ಬಪ್ಪಿ ಲಹರಿ ಸಂಗೀತ ಸಂಯೋಜನೆಗೆ ಹಾಡಲಿದ್ದಾರೆ ಗಾಯಕ ಎಲ್ಟನ್‌ ಜಾನ್

ಬಾಲಿವುಡ್‌ ಸಂಗೀತ ಸಂಯೋಜಕ ಬಪ್ಪಿ ಲಹರಿ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ವೊಂದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಅವರು ಅಮೆರಿಕ ರ‍್ಯಾಪ್ ಸಿಂಗರ್‌ ಸ್ನೋಪ್‌ ಡೋಗ್‌ ಜೊತೆ ಕೆಲಸ ಮಾಡಿದ್ದರು. ಈಗ ಖ್ಯಾತ ಹಾಲಿವುಡ್‌ ಗಾಯಕ ಎಲ್ಟನ್ ಜಾನ್‌ಗೆ ಸಂಗೀತ ಸಂಯೋಜಿಸಲಿದ್ದಾರೆ

ಹಿಂದಿ ಚಿತ್ರರಂಗದ ಎಪ್ಪತ್ತು, ಎಂಬತ್ತರ ದಶಕಗಳ ಸಂಗೀತ ಸಂಯೋಜಕ ಬಪ್ಪಿ ಲಹರಿ. ಬಾಲಿವುಡ್‌ನಲ್ಲಿ ಡಿಸ್ಕೋ ಮ್ಯೂಸಿಕ್‌ ಜನಪ್ರಿಯಗೊಳಿಸಿದ ಸಂಗೀತಗಾರ. ಅವರ ಕೆಲವು ಸಂಯೋಜನೆಗಳು ಈ ಹೊತ್ತಿಗೂ ಸಿನಿಪ್ರಿಯರ ಫೇವರಿಟ್‌. ಅವರ ಸಂಯೋಜನೆಯ ‘ತಮ್ಮಾ ತಮ್ಮಾ’, ‘ಝುಬಿ ಝುಬಿ’, ‘ರಾತ್‌ ಬಾಕಿ’ ಹಾಡುಗಳು ರೀಮಿಕ್ಸ್‌ಗಳು ಇತ್ತೀಚಿನ ಸಿನಿಮಾಗಳಲ್ಲಿ ಬಳಕೆಯಾಗಿದ್ದವು. ತೊಂಬತ್ತರ ದಶಕದ ನಂತರ ತೆರೆಮರೆಗೆ ಸರಿದಿದ್ದ ಅವರು ಆಲ್ಬಂಗಳ ಮೂಲಕ ಅಗಾಗ ಸುದ್ದಿಯಲ್ಲಿರುತ್ತಿದ್ದರು. 2015ರಲ್ಲಿ ಅಮೆರಿಕ ರ‍್ಯಾಪ್‌ ಸಿಂಗರ್ ಸ್ನೂಪ್‌ ಡೋಗ್‌ ಜೊತೆ ಆಲ್ಬಂಗೆ ಕೆಲಸ ಮಾಡಿದ್ದರು. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗೆ ಅವರು ಕೆಲಸ ಮಾಡಲಿದ್ದಾರೆ. ಜನಪ್ರಿಯ ಹಾಲಿವುಡ್ ಗಾಯಕ ಎಲ್ಟನ್ ಜಾನ್‌ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯಿನ್ನೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳುವ ಅವರು ಅಭಿಮಾನಿಗಳಿಗೆ ಇದೊಂದು ಹೊಸ ಅನುಭವ ನೀಡಲಿದೆ ಎನ್ನುತ್ತಾರೆ.

ಕಳೆದ ವರ್ಷ ತೆರೆಕಂಡಿದ್ದ ಮ್ಯಾಥ್ಯೂ ವಾನ್‌ ನಿರ್ದೇಶನದ ‘ಕಿಂಗ್ಸ್‌ಮ್ಯಾನ್‌: ದಿ ಗೋಲ್ಡನ್ ಸರ್ಕಲ್‌’ ಹಾಲಿವುಡ್‌ ಚಿತ್ರದಲ್ಲಿ ಬಪ್ಪಿ ಲಹರಿ ಪಾಲ್ಗೊಳ್ಳುವಿಕೆಯಿತ್ತು. ಈ ಚಿತ್ರದಲ್ಲಿ ಗಾಯಕ ಎಲ್ಪಿನ್ ಜಾನ್‌ ನಟಿಸಿದ್ದರು. ಈ ಚಿತ್ರದ ಹಿಂದಿ ಅವತರಣಿಕೆಯಲ್ಲಿನ ಎಲ್ಟನ್ ಪಾತ್ರಕ್ಕೆ ಬಪ್ಪಿ ಡಬ್ ಮಾಡಿದ್ದರು. ಈಗ ಅವರಿಗಾಗಿ ಸಂಗೀತ ಸಂಯೋಜಿಸುವ ಅವಕಾಶ ಅವರದಾಗಿದೆ. ಬಾಲಿವುಡ್‌ನಲ್ಲಿ ಬಪ್ಪಿ ಲಹರಿ ‘ಗೋಲ್ಡ್‌ ಮ್ಯಾನ್‌’ ಎಂದೇ ಕರೆಸಿಕೊಳ್ಳುತ್ತಾರೆ. ಕೊರಳಿಗೆ ದಪ್ಪನೆಯ ಬಂಗಾರದ ಸರಗಳು, ಕೈಬೆರಳುಗಳಿಗೆ ಉಂಗುರಗಳನ್ನು ತೊಟ್ಟು ಕಾಣಿಸಿಕೊಳ್ಳುವ ಅವರನ್ನು ಸಿನಿಪ್ರಿಯರು ‘ಗೋಲ್ಡ್‌ಮ್ಯಾನ್‌’ ಎನ್ನುತ್ತಾರೆ. “ಕಳೆದ ನಲವತ್ತೈದು ವರ್ಷಗಳಿಂದ ಸಿನಿಮಾ, ಸಂಗೀತ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದೇನೆ. ಅವರೆಂದಿಗೂ ನಮ್ಮಂತಹ ಕಲಾವಿದರನ್ನು ಪೋಷಿಸುತ್ತ ಬಂದಿದ್ದಾರೆ. ಹೊಸ ಯೋಜನೆಗೂ ಅವರ ಬೆಂಬಲ ಇರುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇನೆ,” ಎನ್ನುವ ಬಪ್ಪಿ, ಸದ್ಯ ಮೂರು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ : ಸಂಭಾಷಣೆಕಾರ ಮಾಸ್ತಿ ಮನದ ಮಾತು | ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ

ಬಪ್ಪಿ ಲಹರಿ ಸಂಯೋಜನೆಯ ಆಯ್ದ ಜನಪ್ರಿಯ ವಿಡಿಯೋ ಹಾಡುಗಳು ಇಲ್ಲಿವೆ

ಥಾನೇದಾರ್‌ (1990)

ನಮಕ್ ಹರಾಮ್‌ (1982)

ಡ್ಯಾನ್ಸ್ ಡ್ಯಾನ್ಸ್‌ (1987)

ಮನೋಕಾಮ್ನಾ (1980)

ಸಾಹೇಬ್‌ (1985)

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More