ಜನುಮದಿನ | ಎಸ್‌ಪಿಬಿ ಹಾಡಿರುವ ಸಿನಿಮಾ ವಿಡಿಯೋ ಹಾಡುಗಳ ಗುಚ್ಛ

ಭಾರತದ ಹೆಮ್ಮೆಯ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ವಿವಿಧ ಭಾಷೆಗಳ ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದಾರೆ. ‘ನಕ್ಕರೆ ಅದೇ ಸ್ವರ್ಗ’ (1967) ಚಿತ್ರದ ‘ಕನಸಿದೋ’ ಅವರ ಮೊದಲ ಕನ್ನಡ ಹಾಡು. ಇಂದು (ಜೂ 4) ಅವರ 72ನೇ ಜನ್ಮದಿನ. ಎಸ್ಪಿಬಿ ವಿಡಿಯೋ ಹಾಡುಗಳ ಗುಚ್ಛ ಇಲ್ಲಿದೆ

ವಿವಿಧ ಭಾಷೆಗಳ ನೂರಿಪ್ಪತ್ತಕ್ಕೂ ಹೆಚ್ಚು ನಾಯಕನಟರಿಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಅತಿ ಹೆಚ್ಚು ಹಾಡಿಗಳಿಗೆ ದನಿಯಾಗಿರುವ ದಾಖಲೆಯೂ ಅವರ ಹೆಸರಲ್ಲಿದೆ. ವೈವಿಧ್ಯಮಯ ಹಾಡುಗಳ ಮೂಲಕ ಭಾರತೀಯ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಎಸ್ಪಿಬಿ ಇಂದು 72ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಮಾತೃಭಾಷೆ ತೆಲುಗಾದರೂ ಯಾವುದೇ ಭಾಷೆಯಲ್ಲಿ ಹಾಡಿದರೂ ಆಯಾ ಭಾಷಿಕರನ್ನು ಬೆರಗುಗೊಳಸುವಂತೆ ಹಾಡುತ್ತಾರೆ. ಯಾವುದೇ ಪ್ರಾದೇಷಿಕ ಭಾಷೆಗೆ ಹಾಡುವಾಗ ಆಯಾ ಪ್ರಾದೇಷಿಕತೆಯ ಸೊಗಡನ್ನು ಮನಸಲ್ಲಿಟ್ಟುಕೊಂಡು ಹಾಡುತ್ತಾರೆ ಎನ್ನುವುದು ವಿಶೇಷ. "ಎಸ್ಪಿಬಿ ತುಂಬಾ ಒಳ್ಳೇ ಸ್ವರಜ್ಞಾನಿ. ದೊಡ್ಡ ಸಾಧಕರಾದರೂ ತಾವು ಸಂಗೀತ ಕಲಿತವರಲ್ಲ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಈಗಲೂ ಹೇಳಿಕೊಳ್ಳುತ್ತಾರೆ. ಅವರ ದನಿಯಲ್ಲಿನ ಮಾರ್ಪಾಡು ಇದೆಯಲ್ಲ, ಅದನ್ನು ಅವರ ಹಾಗೆ ಕೊಡಬಲ್ಲಂತಹ ಮತ್ತೊಬ್ಬ ಗಾಯಕ ಬಹುಶಃ ಇರಲಾರರು. ಆರಂಭದಲ್ಲಿ ಅವರಿಗಿದ್ದಂಥ ಪಿಚ್‌ ಫೋರ್ಸ್‌ ಈಗಲೂ ಹಾಗೇ ಇದೆ. ಅದೇ ಧ್ವನಿ, ಡೆಪ್ತ್‌, ಮಾಧುರ್ಯ. ಇದನ್ನು ಕಾಪಾಡಿಕೊಂಡು ಬಂದಿರುವುದು ದೊಡ್ಡ ತಪಸ್ಸು" ಎಂದು ತಾವು ಕಂಡ ಎಸ್ಪಿಬಿ ಅವರನ್ನು ಸ್ಮರಿಸುತ್ತಾರೆ ಕನ್ನಡದ ಜನಪ್ರಿಯ ಸಂಗೀತ ಸಂಯೋಜಕ ಕೆ ಕಲ್ಯಾಣ್‌. ಎಸ್ಪಿಬಿ ಹಾಡಿರುವ ನೂರಾರು ಜನಪ್ರಿಯ ಸಿನಿಮಾ ಹಾಡುಗಳ ಪೈಕಿ ಆಯ್ದ ವಿಡಿಯೋ ಹಾಡುಗಳು ಇಲ್ಲಿವೆ

ಸಿನಿಮಾ: ತಿರುಗು ಬಾಣ (1983) | ಸಂಗೀತ: ಸತ್ಯಂ

ಸಿನಿಮಾ: ಗಾನಯೋಗಿ ಪಂಚಾಕ್ಷರಿ ಗವಾಯಿ (1995) | ಸಂಗೀತ: ಹಂಸಲೇಖ

ಸಿನಿಮಾ: ನಾ ನಿನ್ನ ಬಿಡಲಾರೆ (1979) | ಸಂಗೀತ: ರಾಜನ್‌-ನಾಗೇಂದ್ರ

ಸಿನಿಮಾ: ಯುಗಪುರುಷ (1989) | ಸಂಗೀತ: ಹಂಸಲೇಖ

ಸಿನಿಮಾ: ಪಲ್ಲವಿ ಅನುಪಲ್ಲವಿ (1983) | ಸಂಗೀತ: ಇಳಯರಾಜ

ಸಿನಿಮಾ: ಶ್ರೀ ಮಂಜುನಾಥ (2001) | ಸಂಗೀತ: ಹಂಸಲೇಖ

ಸಿನಿಮಾ: ಸೋಲಿಲ್ಲದ ಸರದಾರ (1992) | ಸಂಗೀತ: ಹಂಸಲೇಖ

ಸಿನಿಮಾ: ನಮ್ಮೂರ ಹಮ್ಮೀರ (1990) | ಸಂಗೀತ: ಹಂಸಲೇಖ

ಸಿನಿಮಾ: ಡಾನ್ಸ್ ರಾಜ ಡಾನ್ಸ್‌ (1987) | ಸಂಗೀತ: ವಿಜಯ್ ಆನಂದ್‌

ಸಿನಿಮಾ: ಸೀತಾ ರಾಮು (1979) | ಸಂಗೀತ: ಸತ್ಯಂ

ಇದನ್ನೂ ಓದಿ : ಜನುಮದಿನ | ಇಳಯರಾಜ ಸಂಯೋಜನೆಯ ಸಿನಿಮಾ ವಿಡಿಯೋ ಹಾಡುಗಳ ಗುಚ್ಛ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More