ಸ್ಯಾಂಡಲ್‌ವುಡ್‌ ನಟಿಯರ ಆಕರ್ಷಕ ಫೋಟೋಗಳ ಸೆಲೆಬ್ರಿಟಿ ಕ್ಯಾಲೆಂಡರ್

ನಾಯಕನಟಿಯರ ಫೋಟೋಶೂಟ್ ಮಾಡಿ ಕ್ಯಾಲೆಂಡರ್ ರೂಪಿಸುವ ಪರಿಪಾಠ ಬಾಲಿವುಡ್‌ನಲ್ಲಿ ಹಳೆಯದು. ಛಾಯಾಗ್ರಾಹಕ ಲೋಹಿತ್ ರಾಜ್‌ ಕಳೆದೆರೆಡು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲೂ ಈ ಪ್ರಯೋಗ ನಡೆಸಿದ್ದಾರೆ. ಹನ್ನೆರೆಡು ಕನ್ನಡ ನಟಿಯರ ಸೆಲೆಬ್ರಿಟಿ ಕ್ಯಾಲೆಂಡರ್ ಬಿಡುಗಡೆಯಾಗಿದೆ

ಸೆಲೆಬ್ರಿಟಿ ಕ್ಯಾಲೆಂಡರ್‌ ಟ್ರೆಂಡ್ ಬಾಲಿವುಡ್‌ನಲ್ಲಿ ದಶಕಗಳಿಂದಲೂ ಇದೆ. ಯುವನಟಿಯರ ಫೋಟೋಶೂಟ್‌ ನಡೆಸಿ, ವಿವಿಧ ಭಂಗಿಗಳ ಫೋಟೋಗಳನ್ನು ಆಕರ್ಷಕವಾಗಿ ಜೋಡಿಸಿ ಸೆಲೆಬ್ರಿಟಿ ಕ್ಯಾಲೆಂಡರ್ ರೂಪಿಸಲಾಗುತ್ತದೆ. ಈ ಕ್ಯಾಲೆಂಡರ್‌ಗಳು ಸಿನಿಮಾರಂಗದ ವಲಯದಲ್ಲೇ ಹಂಚಿಕೆಯಾಗುತ್ತವೆ. ಯುವನಟಿಯರಿಗೆ ಇದರಿಂದ ಸಿನಿಮಾ ಅವಕಾಶಗಳೂ ಸಿಗುವುದಿದೆ. ಕಳೆದೆರೆಡು ವರ್ಷಗಳಿಂದ ಛಾಯಾಗ್ರಾಹಕ ಲೋಹಿತ್‌ರಾಜ್‌ ಸ್ಯಾಂಡಲ್‌ವುಡ್‌ನಲ್ಲೂ ಸೆಲೆಬ್ರಿಟಿ ಕ್ಯಾಲೆಂಡರ್‌ ಹೊರತರುತ್ತಿದ್ದಾರೆ. ಈ ಬಾರಿಯ ಕ್ಯಾಲೆಂಡರ್‌ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಚಿತಾ ಪಡುಕೋಣೆ, ಭಾವನಾ ರಾವ್‌, ಸುಕೃತಾ, ಕೀರ್ತಿ ಲಕ್ಷ್ಮಿ, ಶ್ರವ್ಯ, ಆಕಾಂಕ್ಷ, ರಾಧಿಕಾ ಚೇತನ್‌, ಸಂಗೀತಾ ಭಟ್‌, ಶುಭಾ ಪೂಂಜಾ, ಸುಶ್ಮಿತಾ, ನಿಖಿತಾ ನಾರಾಯಣ್‌ ಆಕರ್ಷಕ ಫೋಟೋಗಳಿವೆ. 2018ರ ಜೂನ್‌ನಿಂದ 2019ರ ಮೇ ತಿಂಗಳವರೆಗಿನ ಕ್ಯಾಲೆಂಡರ್ ರೂಪಿಸಿದ್ದಾರೆ ಲೋಹಿತ್‌.

ವೃತ್ತಿಪರ ಛಾಯಾಗ್ರಾಹಕರಾಗಿರುವ ಲೋಹಿತ್‌ ಅವರಿಗೆ ಸಿನಿಮಾರಂಗದ ಬಗ್ಗೆ ಪ್ಯಾಷನ್ ಇದೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಗುರಿ ಹೊಂದಿದ್ದಾರೆ. “ಕಳೆದೆರೆಡು ವರ್ಷಗಳ ಸೆಲೆಬ್ರಿಟಿ ಕ್ಯಾಲೆಂಡರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ, ಈ ಬಾರಿಯೂ ಕ್ಯಾಲೆಂಡರ್ ರೂಪಿಸಿದ್ದಾರೆ. ನಟಿಯರ ಡೇಟ್ಸ್ ಸಮಸ್ಯೆ ಎದುರಾಗಿದ್ದರಿಂದ 2018ರ ಜನವರಿಗೆ ಕ್ಯಾಲೆಂಡರ್‌ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಈ ವರ್ಷದ ಜೂನ್‌ನಿಂದ 2019ರ ಮೇವರೆಗೆ ರೂಪಿಸಲಾಯ್ತು. ನಟಿಯರು ಹಾಗೂ ಸ್ಯಾಂಡಲ್‌ವುಡ್‌ನ ಕೆಲ ಪ್ರಮುಖರ ಸಹಕಾರದಿಂದ ಸುಂದರ ಕ್ಯಾಲೆಂಡರ್‌ ರೂಪಿಸಲು ಸಾಧ್ಯವಾಯ್ತು,” ಎಂದು ಪ್ರಾಜೆಕ್ಟ್‌ಗೆ ನೆರವಾದ ಎಲ್ಲರಿಗೂ ಲೋಹಿತ್‌ ಧನ್ಯವಾದ ಅರ್ಪಿಸುತ್ತಾರೆ.

ಸೆಲೆಬ್ರಿಟಿ ಕ್ಯಾಲೆಂಡರ್‌ನಲ್ಲಿನ ನಟಿಯರ ಆಕರ್ಷಕ ಫೋಟೋಗಳು ಇಲ್ಲಿವೆ

ಇದನ್ನೂ ಓದಿ : ರಜನೀ ‘ಕಾಲ’ನಿಗೆ ಕಾವೇರಿ ತಳುಕು; ಪ್ರಕಾಶ್ ರೈ ಪ್ರಶ್ನೆ, ವಿಶಾಲ್ ವಿಶ್ವಾಸ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More