಕ್ಕೆ ಹೊಸಬಳಾದ ತನ್ಯಾ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಲೇ ತನ್ನ ಕಾಲಮೇಲೆ ತಾನು ನಿಲ್ಲುವಲ್ಲಿ ಯಶಸ್ವಿಯಾಗುತ್ತಾಳೆ. ನಿಧಾನವಾಗಿಯೇ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಾಳೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More