ಟೀಸರ್‌ | ನಟ ವಿಜಯ್ ದೇವರಕೊಂಡ ಬರ್ತ್‌ಡೇಗೆ ‘ಡಿಯರ್‌ ಕಾಮ್ರೇಡ್‌’ ಲುಕ್‌

‘ಅರ್ಜುನ್‌ ರೆಡ್ಡಿ’ ತೆಲುಗು ಚಿತ್ರದೊಂದಿಗೆ ದಕ್ಷಿಣ ಭಾರತದಾದ್ಯಂತ ಜನಪ್ರಿಯರಾದ ವಿಜಯ್ ದೇವರಕೊಂಡ ಇಂದು (ಮೇ 9) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಅವರ ‘ಟ್ಯಾಕ್ಸಿವಾಲಾ’ ಟೀಸರ್‌ ಮತ್ತು ‘ಡಿಯರ್ ಕಾಮ್ರೇಡ್‌’ ಚಿತ್ರದ ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆಯಾಗಿದೆ.

ನಟ ವಿಜಯ್ ದೇವರಕೊಂಡ ಇಂದು ತಮ್ಮ 29ನೇ ಜನ್ಮದಿನವನ್ನು ವಿಶೇಷವಾಗಿ ಅಚರಿಸಿಕೊಂಡಿದ್ದಾರೆ. ಸದ್ಯ ಅವರು ತಮ್ಮ ‘ನೋಟಾ’ ತೆಲುಗು, ತಮಿಳು ದ್ವಿಭಾಷಾ ಸಿನಿಮಾದ ಚಿತ್ರೀಕರಣದ ನಿಮಿತ್ತ ಚೆನ್ನೈನಲ್ಲಿದ್ದಾರೆ. ಇಂದು ಅವರು ನಟಿಸಿರುವ ‘ಮಹಾನಟಿ’ ಬಯೋಪಿಕ್ ತೆಲುಗು ಸಿನಿಮಾ ತೆರೆಕಂಡಿದೆ. ತೆಲುಗು ಚಿತ್ರರಂಗದ ದಂತಕತೆ ಎನಿಸಿಕೊಂಡಿರುವ ನಟಿ ಸಾವಿತ್ರಿ ಬದುಕು, ಸಿನಿಮಾ, ಸಾಧನೆಯ ಬಯೋಪಿಕ್ ಇದು. ಚಿತ್ರದಲ್ಲಿ ವಿಜಯ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಅವರು ಈ ಸಂಭ್ರಮ ಹಂಚಿಕೊಂಡಿದ್ದಾರೆ. ಇಂದು ಜನ್ಮದಿನದ ಅಂಗವಾಗಿ ವಿಜಯ್‌ ಅವರ ‘ಟ್ಯಾಕ್ಸಿವಾಲಾ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ರಾಹುಲ್‌ ನಿರ್ದೇಶನದ ಚಿತ್ರಕ್ಕೆ ಪ್ರಿಯಾಂಕಾ ಜವಾಲ್ಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇಂದು ವಿಜಯ್‌ ದೇವರಕೊಂಡ ಅವರ ‘ಡಿಯರ್‌ ಕಾಮ್ರೇಡ್‌’ ತೆಲುಗು ಸಿನಿಮಾದ ಫಸ್ಟ್‌ ಲುಕ್‌ ರಿವೀಲ್ ಆಗಿದೆ. ಸೂಪರ್‌ಹಿಟ್‌ ‘ಜನತಾ ಗ್ಯಾರೇಜ್‌’, ‘ರಂಗಸ್ಥಲಂ’ ತೆಲುಗು ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವೀಸ್‌ ತಯಾರಿಸುತ್ತಿರುವ ಚಿತ್ರವಿದು. ‘ಅರ್ಜುನ್‌ ರೆಡ್ಡಿ’ ಚಿತ್ರದ ಇಮೇಜನ್ನು ಮುಂದುವರಿಕೆಯಂತೆ ‘ಡಿಯರ್‌ ಕಾಮ್ರೇಡ್‌’ನಲ್ಲಿ ವಿಜಯ್‌ ಅವರನ್ನು ಬಿಂಬಿಸಲಾಗುತ್ತದೆ ಎನ್ನುವ ಸೂಚನೆಯಿದೆ. ಇದು ಕಮ್ಯೂನಿಸ್ಟ್‌ ಐಡಿಯಾಲಜಿಯ ಸಿನಿಮಾ ಹೌದೇ? ಇದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ‘ಅರ್ಜುನ್ ರೆಡ್ಡಿ’ ಚಿತ್ರದ ನಂತರ ಅವರ ‘ಟ್ಯಾಕ್ಸಿವಾಲಾ’ ತೆರೆಗೆ ಬರಲಿದೆ. ಇದೊಂದು ಸೂಪರ್‌ನ್ಯಾಚುರಲ್‌ ಥ್ರಿಲ್ಲರ್‌. ಈ ಮಧ್ಯೆ ಜನ್ಮದಿನದ ಅಂಗವಾಗಿ ಅವರು ಹೈದರಾಬಾದ್‌ ಸಿಟಿಯಲ್ಲಿ ಐಸ್‌ಕ್ರೀಂ ವಿತರಿಸಿದ್ದಾರೆ. ವಿಜಯ್‌ ದೇವರಕೊಂಡ ಫೋಟೋ ಇರುವ ಮೂರು ವ್ಯಾನ್‌ಗಳು ಸಿಟಿ ತುಂಬಾ ಓಡಾಡಿ ಐಸ್‌ಕ್ರೀಂ ಹಂಚಿವೆ. ವಿಜಯ್‌ ಇದನ್ನು ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

‘ಡಿಯರ್ ಕಾಮ್ರೇಡ್‌’ ಫಸ್ಟ್‌ ಲುಕ್‌

‘ಮಹಾನಟಿ’ ತೆಲುಗು ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಜೊತೆ ವಿಜಯ್ ದೇವರಕೊಂಡ

ಇದನ್ನೂ ಓದಿ : ‘ಬಾಹುಬಲಿ ೨’ ಭಾರತದಲ್ಲಿ ಮಾಡಿದ ಬಾಕ್ಸಾಫೀಸ್ ಮ್ಯಾಜಿಕ್‌ ಚೀನಾದಲ್ಲಿಲ್ಲ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More