ವಿಡಿಯೋ | 34 ವರ್ಷಗಳ ನಂತರ ನಟಿ ಸರೋಜಾದೇವಿ ಜೊತೆ ಪುನೀತ್‌

ಎಂಬತ್ತರ ದಶಕದ ‘ಯಾರಿವನು’ (1984) ಚಿತ್ರದಲ್ಲಿ ಸರೋಜಾದೇವಿ ಅವರೊಂದಿಗೆ ಪುನೀತ್ ರಾಜಕುಮಾರ್ ಬಾಲನಟನಾಗಿ ಅಭಿನಯಿಸಿದ್ದರು. ಈಗ ಮೂವತ್ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ಹಿರಿಯ ನಟಿಯೊಂದಿಗೆ ಪುನೀತ್ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ

ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದೆ. ‘ಅಂಜನಿಪುತ್ರ’ ಚಿತ್ರದ ನಂತರ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಚಿತಾ ರಾಮ್‌. ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಸರೋಜಾದೇವಿ ನಟಿಸುವುದಾಗಿ ನಿರ್ದೇಶಕರು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಹೇಳಿದ್ದರು. ಇದೀಗ ಸರೋಜಾದೇವಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1984ರಲ್ಲಿ ದೊರೈ-ಭಗವಾನ್‌ ನಿರ್ದೇಶನದಲ್ಲಿ ತಯಾರಾಗಿದ್ದ ‘ಯಾರಿವನು’ ಚಿತ್ರದಲ್ಲಿ ಪುನೀತ್ ಬಾಲನಟನಾಗಿ ನಟಿಸಿದ್ದರು. ಈ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದಲ್ಲಿ ಪುನೀತ್‌ ಪಾತ್ರವೇ ಕೇಂದ್ರಬಿಂದು. ಚಿತ್ರದಲ್ಲಿನ ಪುನೀತ್‌-ಸರೋಜಾದೇವಿ ಅವರ ಪಿಕ್ಚರೈಸ್ ಅಗಿದ್ದ ‘ಕಣ್ಣಿಗೆ ಕಾಣುವ ದೇವರು ಎಂದರೆ’ ಹಾಡು ಜನಪ್ರಿಯಾಗಿತ್ತು. ಅದಾಗಿ ಮೂವತ್ನಾಲ್ಕು ವರ್ಷಗಳ ನಂತರ ಈಗ ಪುನೀತ್ ಮತ್ತೆ ಹಿರಿಯ ನಟಿಯೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.‌

ಪುನೀತ್ ಹಾಗೂ ಇತರೆ ಕಲಾವಿದರೊಂದಿಗಿನ ಬಿ ಸರೋಜಾದೇವಿ ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿವೆ. ನಟ ಪುನೀತ್‌ ರಾಜಕುಮಾರ್‌ ಅವರೊಂದಿಗೆ ಸೆಟ್‌ನಲ್ಲಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡು, “ಹಿರಿಯ ತಾರೆಯೊಂದಿಗೆ ಮೂವತ್ನಾಲ್ಕು ವರ್ಷಗಳ ನಂತರ ಮತ್ತೆ ನಟಿಸುತ್ತಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿ. ದೊಡ್ಡ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಋಣಿಯಾಗಿದ್ದೇನೆ,” ಎಂದು ಹೇಳಿಕೊಂಡಿದ್ದಾರೆ. ಪುನೀತ್‌ ರಾಜಕುಮಾರ್‌ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ನೂರಾರು ಅಭಿಮಾನಿಗಳು ಶೇರ್ ಮಾಡಿ ಖುಷಿ ಪಟ್ಟಿದ್ದಾರೆ.

Natasarvabhowma - ನಟಸಾರ್ವಭೌಮ first look teaser ನಿಮಗಾಗಿ ಇವತ್ತು ..ನೋಡಿ ಹರಸಿ..

Posted by Puneeth Rajkumar on Friday, March 16, 2018

‘ನಟಸಾರ್ವಭೌಮ’ ಚಿತ್ರದ ಟೀಸರ್‌

ಇದನ್ನೂ ಓದಿ : ಸಹನಟಿ ಐಶ್ವರ್ಯಾ ಜೊತೆಗಿನ ಮದುವೆ ನಿಜವಾದದ್ದಲ್ಲ ಎಂದ ಹುಚ್ಚ ವೆಂಕಟ್!
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More