ವಿಡಿಯೋ | ನಾಟಕ ಆಧರಿಸಿದ ಕ್ರೈಂ ಥ್ರಿಲ್ಲರ್‌ ಸಿನಿಮಾ ‘ಆ ಕರಾಳ ರಾತ್ರಿ’

ಮೋಹನ್ ಹಬ್ಬು ರಚನೆಯ ನಾಟಕ ಆಧರಿಸಿ ತಯಾರಾಗಿದೆ ಕ್ರೈಂ ಥ್ರಿಲ್ಲರ್ ಸಿನಿಮಾ‌ ‘ಆ ಕರಾಳ ರಾತ್ರಿ’. ಎಂಬತ್ತರ ದಶಕದ ಆರಂಭದ ಅವಧಿಯಲ್ಲಿ ನಡೆಯುವ ಕಥಾನಕ. ದಯಾಳ್ ಪದ್ಮನಾಭನ್‌ ನಿರ್ದೇಶನದ ಸಿನಿಮಾದಲ್ಲಿ ಜೆಕೆ ಮತ್ತು ಅನುಪಮ ನಟಿಸಿದ್ದಾರೆ. ಜುಲೈ 6ಕ್ಕೆ ಸಿನಿಮಾ ತೆರೆಕಾಣಲಿದೆ

ಕತೆ, ಕಾದಂಬರಿ ಆಧರಿಸಿದ ಸಿನಿಮಾಗಳು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ನಿರ್ದೇಶಕ ದಯಾಳ್‌ ನಾಟಕವೊಂದನ್ನು ಸಿನಿಮಾ ಮಾಡಿದ್ದಾರೆ. ಮೋಹನ್ ಹಬ್ಬು ಅವರ ಇಪ್ಪತ್ತೈದು ನಿಮಿಷಗಳ ‘ಕರಾಳ ರಾತ್ರಿ’ ನಾಟಕವನ್ನು ದಯಾಳ್‌ ಒಂದು ಗಂಟೆ ನಲವತ್ತೈದು ನಿಮಿಷಗಳ ‘ಆ ಕರಾಳ ರಾತ್ರಿ’ ಕ್ರೈಂ-ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ. ಇದು ಅವರ ನಿರ್ಮಾಣದ ಚಿತ್ರವೂ ಹೌದು.

‘ಹಗ್ಗದ ಕೊನೆ’ ಚಿತ್ರದ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದ ದಯಾಳ್‌ ‘ಸತ್ಯಹರಿಶ್ಚಂದ್ರ’ ಚಿತ್ರದಲ್ಲಿ ಸೋಲುಂಡಿದ್ದರು. ಈಗ ‘ಆ ಕರಾಳ ರಾತ್ರಿ’ ಸಿನಿಮಾದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. “ಎರಡೂವರೆ ವರ್ಷಗಳ ಹಿಂದೆ ಈ ನಾಟಕ ನನ್ನ ಗಮನಕ್ಕೆ ಬಂದಿತ್ತು. ಆಗ ಸಿನಿಮಾ ಮಾಡಲು ನನ್ನಲ್ಲಿ ಹಣವಿರಲಿಲ್ಲ. ಇದನ್ನು ನಾನೇ ಸಿನಿಮಾ ಮಾಡಬೇಕು. ಬೇರೆಯವರಿಗೆ ಹಕ್ಕು ಕೊಡಬೇಡಿ ಎಂದು ಮೋಹನ್ ಹಬ್ಬು ಅವರಲ್ಲಿ ವಿನಂತಿಸಿಕೊಂಡಿದ್ದೆ. ಖಂಡಿತವಾಗಿ ಇದು ಹತ್ತರಲ್ಲಿ ಹನ್ನೊಂದು ಎನ್ನುವಂತಹ ಸಿನಿಮಾ ಆಗದೆ, ಕನ್ನಡ ಚಿತ್ರರಂಗದಲ್ಲಿ ದಾಖಲಾಗುವಂತಹ ಪ್ರಯೋಗವಾಗುತ್ತದೆ” ಎನ್ನುತ್ತಾರೆ ದಯಾಳ್‌‌.

‘ಆ ಕರಾಳ ರಾತ್ರಿ’ ಸಿನಿಮಾದ ‘ಮದನ ಮುರಳಿ’ ಹಾಡು

ಇದು ಎಂಬತ್ತರ ದಶಕದ ಆರಂಭದ ಅವಧಿಯಲ್ಲಿ ನಡೆಯುವ ಕತೆ. ಮೂಡಿಗೆರೆ ಸಮೀಪದ ಬಾಲೂರಿನಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲೊಂದು ಮನೆಯಲ್ಲಿ ಚಿತ್ರಿಸಿದ್ದು, ಉಳಿದಂತೆ ಸುತ್ತಮುತ್ತ ತಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್‌ ಹಾಕಿದ್ದರಂತೆ. ಎಂಬತ್ತರ ಕಾಲಘಟ್ಟದ ಕತೆಗೆ ತಕ್ಕಂತಹ ಕಾಸ್ಟ್ಯೂಮ್‌, ಪ್ರಾಪರ್ಟೀಸ್‌ ಇಲ್ಲಿದೆ. ದಯಾಳ್ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವುದಕ್ಕೂ ಮುನ್ನವೇ ಚಿತ್ರದ ಶೇ ಎಪ್ಪತ್ತರಷ್ಟು ಚಿತ್ರಕಥೆ ಸಿದ್ಧವಾಗಿತ್ತು. ಬಿಗ್‌ಬಾಸ್ ಮನೆಯಲ್ಲಿ ಚಿತ್ರದಲ್ಲಿ ನಟಿಸಲಿರುವ ನಟ-ನಟಿಯರ ಬಗ್ಗೆ ಚರ್ಚೆವಾಯ್ತು. ಶೋ ಮುಗಿಯುತ್ತಿದ್ದಂತೆ ಚಿತ್ರೀಕರಣ ಆರಂಭವಾಗಿದೆ.

ನಟ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಬುಡುಬುಡುಕೆ ದಾಸಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಯಾಳ್ ಜೊತೆ ಬಿಗ್‌ಬಾಸ್‌ ಸ್ಪರ್ಧಿಗಳಾಗಿದ್ದ ನಟ ಜೆಕೆ, ನಟಿ ಮಯೂರಿ, ಹಿರಿಯ ನಟ ಸಿಹಿಕಹಿ ಚಂದ್ರು ಮತ್ತು ಜಯಶ್ರೀನಿವಾಸನ್‌ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ‘ಮದನ ಮುರಳಿ’ ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಬಿಗ್‌ಬಾಸ್ ಸ್ಪರ್ಧಿ ಶ್ರುತಿ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದು, ಪಿ ಕೆ ಎಚ್ ದಾಸ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಜುಲೈ 6ರಂದು ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ : ಸಂಭಾಷಣೆಕಾರ ಮಾಸ್ತಿ ಮನದ ಮಾತು | ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ

‘ಆ ಕರಾಳ ರಾತ್ರಿ’ ಸಿನಿಮಾ ಆಡಿಯೋ ಬಿಡುಗಡೆ ಸಂದರ್ಭ

ಚಿತ್ರದ ಟ್ರೈಲರ್‌

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More