ಬೋಲ್ಡ್ ನಟಿ ಸ್ವರ ಭಾಸ್ಕರ್‌ರ ಮತ್ತೊಂದು ಬೋಲ್ಡ್ ವೆಬ್‌ ಸೀರೀಸ್‌ ‘ರಸಭರಿ’

ಬಾಲಿವುಡ್ ನಟಿ ಸ್ವರ ಭಾಸ್ಕರ್ ‘ರಸಭರಿ’ ಎನ್ನುವ ವೆಬ್‌ ಸೀರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೀರ್‌ ದಿ ವೆಡ್ಡಿಂಗ್‌’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗಳಿಗೆ ಆಹಾರವಾದ ಸ್ವರ, ವೆಬ್‌ ಸೀರೀಸ್‌ನಲ್ಲೂ ಮತ್ತೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ಇತ್ತೀಚೆಗೆ ಸ್ವರ ಭಾಸ್ಕರ್ ಏನೇ ಮಾಡಿದರೂ ವಿವಾದವಾಗುತ್ತಿದೆ. ಬೋಲ್ಡ್ ಹೇಳಿಕೆಗಳನ್ನು ನೀಡಿ ಒಂದೆಡೆ ಸುದ್ದಿಯಾದರೆ, ಮತ್ತೊಂದೆಡೆ ಬೋಲ್ಡ್ ನಟನೆಯಿಂದ ಸುದ್ದಿಯಾದರು. ಸಾಮಾಜಿಕ ತಾಣಗಳಲ್ಲಿ ಸ್ವರ ಭಾಸ್ಕರ್ ಅವರ ನಟನೆ ಬಗ್ಗೆ ಕಮೆಂಟುಗಳ ರಾಶಿಯೇ ಬೀಳುತ್ತಿರುತ್ತವೆ. ಆದರೆ, ಸ್ವರ ಸದಾ ವಿಭಿನ್ನ ಪಾತ್ರಗಳಲ್ಲಿ ಹೊಸತನವನ್ನು ಹುಡುಕುವ ನಟಿ. ಹೀಗಾಗಿ ಫೀಚರ್‌ ಫಿಲ್ಮ್‌ಗಳ ಜೊತೆ ಜೊತೆಗೆ ಅವರು ವೆಬ್ ಸೀರಿಸ್‌ನಲ್ಲೂ ನಟಿಸುತ್ತಿದ್ದಾರೆ.

ವೆಬ್‌ ಸೀರೀಸ್‌ನಲ್ಲಿ ಸ್ವರ ಭಾಸ್ಕರ್ ‘ಶಾನೂ’ ಎನ್ನುವ ಹೆಸರಿನ ಶಿಕ್ಷಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉತ್ತರ ಪ್ರದೇಶದ ಚಿಕ್ಕ ಹಳ್ಳಿಯಲ್ಲಿನ ಮೀರತ್ ಸ್ಕೂಲ್‌ನ ಶಿಕ್ಷಕಿ ಶಾನೂ. ಅಲ್ಲಿ ೧೧ನೇ ಕ್ಲಾಸಿನ ಹುಡುಗ ನಂದನಿಗೆ ಅಚ್ಚುಮೆಚ್ಚಿನ ಶಿಕ್ಷಕಿ. ಇವರಿಬ್ಬರ ನಡುವೆ ನಡೆಯುವ ಕತೆಯೇ ‘ರಸಭರಿ’ ವೆಬ್‌ ಸಿರೀಸ್. ಟೀಚರ್ ಮೇಲಾಗುವ ವಿದ್ಯಾರ್ಥಿಗಳ ವ್ಯಾಮೋಹದ ಸುತ್ತ ಕತೆ ಇದೆ.

‘ರಸಭರಿ’ ದೇಸಿತನವನ್ನು, ಹಳ್ಳಿಗಾಡಿನ ಸೊಗಡನ್ನು ಕಟ್ಟಿ ಕೊಡುತ್ತದೆ. ಹತ್ತು ಎಪಿಸೋಡ್‌ಗಳ ಸರಣಿ ಇದಾಗಿದೆ. ನಿಖಿಲ್ ಭಟ್ ನಿರ್ದೇಶನದೊಂದಿಗೆ ತಯಾರಾಗುತ್ತಿರುವ ಇದು, ಸ್ವರ ನಟಿಸುತ್ತಿರುವ ಎರಡನೇ ವೆಬ್ ಸಿರೀಸ್.

ನಾನು ಮಾಡುತ್ತಿರುವ ಈ ಶಾನೂ ಪಾತ್ರ ಸಮಾಜದ ಕೆಲವು ಸಂಗತಿಗಳ ಮೇಲೆ ಬೆಳಕನ್ನು ಚೆಲ್ಲಲು ಪ್ರಯತ್ನ ಮಾಡುತ್ತದೆ. ನನ್ನನ್ನು ನಾನು ಕ್ರಿಯಾತ್ಮಕವಾಗಿ ಬದಲಾಯಿಸಿಕೊಳ್ಳಲು ಇಂತಹ ಭಿನ್ನ ಪಾತ್ರಗಳನ್ನೇ ಹುಡುಕುತ್ತೇನೆ.
ಸ್ವರ ಭಾಸ್ಕರ್

ಈ ವೆಬ್ ಸಿರೀಸ್ ಅನ್ನು ಅಪ್ಲಾಜ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ ಅಡಿಯಲ್ಲಿ ತನ್ವೀರ್ ಬುಕ್ವಾಲಾ ನಿರ್ಮಿಸುತ್ತಿದ್ದಾರೆ. ಶಂತನು ಶ್ರೀವಾಸ್ತವ್ ಚಿತ್ರಕತೆ ಬರೆಯುತ್ತಿದ್ದು, ಆಯುಶ್ಮಾನ್ ಸೆಕ್ಸೆನಾ ಹಾಗು ಸ್ವರ ಭಾಸ್ಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇದನ್ನೂ ಓದಿ : ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರ ಭಾಸ್ಕರ್‌ ಮಾತು ಸತ್ಯವೇ?

ಇತ್ತೀಚೆಗೆ ಬಿಡುಗಡೆಯಾದ ಸ್ವರ ನಟನೆಯ ‘ವೀರ್‌ ದಿ ವೆಡ್ಡಿಂಗ್’ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನಾಲ್ಕು ಯುವತಿಯರ ಕುರಿತಾದ ಈ ಚಿತ್ರದಲ್ಲಿ ಸ್ವರ ಭಾಸ್ಕರ್ ಕೂಡ ಒಬ್ಬರು. ಸ್ವರ ಈ ಸಿನಿಮಾದಲ್ಲಿ ಕೆಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಹೀಗಾಗಿ, ಸಾಮಾಜಿಕ ತಾಣಗಳಲ್ಲಿ ಅವರ ನಟನೆ ಸಾಕಷ್ಟು ವಿಮರ್ಶೆಗೂ ಒಳಗಾಗಿದೆ. ಸ್ವರ ಗಟ್ಟಿ ಮನಸ್ಸಿನವರಾದ ಕಾರಣ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More