ವಿಡಿಯೋ ಸಾಂಗ್‌ | ‘ಆರಾರೋ’ ಹಾಡಿನೊಂದಿಗೆ ತೆರೆಗೆ ಮರಳಿದ ನಝ್ರಿಯಾ

‘ಬೆಂಗಳೂರು ಡೇಸ್‌’ ಸೂಪರ್‌ಹಿಟ್‌ ಮಲಯಾಳಂ ಸಿನಿಮಾ ಖ್ಯಾತಿಯ ಅಂಜಲಿ ಮೆನನ್‌ ನಿರ್ದೇಶನದ ‘ಕೂಡೆ’ ಸಿನಿಮಾದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡಿಗ ರಘು ದೀಕ್ಷಿತ್ ಸಂಗೀತ ಸಂಯೋಜನೆಯ ಈ ಹಾಡಿನಲ್ಲಿ ನಟಿ ನಝ್ರಿಯಾ ನಜೀಮ್‌ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ

ನಿರ್ದೇಶಕಿ ಅಂಜಲಿ ಮೆನನ್‌ ‘ಕೂಡೆ’ ಸಿನಿಮಾ ಘೋಷಿಸಿದಾಗ ಈ ಪ್ರಯೋಗದ ಬಗ್ಗೆ ಎಲ್ಲರೂ ಅಪಾರ ಆಸಕ್ತಿಯಿಂದ ಮಾತನಾಡಿದ್ದರು. ಸೂಪರ್‌ಹಿಟ್‌ 'ಬೆಂಗಳೂರು ಡೇಸ್‌’ ಸಿನಿಮಾದ ನಿರ್ದೇಶಕಿಯ ಚಿತ್ರವಿದು ಎನ್ನುವ ಕಾರಣಕ್ಕೇ ‘ಕೂಡೆ’ ಸುದ್ದಿಯಾಗಿತ್ತು. ಪೃಥ್ವಿರಾಜ್‌, ನಝ್ರಿಯಾ ನಜೀಮ್‌, ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕೂಡೆ’ ಪೂರ್ಣಗೊಂಡಿದ್ದು, ಇದೀಗ ಚಿತ್ರದ ವಿಡಿಯೋ ಹಾಡೊಂದು ಬಿಡುಗಡೆಯಾಗಿದೆ. ಕನ್ನಡಿಗ ರಘು ದೀಕ್ಷಿತ್‌ ಸಂಗೀತ ಸಂಯೋಜನೆಯ ‘ಆರಾರೋ’ ಹಾಡಿನಲ್ಲಿ ನಝ್ರಿಯಾ ನಜೀಮ್‌ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ಪಿಕ್ಚರೈಸೇಷನ್, ಮಧುರ ಸಂಗೀತದ ಹಿನ್ನೆಲೆಯಲ್ಲಿ ನಝ್ರಿಯಾರ ಭಾವಪೂರ್ಣ ಕಂಗಳು ಮತ್ತು ಮುಗುಳುನಗೆ ಹಾಡಿನ ಮೆರುಗು ಹೆಚ್ಚಿಸಿವೆ.

ನಟಿ ನಝ್ರಿಯಾ ಅವರಿಗೆ ಇದು ವಿಶೇಷ ಸಿನಿಮಾ. ನಟ ಫಹಾದ್ ಫಾಸಿಲ್ ಅವರನ್ನು ಮದುವೆಯಾಗಿದ್ದ ನಟಿ, ನಾಲ್ಕು ವರ್ಷಗಳ ನಂತರ ‘ಕೂಡೆ’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಇನ್ನು, ನಿರ್ದೇಶಕಿ ಅಂಜಲಿ ಮೆನನ್‌ ಅವರಿಗೆ ಇದು ಮೂರನೇ ಸಿನಿಮಾ. ಚೊಚ್ಚಲ ನಿರ್ದೇಶನದ ‘ಮಂಜದಿಕುರು’ (2012) ಚಿತ್ರಕ್ಕೆ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ನಿರ್ದೇಶನದ ಎರಡನೇ ಸಿನಿಮಾ ‘ಬೆಂಗಳೂರು ಡೇಸ್‌’ (2014) ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಸದ್ದು ಮಾಡಿತ್ತು. ‘ಉಸ್ತಾದ್‌ ಹೋಟೆಲ್‌’ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಅಂಜಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ‘ಕೂಡೆ’ ಜುಲೈನಲ್ಲಿ ತೆರೆಕಾಣಲಿದೆ.

‘ಬೆಂಗಳೂರು ಡೇಸ್‌’ (2014) ಸಿನಿಮಾ ಹಾಡು

ಇದನ್ನೂ ಓದಿ : ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ ತೆಲುಗು ವೆಬ್‌ ಸರಣಿ ‘ಗ್ಯಾಂಗ್‌ಸ್ಟರ್ಸ್‌‌’
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More