‘ವಿಶ್ವರೂಪಂ 2’ ಟ್ರೈಲರ್‌ ರಿಲೀಸ್‌ ಮಾಡಿ ಕಮಲ್‌ಗೆ ಶುಭಕೋರಿದ ಅಮೀರ್

ಕಮಲ ಹಾಸನ್‌ ನಟಿಸಿ, ನಿರ್ದೇಶಿಸಿರುವ ‘ವಿಶ್ವರೂಪಂ 2’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಹಲವು ತಾರೆಯರು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ತೆರೆಕಂಡಿದ್ದ ‘ವಿಶ್ವರೂಪಂ’ ಸರಣಿಯಿದು. ಚಿತ್ರದ ಕತೆಯನ್ನು ಬಿಟ್ಟುಕೊಡದ ಟ್ರೈಲರ್ ಕುತೂಹಲಕಾರಿಯಾಗಿದೆ

“ಸಿನಿಮಾದಲ್ಲಿ ಹೆಚ್ಚು ಆಕ್ಷನ್ ಇದೆ. ಆಕ್ಷನ್‌‌ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಿಗೂ ಅವಕಾಶವಿದೆ” ಎಂದಿದ್ದಾರೆ ನಟ, ನಿರ್ದೇಶಕ ಕಮಲ ಹಾಸನ್‌. ಅವರು ನಟಿಸಿ, ನಿರ್ದೇಶಿಸಿರುವ ‘ವಿಶ್ವರೂಪಂ2’ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬಾ ಆಕ್ಷನ್‌ ಸನ್ನಿವೇಶಗಳಿವೆ ಎನ್ನುವುದು ಹೈಲೈಟ್‌. ಕಮಲ್‌ ಸಿನಿಮಾ ಹಲವರಿಗೆ ಕುತೂಹಲ ಕೆರಳಿಸಿದ್ದರೆ ಮತ್ತಷ್ಟು ಸಿನಿಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2013ರಲ್ಲಿ ತೆರೆಕಂಡಿದ್ದ ‘ವಿಶ್ವರೂಪಂ’ ಸರಣಿ ಚಿತ್ರವಿದು. ಹಿಂದಿ ಅವತರಣಿಕೆಯನ್ನು ನಟ ಅಮೀರ್ ಖಾನ್ ಬಿಡುಗಡೆಗೊಳಿಸುವುದಾಗಿ ಕಮಲ್ ಹೇಳಿದ್ದರು. ಅದರಂತೆ ಅಮೀರ್‌ ಟ್ರೈಲರ್ ಲಾಂಚ್ ಮಾಡಿ ಕಮಲ ಹಾಸನ್‌ರಿಗೆ ಶುಭ ಕೋರಿದ್ದಾರೆ. “ನಿಮಗೆ ಮತ್ತು ಚಿತ್ರತಂಡದ ಎಲ್ಲರಿಗೂ ಅಭಿನಂದನೆಗಳು ಹಾಗೂ ಶುಭಾಶಯಗಳು. ನಿಮ್ಮ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯಿದೆ” ಎಂದಿದ್ದಾರೆ ಅಮೀರ್‌. ಬಾಲಿವುಡ್ ಮತ್ತು ದಕ್ಷಿಣ ಭಾರತದ ಹಲವು ನಟ-ನಟಿಯರು ಟ್ರೈಲರ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಚಿತ್ರನಿರ್ದೇಶಕರಾಗಿ ಯಶಸ್ಸು ಕಂಡ ಬಾಲಿವುಡ್‌ ನೃತ್ಯ ಸಂಯೋಜಕರು

2013ರಲ್ಲಿ ತೆರೆಕಂಡ ‘ವಿಶ್ವರೂಪಂ’ ವಿವಾದಕ್ಕೀಡಾಗಿತ್ತು. ಪ್ರತಿಭಟನಾಕಾರರು ಶೀರ್ಷಿಕೆ ಬದಲಾವಣೆಗೆ ಒತ್ತಾಯಿಸಿದ್ದರು. ಆರಂಭದಲ್ಲಿ ನಿಷೇಧದ ಭೀತಿ ಎದುರಿಸಿದ್ದ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ 200 ಕೋಟಿ ರೂಪಾಯಿ ವಹಿವಾಟು ನಡೆಸಿದ್ದೊಂದು ದಾಖಲೆ. ಕಲಾನಿರ್ದೇಶನ ಮತ್ತು ನೃತ್ಯ ಸಂಯೋಜನೆ ವಿಭಾಗಗಳಲ್ಲಿ ಸಿನಿಮಾಗೆ ಎರಡು ರಾಷ್ಟ್ರಪ್ರಶಸ್ತಿಗಳು ಸಂದಿದ್ದವು. ‘ವಿಶ್ವರೂಪಂ 2’ನಲ್ಲಿ ಕಮಲ ಹಾಸನ್‌ RAW ಏಜೆಂಟ್ ವಾಸಿಮ್‌ ಪಾತ್ರದಲ್ಲಿ ನಟಿಸಿದ್ದರೆ, ರಾಹುಲ್ ಬೋಸ್‌ ಉಗ್ರಗಾಮಿ ಒಮರ್‌ ಖುರೇಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸರಣಿಯ ಮೊದಲ ಚಿತ್ರದ ಕ್ಲ್ಯೈಮ್ಯಾಕ್ಸ್‌ನೊಂದಿಗೆ ‘ವಿಶ್ವರೂಪಂ2’ ಆರಂಭವಾಗುತ್ತದೆ. ಅಲ್ಲಿ ವಾಸಿಮ್‌ ಹಿಡಿತದಿಂದ ಒಮರ್‌ ಪಾರಾಗುತ್ತಾನೆ. ಸರಣಿ ಚಿತ್ರದಲ್ಲಿ ಒಮರ್‌ನ ದುಷ್ಕೃತ್ಯಗಳನ್ನು ತಪ್ಪಿಸುವ ಅಧಿಕಾರಿಯಾಗಿ ಕಮಲ್‌ರನ್ನು (ವಾಸಿಮ್‌) ನೋಡಬಹುದು. ಶೇಖರ್‌ ಕಪೂರ್‌, ವಹೀದ ರೆಹಮಾನ್, ನಾಜರ್‌, ಪೂಜಾ ಕುಮಾರ್‌, ಆಂಡ್ರೆ ಜೆರೆಮಿ ಚಿತ್ರದಲ್ಲಿ ನಟಿಸಿದ್ದಾರೆ. ಅಗಸ್ಟ್‌ 10ರಂದು ಸಿನಿಮಾ ತೆರೆಕಾಣಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More