ವಿಡಿಯೋ | ಸಹನಟಿಯ ಕೈಹಿಡಿದ ಹುಚ್ಚ ವೆಂಕಟ್, ಫೇಸ್ಬುಕ್ ಲೈವ್‌ನಲ್ಲಿ ಬಹಿರಂಗ

ಹುಚ್ಚ ವೆಂಕಟ್ ತಮ್ಮ ವಿವಾಹದ ಸುದ್ದಿಯನ್ನು ಅಭಿಮಾನಿಗಳು ಹಾಗೂ ಪೋಷಕರಿಗೆ ಫೇಸ್ಬುಕ್ ಲೈವ್ ಮೂಲಕ ತಿಳಿಸಿದ್ದಾರೆ. “ನಾವು ಪರಸ್ಪರ ತುಂಬಾ ಪ್ರೀತಿಸುತ್ತಿದ್ದೇವೆ. ನಮ್ಮನ್ನು ದೂರ ಮಾಡಬೇಡಿ,” ಎಂದು ಫೇಸ್ಬುಕ್ ಲೈವ್‌ನಲ್ಲಿ ದಿಢೀರನೆ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ

"ನಾನು ತಲಕಾವೇರಿಯಲ್ಲಿ ಐಶ್ವರ್ಯಾರನ್ನು ಮದುವೆಯಾಗಿದ್ದೇನೆ. ಆದರೆ ಐಶ್ವರ್ಯ ದೊಡ್ಡಮ್ಮ ತೀರಿಕೊಂಡಿದ್ದಾರೆ. ಹೀಗಾಗಿ ಮದುವೆ ವಿಚಾರವನ್ನು ನಾವು ಮನೆಯವರಿಂದ ಮುಚ್ಚಿಡುವಂತಾಯಿತು. ನಾವು ಮನೆಗೆ ವಾಪಸಾಗುತ್ತೇವೆ. ಯಾವುದೇ ಅನಾಹುತ ಮಾಡಿಕೊಳ್ಳುವುದಿಲ್ಲ. ನಮ್ಮನ್ನು ಕ್ಷಮಿಸಿ. ನಾವು ಪರಸ್ಪರ ತುಂಬಾ ಪ್ರೀತಿಸುತ್ತಿದ್ದೇವೆ. ನಮ್ಮನ್ನು ದೂರ ಮಾಡಬೇಡಿ,” -ಹೀಗೆಂದು ನಟ ಹುಚ್ಚ ವೆಂಕಟ್ ಫೇಸ್ಬುಕ್ ಲೈವ್‌ನಲ್ಲಿ ದಿಢೀರನೆ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹಿಂದೊಮ್ಮೆ ನಟಿ ರಮ್ಯಾ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಹೇಳಿಕೊಂಡು ಯೂಟ್ಯೂಬ್‌ನಲ್ಲಿ ಖ್ಯಾತಿ ಗಳಿಸಿದ ಹುಚ್ಚ ವೆಂಕಟ್, ಇದೀಗ ಮತ್ತೆ ತಮ್ಮ ಸಹನಟಿಯೊಂದಿಗೆ ಪೋಷಕರಿಗೆ ತಿಳಿಸದೆ ಮದುವೆಯಾಗಿ ಸುದ್ದಿಯಾಗಿದ್ದಾರೆ. ನನ್ನ ಮುಂದಿನ ಚಿತ್ರ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್ ಐಶ್ವರ್ಯ ಅವರನ್ನು ಅವರು ಕೈ ಹಿಡಿದಿದ್ದು, ತಾವಿಬ್ಬರೂ ಪರಸ್ಪರ ತುಂಬಾನೇ ಪ್ರೀತಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಸದ್ದಿಲ್ಲದೆ ಮದುವೆ ಮಾಡಿಕೊಂಡ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ

"ನಾವು ತಪ್ಪು ಮಾಡಿಲ್ಲ. ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಹೀಗೆ ಮದುವೆ ಮಾಡಿಕೊಳ್ಳಬೇಕಾಯಿತು. ಐಶ್ವರ್ಯಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಾನು ಅವಳನ್ನು ತುಂಬಾನೇ ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ನಮ್ಮಿಬ್ಬರನ್ನು ದೂರ ಮಾಡಬೇಡಿ. ನಮಗೆ ನಿಮ್ಮ ಮೇಲೆ ಪ್ರೀತಿ ಇರುವುದರಿಂದ ವಾಪಸಾಗುತ್ತಿದ್ದೇವೆ. ಪೊಲೀಸ್ ಆಯುಕ್ತರ ಕಚೇರಿಗೆ ನಾವು ಬರುತ್ತೇವೆ, ನೀವು ಅಲ್ಲೇ ಬನ್ನಿ,” ಎಂದು ಹುಚ್ಚ ವೆಂಕಟ್ ಅವರು ಐಶ್ವರ್ಯ ಹಾಗೂ ತನ್ನ ಪೋಷಕರಿಗೆ ಮನವಿ ಮಾಡಿದ್ದಾರೆ.

ಈ ಹಿಂದೆ, ರಿಯಾಲಿಟಿ ಶೋವೊಂದರ ಸಹಸ್ಪರ್ಧಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡು ದೊಡ್ಡ ಸುದ್ದಿ ಮಾಡಿದ್ದ ಹುಚ್ಚ ವೆಂಕಟ್ ಆತ್ಮಹತ್ಯೆಗೂ ಯತ್ನಿಸಿ ಸುದ್ದಿಯಾಗಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More