ಪ್ರತಿಷ್ಠಿತ ಸ್ವರಮೌಲಿ ಪ್ರಶಸ್ತಿಗೆ ಭಾಜನರಾದ ಗಾನಕೋಗಿಲೆ ಲತಾ ಮಂಗೇಶ್ಕರ್‌ 

ಭಾವಪೂರ್ಣ ಹಾಡುಗಳ ಮೂಲಕ ಜನರ ಮನ ಗೆದ್ದಿರುವ ಖ್ಯಾತ ಗಾಯಕಿ, ಭಾರತರತ್ನ ಪ್ರಶಸ್ತಿ ಪುರಸ್ಕೃತ ಲತಾ ಮಂಗೇಶ್ಕರ್ ಅವರಿಗೆ ‘ಸ್ವರ ಮೌಲಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆಧ್ಯಾತ್ಮಿಕ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ ಈ ಪ್ರಶಸ್ತಿ ನೀಡಿ ಗೌರವಿಸಿದರು

ಭಾವಪೂರ್ಣ ಹಾಡುಗಳ ಮೂಲಕ ಜನರ ಮನ ಗೆದ್ದಿರುವ ಭಾರತರತ್ನ ಪ್ರಶಸ್ತಿ ಪುರಸ್ಕೃತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ 'ಸ್ವರ ಮೌಲಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೆಹಲಿಯ 'ಪ್ರಭು ಕುಂಜ್'ನಲ್ಲಿರುವ ಲತಾ ಮಂಗೇಶ್ಕರ್ ಅವರ ನಿವಾಸದಲ್ಲಿ ಆಧ್ಯಾತ್ಮಿಕ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮಿ, ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಹೋದರಿಯರಾದ ಆಶಾ ಬೋಸ್ಲೆ, ಉಷಾ ಮಂಗೇಶ್ಕರ್ ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲತಾ ಮಂಗೇಶ್ಕರ್, “ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕೆ ಹಾಗೂ ವೈಯಕ್ತಿಕವಾಗಿ ಬಂದು ನನಗೆ ಪ್ರಶಸ್ತಿ ನೀಡಿ ಆಶೀರ್ವಾದಿಸಿರುವುದಕ್ಕೆ ನಾನು ಋುಣಿ. ಇದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ. ಇದಕ್ಕಾಗಿ ನಾನು ಸದಾ ಕೃತಜ್ಞಳಾಗಿದ್ದೇನೆ,” ಎಂದರು.

ಲತಾ ಮಂಗೇಶ್ಕರ್ ಗಾಯನದ ಪ್ರಸಿದ್ಧ ‘ಪಾನಿ ಪಾನಿ ರೇ’ ಹಾಡು

ಲತಾ ಮಂಗೇಶ್ಕರ್ ಕಂಠಸಿರಿಯಲ್ಲಿ ಕನ್ನಡ ಹಾಡು

ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಗಾಯನ ಲೋಕದಲ್ಲಿ ತೊಡಗಿಸಿಕೊಂಡಿರುವ ಲತಾ ಮಂಗೇಶ್ಕರ್ ಅವರಿಗೆ ಭಾರತ ರತ್ನ, ದಾದಾಸಾಹೇಬ್ ಫಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗಳು ದಕ್ಕಿವೆ. "ಪ್ರತಿಯೊಂದು ಪ್ರಶಸ್ತಿಯೂ ನನಗೆ ವಿಶೇಷವಾದದ್ದೇ. ಜನಪ್ರೀತಿ ಹಾಗೂ ಗೌರವದಿಂದ ಕೊಡುವ ಪ್ರಶಸ್ತಿಗಳಿಗೆ ಬೆಲೆ ಕಟ್ಟಲಾಗುವುದಿಲ್ಲ,” ಎಂದು ಲತಾ ಅವರು ಭಾವುಕರಾಗಿ ನುಡಿದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More