ಜನುಮದಿನ | 52ಕ್ಕೆ ಕಾಲಿಟ್ಟ ಬಾಲಿವುಡ್ ಮೋಹಕ ತಾರೆ ಮಾಧುರಿ ದೀಕ್ಷಿತ್‌

ತೊಂಬತ್ತರ ದಶಕದ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿ ಮಾಧುರಿ ದೀಕ್ಷಿತ್‌. ನಟನಾ ಪ್ರತಿಭೆ ಮತ್ತು ನೃತ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಮೋಹಕ ತಾರೆ ಈಕೆ. ಇಂದು (ಮೇ 15) ಅವರ 52ನೇ ಜನ್ಮದಿನ. ಅವರ ಸಿನಿಮಾಗಳ ಜನಪ್ರಿಯ ವಿಡಿಯೋ ಹಾಡುಗಳು ಇಲ್ಲಿವೆ

ಭಾರತದಲ್ಲಿ ತೊಂಬತ್ತರ ದಶಕಕ್ಕೆ ತನ್ನದೇ ಆದ ವಿಶೇಷತೆಯಿದೆ. ಅದು ಪಾಪ್‌ ಕಲ್ಚರ್‌ಗೆ ತೆರೆದುಕೊಳ್ಳುತ್ತಿದ್ದ ಕಾಲ. ಸಂದೇಶಕ್ಕಿಂತ ಮನರಂಜನೆಯೇ ಮುಖ್ಯ ಎಂದು ಬಾಲಿವುಡ್ ಸಿನಿಮಾಗಳು ತಯಾರಾಗುತ್ತಿದ್ದವು. ಈ ಹೊತ್ತಿನಲ್ಲಿ ನಾಯಕನಟಿಯಾಗಿ ಜನಪ್ರಿಯತೆ ಗಳಿಸಿದ ನಟಿ ಮಾಧುರಿ ದೀಕ್ಷಿತ್‌. ಉತ್ತಮ ನೃತ್ಯ, ನಟನೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲೇ ಸ್ಟಾರ್‌ಡಮ್‌ ಗಳಿಸಿದರು. ತಮ್ಮ ಸಮಕಾಲೀನ ನಾಯಕನಟಿಯರಿಗಿಂತ ಭಿನ್ನವಾಗಿ ಹಾದಿ ಕಂಡುಕೊಂಡ ನಟಿ ಎಲ್ಲಾ ಮಾದರಿಯ ಪಾತ್ರಗಳಿಗೆ ಹೊಂದಿಕೆಯಾದರು. ಪಕ್ಕದ್ಮನೆ ಹುಡುಗಿ, ಸಂಪ್ರದಾಯಸ್ಥ ಹೆಣ್ಣುಮಗಳಾಗಿ ಹಿರಿಯರಿಗೆ ಮೆಚ್ಚುಗೆಯಾದ ಮಾಧುರಿ ಯುವ ಸಮುದಾಯಕ್ಕೆ ಗ್ಲಾಮರ್‌ನೊಂದಿಗೆ ಹತ್ತಿರವಾದರು. ಆಕರ್ಷಕ ನಗು, ಅದ್ಭುತ ನೃತ್ಯದ ಜೊತೆಗೆ ಸಮಚಿತ್ತದ ನಡೆ ಅವರ ಯಶಸ್ಸಿನ ಸೂತ್ರ. ಗೆಲುವಿನ ಉತ್ತುಂಗದಲ್ಲಿದ್ದಾಗ ತೆರೆಮರೆಗೆ ಸರಿದ ನಟಿ ಪತಿ, ಸಂಸಾರ, ಮಕ್ಕಳ ಸಂಗದಲ್ಲಿ ಖುಷಿಯಾಗಿದ್ದರು. ಮತ್ತೆ ಲೈಮ್‌ಲೈಟ್‌ಗೆ ಮರಳಿದ ನಟಿ ಇದೀಗ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಿನಿಮಾಗಳ ಆಯ್ದ ಜನಪ್ರಿಯ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ

ತೇಜಾಬ್‌ (1988)

ಸೈಲಾಬ್‌ (1990)

ಠಾಣೇದಾರ್ (1990)

ಬೇಟಾ (1992)

ಖಳ್‌ನಾಯಕ್ f(1993)

ಅಂಜಾಮ್‌ (1994)

ಯಾರಾನಾ (1995)

ಪುಕಾರ್ (2000)

ದೇವದಾಸ್ (2002)

ಆಜಾ ನಾಚ್‌ಲೇ (2007)

ಇದನ್ನೂ ಓದಿ : ಟೀಸರ್‌ | ‘ಶಮ್ಶೇರಾ’ ಸಿನಿಮಾದಲ್ಲಿ ಡಕಾಯಿತನಾದ ರಣಬೀರ್ ಕಪೂರ್‌
ಸಂಜಯ್‌ ಕುರಿತು ಮತ್ತೊಂದು ಬಯೋಪಿಕ್‌ ಮಾಡಲಿದ್ದಾರೆ ನಿರ್ದೇಶಕ ಆರ್‌ಜಿವಿ
ಭಾರತದಲ್ಲಿನ ಯಶಸ್ಸಿನ ನಂತರ ಚೀನಾ ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ಸಂಜು’
ಜನುಮದಿನ | ಅರವತ್ತೆಂಟಾದರೂ ಕಿಮ್ಮತ್ತು ಕಳೆದುಕೊಳ್ಳದ ನಟ ನಾಸಿರ್
Editor’s Pick More