‘ರುಸ್ತುಂ’ ಆಕ್ಷನ್‌, ಫ್ಯಾಮಿಲಿ, ಡ್ರಾಮಾ ಎನ್ನುತ್ತಾರೆ ನಿರ್ದೇಶಕ ರವಿವರ್ಮ

ಶಿವ ರಾಜಕುಮಾರ್ ಅಭಿನಯದ ‘ರುಸ್ತುಂ’ ಹೊಸ ಸಿನಿಮಾದ ಒಂದು ಫೋಟೋ ಬಿಡುಗಡೆಯಾಗಿದೆ. ಆಕ್ಷನ್‌ ಜೊತೆಗೆ ಇದು ಫ್ಯಾಮಿಲಿ ಡ್ರಾಮಾ ಕೂಡ ಹೌದು ಎನ್ನುವ ಸೂಚನೆಯನ್ನು ನೀಡಿದ್ದಾರೆ ನಿರ್ದೇಶಕ ರವಿವರ್ಮ. ಬೆಂಗಳೂರಿನ ಮೊದಲ ಶೆಡ್ಯೂಲ್‌ ನಂತರ ಚಿತ್ರತಂಡ ಪಾಟ್ನಾಗೆ ತೆರಳಲಿದೆ

ಮೂಲತಃ ಸಾಹಸ ಸಂಯೋಜಕರಾಗಿರುವ ರವಿವರ್ಮ ಚೊಚ್ಚಲ ನಿರ್ದೇಶನದ ‘ರುಸ್ತುಂ’ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ‘ಕವಚ’ ಚಿತ್ರದ ನಂತರ ಶಿವ ರಾಜಕುಮಾರ್‌ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ರವಿವರ್ಮ ಚಿತ್ರದ ಒಂದು ಫೋಟೊ ಬಿಡುಗಡೆಗೊಳಿಸಿದ್ದಾರೆ. “ನಾನು ಸಾಹನ ನಿರ್ದೇಶಕ. ಸಹಜವಾಗಿಯೇ ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ ಆಕ್ಷನ್‌ ಇರುತ್ತದೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ ಇದು ಬರೀ ಆಕ್ಷನ್ ಅಲ್ಲ, ಇದೊಂದು ಫ್ಯಾಮಿಲಿ-ಆಕ್ಷನ್‌-ಡ್ರಾಮಾ ಸಿನಿಮಾ. ಅದಕ್ಕೆ ಮೊದಲ ಸ್ಟಿಲ್‌ ಆಗಿ ಇಂಥದ್ದೊಂದು ಫ್ಯಾಮಿಲಿ ಮೂಡ್‌ನ ಫೋಟೋ‌ ಬಿಡುಗಡೆಗೊಳಿಸಿದ್ದೀವಿ,” ಎನ್ನುತ್ತಾರೆ ರವಿವರ್ಮ. ಚಿತ್ರದಲ್ಲಿ ಶಿವ ರಾಜಕುಮಾರ್‌ ಪತ್ನಿಯಾಗಿ ಶ್ರದ್ಧಾ ಶ್ರೀನಾಥ್‌ ನಟಿಸುತ್ತಿದ್ದು, ಪುತ್ರಿಯಾಗಿ ನೈಲಾ ಇದ್ದಾಳೆ. ಹಿಟ್ ಸಿನಿಮಾ ‘ಮಫ್ತಿ’ಯಲ್ಲಿದ್ದ ಬಾಲೆ ಈಕೆ. ತಂಗಿ ಪಾತ್ರದಲ್ಲಿ ನಟಿ ಮಯೂರಿ ಇರುವುದು ವಿಶೇಷ.

ಮೊದಲ ಶೆಡ್ಯೂಲ್‌ ಬೆಂಗಳೂರಿನಲ್ಲಿ ಚಿತ್ರಿಸಿದ ನಂತರ ಪಾಟ್ನಾ ಮತ್ತು ಮುಂಬಯಿಗೆ ಚಿತ್ರತಂಡ ತೆರೆಳಲಿದೆಯಂತೆ. ‘ಟಗರು’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ಶಿವ ರಾಜಕುಮಾರ್‌ ಇಲ್ಲಿ ಮತ್ತೊಮ್ಮೆ ಖಾಕಿ ತೊಟ್ಟಿದ್ದಾರೆ. “ಕತೆ ನನ್ನದೇ. ನಮ್ಮ ತಂಡದ ಎಲ್ಲರೂ ಸೇರಿ ಚಿತ್ರಕತೆ ಹೆಣೆದಿದ್ದೇವೆ. ಖಳಪಾತ್ರಗಳಲ್ಲಿ ಕಾಲಿವುಡ್ ನಿರ್ದೇಶಕ ಮಹೇಂದ್ರನ್‌, ಹೈದರಾಬಾದ್‌ನ ಹರೀಶ್ ಉತ್ತಮ್‌, ಬೆಂಗಳೂರಿನ ಅರ್ಜುನ್‌ ಗೌಡ ಇರುತ್ತಾರೆ. ಚೆನ್ನೈ ಮೂಲದ ಕಲಾನಿರ್ದೇಶಕ ನಾಗು ಅವರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಅವರ ಕ್ರಿಯಾಶೀಲತೆ ಚಿತ್ರದ ಲುಕ್‌ ಬದಲಿಸಲಿದೆ. ಅವರೇ ಬೇಕೆಂದು ಡೇಟ್ಸ್‌ ಹೊಂದಿಸಿಕೊಂಡು ಚಿತ್ರೀಕರಣ ನಡೆಸುತ್ತಿದ್ದೇವೆ. ಇದು ಚಿತ್ರಕ್ಕೆ ವಿಶೇಷ ಮೆರುಗು ನೀಡಲಿದೆ,” ಎನ್ನುತ್ತಾರೆ ರವಿವರ್ಮ. ‘ಟಗರು’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಮಹೇನ್ ಸಿಂಹ ಇಲ್ಲಿಯೂ ಕ್ಯಾಮೆರಾ ನಿರ್ವಹಿಸುತ್ತಿದ್ದು, ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

‘ರುಸ್ತುಂ’ ಟೀಸರ್‌

ಇದನ್ನೂ ಓದಿ : ಮನದ ಮಾತು | ಸದೃಢ ನಾಯಕಿಪ್ರಧಾನ ಪಾತ್ರಗಳ ನಿರೀಕ್ಷೆಯಲ್ಲಿ ಆಶಿಕಾ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More