ವಿಡಿಯೋ | ಸೋನಂ ಕಪೂರ್‌ ಮದುವೆ ಆರತಕ್ಷತೆಯಲ್ಲಿ ತಾರೆಯರ ಡಾನ್ಸ್

ನಿನ್ನೆ (ಮೇ 8) ಬೆಳಗ್ಗೆ ಸೋನಂ ಕಪೂರ್‌ ಮತ್ತು ಆನಂದ್ ಅಹುಜಾ ವಿವಾಹ ಮುಂಬೈನ ಬಾಂದ್ರಾದಲ್ಲಿ ನೆರವೇರಿತು. ಸಂಜೆ ನಡೆದ ಆರತಕ್ಷತೆಯಲ್ಲಿ ಬಾಲಿವುಡ್‌ ತಾರೆಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್‌ ಅಗಿವೆ

ಬಾಲಿವುಡ್ ನಟಿ ಸೋನಂ ಕಪೂರ್ ನಿನ್ನೆ (ಮೇ 8) ಮುಂಬೈನಲ್ಲಿ ತಮ್ಮ ಪ್ರಿಯಕರ ಆನಂದ್ ಅಹುಜಾ ಅವರನ್ನು ವರಿಸಿದ್ದಾರೆ. ಬೆಳಗ್ಗೆ ವಿವಾಹ ನೆರವೇರಿದರೆ, ಸಂಜೆ ಲೀಲಾ ಹೋಟೆಲ್‌ನಲ್ಲಿ ಭವ್ಯ ಆರತಕ್ಷತೆ ಏರ್ಪಾಟಾಗಿತ್ತು. ಈ ಸಮಾರಂಭದಲ್ಲಿ ಹಿಂದಿ ಚಿತ್ರರಂಗದ ನೂರಾರು ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು. ಸಲ್ಮಾನ್‌ ಖಾನ್‌, ಶಾರುಖ್ ಖಾನ್‌, ರಣವೀರ್ ಸಿಂಗ್‌, ಕತ್ರಿಕಾ ಕೈಫ್‌, ಜಾಕ್ವೆಲಿನ್ ಫರ್ನಾಂಡಿಸ್‌, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಕಂಗನಾ ರನಾವತ್‌, ಕರೀನಾ ಕಪೂರ್, ಸೈಫ್ ಅಲಿ ಖಾನ್‌, ಕರಣ್‌ ಜೋಹರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸ್ಟಾರ್ ನಟ-ನಟಿಯರು ಕುಣಿದು-ಕುಪ್ಪಳಿಸಿ ಸಮಾರಂಭವನ್ನು ಕಳೆಗಟ್ಟಿಸಿದ್ದು ವಿಶೇಷ.

ಇದನ್ನೂ ಓದಿ : ಸೋನಂ ಕಪೂರ್‌ ಮತ್ತು ಆನಂದ್ ಅಹುಜಾ ಮದುವೆಗೆ ಸಾಕ್ಷಿಯಾದ ಬಾಲಿವುಡ್‌

‘ಪ್ರೇಮ್‌ ರಥನ್ ಧನ್‌ ಪಾಯೋ’ ಸಿನಿಮಾದ ಹಾಡೊಂದಕ್ಕೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಾಗೂ ಕಪೂರ್‌ ಕುಟುಂಬದವರು ಕೆಲವು ಹಾಡುಗಳಿಗೆ ಡಾನ್ಸ್‌ ಮಾಡುವುದು ಮೊದಲೇ ನಿರ್ಧಾರವಾಗಿತ್ತು. ಇದರ ಹೊರತಾಗಿ ಸ್ಟಾರ್ ಹೀರೋಗಳಾದ ಸಲ್ಮಾನ್‌ ಖಾನ್‌, ಶಾರುಖ್ ಖಾನ್‌, ರಣವೀರ್ ಸಿಂಗ್‌ ಸ್ವಯಂಪ್ರೇರಿತರಾಗಿ ಕುಣಿದದ್ದು ವಿಶೇಷ. ಈ ಮೂವರು ತೊಂಬತ್ತರ ದಶಕದ ಜನಪ್ರಿಯ ಹಾಡುಗಳಿಗೆ ನರ್ತಿಸಿದರು. ನಟ ಅನಿಲ್‌ ಕಪೂರ್‌ ಎಲ್ಲರೊಂದಿಗೆ ಹೆಜ್ಜೆ ಹಾಕುತ್ತ, ಪುತ್ರಿಯ ಮದುವೆಯನ್ನು ಸಂಭ್ರಮಿಸಿದರು. "ಅನಿಲ್ ಕಪೂರ್‌ ನನಗೆ ಸ್ಫೂರ್ತಿ. ಪ್ರೀತಿಯ ಪುತ್ರಿಯನ್ನು ಮದುವೆ ಮಾಡಿ ಕಳುಹಿಸುವಾಗ ಅವರಿಗೆ ಎಷ್ಟು ದುಃಖವಾಗುತ್ತದೆ ಎನ್ನುವುದು ನನಗೆ ಅರಿವಾಗುತ್ತದೆ,” ಎಂದು ಶಾರುಖ್ ಟ್ವೀಟ್‌ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More