ವಿಡಿಯೋ | ಇನ್‌ಸ್ಟಾಗ್ರಾಂನಲ್ಲಿ ಮದುವೆ ವಿಡಿಯೋ ಶೇರ್ ಮಾಡಿದ ಸಮಂತಾ

ಟಾಲಿವುಡ್‌ನ ಖ್ಯಾತ ತಾರೆಯರಾದ ನಾಗ ಚೈತನ್ಯ ಮತ್ತು ಸಮಂತಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮದುವೆಯಾಗಿದ್ದರು. ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದ ವಿಡಿಯೋವನ್ನು ನಟಿ ಸಮಂತಾ ಅಭಿಮಾನಿಗಳಿಗಾಗಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ

ಟಾಲಿವುಡ್‌ನ ಜನಪ್ರಿಯ ತಾರೆಯರಾದ ನಾಗ ಚೈತನ್ಯ ಮತ್ತು ಸಮಂತಾ ವಿವಾಹ ಕಳೆದ ಅಕ್ಟೋಬರ್‌ನಲ್ಲಿ ನೆರವೇರಿತ್ತು. ಇಬ್ಬರದ್ದೂ ಎರಡು ವರ್ಷಗಳ ಪ್ರೀತಿ. ತೆರೆ ಮೇಲೆ ಜೋಡಿಯಾಗಿ ಸಿನಿಪ್ರೇಮಿಗಳ ಮನಸ್ಸು ಗೆದ್ದಿದ್ದ ಇವರೀಗ ತೆಲುಗು ಚಿತ್ರರಂಗದ ಸ್ಟಾರ್‌ ದಂಪತಿ. ಗೋವಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್‌ ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಇವರ ಮದುವೆ ನಡೆದಿತ್ತು. ಈ ಸಮಾರಂಭದಲ್ಲಿ ಎರಡು ಕುಟುಂಬಗಳ ಆಪ್ತರಷ್ಟೇ ಭಾಗವಹಿಸಿದ್ದರು. ನಾಗ ಚೈತನ್ಯ ಅವರ ತಂದೆ, ನಟ ನಾಗಾರ್ಜುನ ಅವರು ‌ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಶೇರ್‌ ಮಾಡಿ ಅಭಿಮಾನಿಗಳ ಕುತೂಹಲ ನೀಗಿಸಿದ್ದರು. ಇದೀಗ ಮದುವೆಯಾಗಿ ಎಂಟು ತಿಂಗಳ ನಂತರ ನಟಿ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮದುವೆ ವಿಡಿಯೋ ಶೇರ್ ಮಾಡಿದ್ದಾರೆ. ಪುಟ್ಟಪುಟ್ಟ ತುಣುಕುಗಳೊಂದಿಗೆ ಅಕರ್ಷಕವಾಗಿ ಎಡಿಟ್ ಮಾಡಿರುವ ವಿಡಿಯೋದಲ್ಲಿ ದಂಪತಿಗಳ ಜೊತೆ ಟಾಲಿವುಡ್‌ನ ಹಲವು ತಾರೆಯರಿದ್ದಾರೆ.

ಇದನ್ನೂ ಓದಿ : ‘ಕಾಲ’ ರಜನೀ ಚಿತ್ರವಷ್ಟೇ ಅಲ್ಲ, ನಿರ್ದೇಶಕ ರಂಜಿತ್‌ರ ರಾಜಕೀಯ ಹೇಳಿಕೆ ಕೂಡ!

‘ಯೇ ಮಾಯೆ ಚೇಸಾವೆ’ ಸೂಪರ್‌ಹಿಟ್‌ ಚಿತ್ರದಲ್ಲಿ ಮೊದಲ ಬಾರಿ ನಾಗ ಚೈತನ್ಯ ಮತ್ತು ಸಮಂತಾ ಜೊತೆಯಾಗಿದ್ದರು. ಈ ಚಿತ್ರವಲ್ಲದೆ, ‘ವಿನ್ನೈಥಾಂಡಿ ವರುವಾಯ’, ‘ತ್ರಯಂ’, ‘ಆಟೋನಗರ್ ಸೂರ್ಯ’, ‘ಮನಂ’ ಚಿತ್ರಗಳಲ್ಲಿ ಇಬ್ಬರೂ ಜೋಡಿಯಾಗಿ ನಟಿಸಿದ್ದಾರೆ. ಮದುವೆ ನಂತರ ಶಿವ ನಿರ್ದೇಶನದ ತೆಲುಗು ಚಿತ್ರವೊಂದಕ್ಕೆ ಇಬ್ಬರೂ ಸಹಿ ಹಾಕಿದ್ದು, ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ. ಮದುವೆ ನಂತರ ನಟಿ ಸಮಂತಾ ಅಭಿನಯದ ನಾಲ್ಕು ಸಿನಿಮಾಗಳು ತೆರೆಕಂಡಿವೆ. ಸಮಂತಾರ ‘ರಾಜು ಗಾರಿ ಗಧಿ 2’, ‘ಮರ್ಸೆಲ್‌’, ರಂಗಸ್ಥಳಂ’, ‘ಮಹಾನಟಿ’ ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿವೆ. ಪ್ರಸ್ತುತ ಅವರೀಗ ಸೂಪರ್‌ಹಿಟ್‌ ‘ಯೂ ಟರ್ನ್‌’ ಕನ್ನಡ ಸಿನಿಮಾದ ತೆಲುಗು ಮತ್ತು ತಮಿಳು ಅವತರಣಿಕೆಯ ಚಿತ್ರೀಕರಣದಲ್ಲಿದ್ದಾರೆ. ನಾಗ ಚೈತನ್ಯ ಅಭಿನಯದ ‘ಸವ್ಯಸಾಚಿ’ ತೆಲುಗು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More