ಟ್ರೈಲರ್‌ | ಬಹುತಾರಾಗಣದ ಭರ್ಜರಿ ಆ್ಯಕ್ಷನ್ ಪ್ಯಾಕೇಜ್ ಹಿಂದಿ ಸಿನಿಮಾ‌ ‘ರೇಸ್‌ 3’

ರೆಮೋ ಡಿಸೋಜಾ ನಿರ್ದೇಶನದ ‘ರೇಸ್ 3’ ಟ್ರೈಲರ್ ಬಿಡುಗಡೆಯಾಗಿದೆ. ಕಳೆದೆರಡು ಸರಣಿಗಳಂತೆ ಈ ಬಾರಿಯೂ ಆ್ಯಕ್ಷನ್‌ಗೆ ಹೆಚ್ಚು ಸ್ಕೋಪ್‌ ಇದೆ. ಟ್ರೈಲರ್‌ನಲ್ಲಿ ಬಂದೂಕುಗಳ ಸದ್ದು, ಕಾರು-ಬೈಕ್‌ಗಳ ಹಾರಾಟದ ರೋಮಾಂಚಕ ದೃಶ್ಯಗಳಿವೆ. ಇದೇ ಜೂನ್ 15ರಂದು ಸಿನಿಮಾ ತೆರೆಕಾಣಲಿದೆ

ಪ್ರತಿ ವರ್ಷದಂತೆ ಈ ಬಾರಿಯೂ ಈದ್ ಹಬ್ಬಕ್ಕೆ ಸಲ್ಮಾನ್ ಸಿನಿಮಾ ಸಿದ್ಧವಾಗಿದ್ದು, ‘ರೇಸ್‌ 3’ನೊಂದಿಗೆ ಅವರು ತೆರೆಗೆ ಮರಳುತ್ತಿದ್ದಾರೆ. ‘ಟೈಗರ್ ಜಿಂದಾ ಹೈ’ ಚಿತ್ರದ ನಂತರ ತೆರೆಗೆ ಬರುತ್ತಿರುವ ಸಲ್ಮಾನ್‌ರ ಚಿತ್ರವಿದು. ರೆಮೋ ಡಿಸೋಜಾ ನಿರ್ದೇಶನದ ಚಿತ್ರದಲ್ಲಿ ಸಲ್ಮಾನ್‌ಗೆ ನಾಯಕಿಯಾಗಿ ಜಾಕ್ವಲಿನ್ ಫರ್ನಾಂಡಿಸ್‌ ಇದ್ದಾರೆ. ಅನಿಲ್ ಕಪೂರ್‌, ಬಾಬ್ಬಿ ಡಿಯೋಲ್‌, ಡೈಸಿ ಶಾ, ಸಾಕಿಬ್‌ ಸಲೀಂ ಚಿತ್ರದ ಇತರೆ ಪ್ರಮುಖ ತಾರೆಯರು. ಕಳೆದೆರಡೂ ಸರಣಿಗಳಲ್ಲಿ ನಟಿಸಿದ್ದ ಅನಿಲ್‌ ಕಪೂರ್‌ ಟ್ರೈಲರ್‌ನ ಹಲವು ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಚಿತ್ರದ ಪ್ರಮುಖ ಪಾತ್ರವಿರುವಂತೆ ತೋರುತ್ತದೆ. ಮುಂಬಯಿ, ಅಬು ದಾಬಿ, ಕಾಶ್ಮೀರ, ಲೇಹ್‌, ಲಡಾಕ್‌ ಪ್ರದೇಶಗಳಲ್ಲಿ ಸಿನಿಮಾ ಚಿತ್ರಿಸಲಾಗಿದೆ. ರಮೇಶ್ ತೌರಾನಿ ಮತ್ತು ಸಲ್ಮಾನ್‌ ಚಿತ್ರದ ನಿರ್ಮಾಪಕರು.

‘ರೇಸ್‌’ ಸರಣಿಯ ಮೊದಲ ಸಿನಿಮಾ ತೆರೆಕಂಡಿದ್ದು 2008ರಲ್ಲಿ. ಸೈಫ್ ಅಲಿ ಖಾನ್ ಚಿತ್ರದ ಹೀರೋ ಆಗಿದ್ದರು. ಈ ಚಿತ್ರದ ಯಶಸ್ಸಿನ ನಂತರ 2013ರಲ್ಲಿ ಸರಣಿ ತೆರೆಕಂಡಿತ್ತು. ಅಬ್ಬಾಸ್‌-ಮಸ್ತಾನ್‌ ನಿರ್ದೇಶನದಲ್ಲಿ ಸಿದ್ಧವಾಗಿದ್ದ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತದ ಹಣ ಗಳಿಸಿದ್ದವು. ನಂತರದ ಸೆಟ್ಟೇರಿದ ‘ರೇಸ್‌ 3’ನಲ್ಲಿ ತಂತ್ರಜ್ಞರು ಹಾಗೂ ಕಲಾವಿದರು ಬದಲಾದರು. ಮೂಲತಃ ನೃತ್ಯ ನಿರ್ದೇಶಕರಾದ ರೆಮೋ ಡಿಸೋಜಾ ನಿರ್ದೇಶನದ ಚಿತ್ರದ ಬಗ್ಗೆ ಸಹಜವಾಗಿಯೇ ಸಿನಿಪ್ರಿಯರಲ್ಲಿ ಕುತೂಹಲವಿದೆ. ರೆಮೋ ನಿರ್ದೇಶನದ ಈ ಹಿಂದಿನ ಚಿತ್ರಗಳಲ್ಲಿ ನೃತ್ಯವೇ ಪ್ರಮುಖ ಧಾರೆಯಾಗಿತ್ತು. ಅವರು ಆ್ಯಕ್ಷನ್‌ ಚಿತ್ರವನ್ನು ಹೇಗೆ ನಿಭಾಯಿಸಿರಬಹುದು ಎಂದು ಉದ್ಯಮ ಕೂಡ ಎದುರುನೋಡುತ್ತಿದೆ. ‘ರೇಸ್‌ 3’ ಸಿನಿಮಾ ಜೂನ್‌ 15ರಂದು ತೆರೆಕಾಣಲಿದೆ. ಈ ಮಧ್ಯೆ ಟ್ರೈಲರ್ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ತಮಾಷೆ, ಮೆಚ್ಚುಗೆಯ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : ಜನುಮದಿನ | 52ಕ್ಕೆ ಕಾಲಿಟ್ಟ ಬಾಲಿವುಡ್ ಮೋಹಕ ತಾರೆ ಮಾಧುರಿ ದೀಕ್ಷಿತ್‌

‘ರೇಸ್‌ 3’ ಟ್ರೈಲರ್‌ಗೆ ಸಿನಿಪ್ರಿಯರ ಪ್ರತಿಕ್ರಿಯೆಗಳು ಇಲ್ಲಿವೆ

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More