ಟ್ರೈಲರ್‌ | ‘ಮಿಷನ್ ಇಂಪಾಸಿಬಲ್‌’ನೊಂದಿಗೆ ಮರಳಿ ಬಂದ ಟಾಮ್‌ ಕ್ರ್ಯೂಸ್‌

ಜನಪ್ರಿಯ ‘ಮಿಷನ್‌ ಇಂಪಾಸಿಬಲ್‌’ ಹಾಲಿವುಡ್ ಸಿನಿಮಾ ಸರಣಿಯ ಆರನೇ ವರ್ಷನ್‌ ‘ಮಿಷನ್: ಇಂಪಾಸಿಬಲ್‌ ಫಾಲ್‌ಔಟ್’ ತೆರೆಗೆ ಬರಲು ಸಿದ್ಧವಾಗಿದೆ. ಟಾಮ್‌ ಕ್ರ್ಯೂಸ್‌ ಅಭಿನಯದ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಆಗಿದ್ದು, ರೋಚಕ ಸನ್ನಿವೇಶಗಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿವೆ

‘ಮಿಷನ್ ಇಂಪಾಸಿಬಲ್‌’ ಸರಣಿಯ ಮೊದಲ ಸಿನಿಮಾ ತೆರೆಕಂಡಿದ್ದು 1996ರಲ್ಲಿ. ಈ ಚಿತ್ರದೊಂದಿಗೆ ಟಾಮ್‌ ಕ್ರ್ಯೂಸ್‌ ಜಗತ್ತಿನಾದ್ಯಂತ ಜನಪ್ರಿಯ ತಾರೆಯಾದರು. ಈಗ 22 ವರ್ಷಗಳ ನಂತರ ಆರನೇ ಸರಣಿ ತೆರೆಕಾಣುತ್ತಿದ್ದು, ಟಾಮ್ ಕ್ರ್ಯೂಸ್ ಚಾರ್ಮ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ‘ಈಥನ್ ಹಂಟ್‌’ ಪಾತ್ರದೊಂದಿಗೆ ಆರನೇ ಬಾರಿ ಟಾಮ್‌ ಕ್ರ್ಯೂಸ್ ಎಂದಿನಂತೆ ಮೋಡಿ ಮಾಡುವ ಸೂಚನೆ ನೀಡಿದ್ದಾರೆ. ಮೊದಲ ಟ್ರೈಲರ್‌ನಲ್ಲೇ ಭರಪೂರ ಆಕ್ಷನ್‌ ದೃಶ್ಯಗಳಿದ್ದವು. ಇದೀಗ ಬಿಡುಗಡೆಯಾಗಿರುವ ಎರಡನೇ ಟ್ರೈಲರ್‌ನಲ್ಲಿ ಚಿತ್ರದ ಕಥಾಹಂದರದ ಬಗ್ಗೆ ಸುಳಿವು ಸಿಗುತ್ತದೆ.

ಹೊಸ ಟ್ರೈಲರ್‌ನಲ್ಲಿ ಈಥನ್ ಹಂಟ್‌ (ಟಾಮ್ ಕ್ರ್ಯೂಸ್‌) ಹೊಸ ಮಿಷನ್‌ವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅಲೆಕ್ ಬಾಲ್ಡ್‌ವಿನ್‌ ಮತ್ತು ಏಂಜೆಲಾ ಬ್ಯಾಸೆಟ್‌ ಪಾತ್ರಗಳ ಅಣತಿಯಂತೆ ನಡೆದುಕೊಳ್ಳುತ್ತಾರೆ. ಟಾಮ್ ಕ್ರ್ಯೂಸ್ ಜೊತೆ ಹೆನ್ರೀ ಕೆವಿಲ್‌, ರೆಬೆಕ್ಕಾ ಫರ್ಗ್ಯೂಸನ್‌, ಸೈಮನ್‌ ಪೆಗ್‌, ವಿಂಗ್ ರೇಮ್ಸ್‌, ವೆನಿಸ್ಸಾ ಕಿರ್ಬಿ, ಮೈಖೇಲ್‌ ಮೊನಾಗನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕ್ರಿಸ್ಟೋಫರ್‌ ಮ್ಯಾಕ್‌ಕ್ವಾರಿ ಚಿತ್ರದ ನಿರ್ದೇಶಕ. ‘ಮಿಷನ್ ಇಂಪಾಸಿಬಲ್‌’ ಸರಣಿಯ ಮೊದಲೆರೆಡು ಚಿತ್ರಗಳ ನಿರ್ದೇಶಕರೂ ಇವರೇ.

ಇದನ್ನೂ ಓದಿ : ಚಿಕಿತ್ಸೆಯಲ್ಲಿರುವ ನಟ ಇರ್ಫಾನ್‌ ಟ್ವೀಟ್‌ನಿಂದ ಖುಷಿಯಾದ ಅಭಿಮಾನಿಗಳು

ಈ ಸರಣಿಗಳು ಮೈನವಿರೇಳಿಸುವ ಆಕ್ಷನ್‌ ಸನ್ನಿವೇಶಗಳಿಗೆ ಹೆಸರಾಗಿವೆ. ಸರಣಿಯ ಐದನೇ ಸಿನಿಮಾ 'ಮಿಷನ್: ಇಂಪಾಸಿಬಲ್‌-ರೋಗ್‌ ನೆಷನ್‌' 2015ರಲ್ಲಿ ತೆರೆ ಕಂಡಿತ್ತು. ಈ ಬಾರಿಯೂ ನಿರೀಕ್ಷೆ ಹುಸಿಯಾಗದು ಎನ್ನುತ್ತಾರೆ ನಿರ್ದೇಶಕರು. 2018ರ ಜು.27ರಂದು ‘ಮಿಷನ್: ಇಂಪಾಸಿಬಲ್‌ ಫಾಲ್‌ಔಟ್’ ತೆರೆಕಾಣಲಿದೆ.

ಸಂಜಯ್‌ ಕುರಿತು ಮತ್ತೊಂದು ಬಯೋಪಿಕ್‌ ಮಾಡಲಿದ್ದಾರೆ ನಿರ್ದೇಶಕ ಆರ್‌ಜಿವಿ
ಭಾರತದಲ್ಲಿನ ಯಶಸ್ಸಿನ ನಂತರ ಚೀನಾ ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ಸಂಜು’
ಜನುಮದಿನ | ಅರವತ್ತೆಂಟಾದರೂ ಕಿಮ್ಮತ್ತು ಕಳೆದುಕೊಳ್ಳದ ನಟ ನಾಸಿರ್
Editor’s Pick More