ಟೀಸರ್‌ | ಈದ್‌ ಸಂಭ್ರಮದ ‘ಝೀರೋ’ ಟೀಸರ್‌ನಲ್ಲಿ ಶಾರುಖ್‌-ಸಲ್ಮಾನ್

ಈದ್ ಹಬ್ಬಕ್ಕೆಂದು ನಟ ಶಾರುಖ್‌ ಖಾನ್‌ ಅಭಿನಯದ ‘ಝೀರೋ’ ಚಿತ್ರದ ವಿಶೇಷ ಟೀಸರ್ ಬಿಡುಗಡೆಯಾಗಿದೆ. ಇಲ್ಲಿ ಶಾರುಖ್ ಮತ್ತು ಸಲ್ಮಾನ್ ಖಾನ್‌ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ. ವರ್ಷದ ಬಹುನಿರೀಕ್ಷಿತ ಆನಂದ್ ಎಲ್ ರಾಯ್‌ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ

ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ ಅಭಿನಯದ ‘ರೇಸ್‌ 3’ ಸಿನಿಮಾ ತೆರೆಕಾಣುತ್ತಿದೆ. ಇದೇ ವೇಳೆ, ನಟ ಶಾರುಖ್ ಕೂಡ ತಮ್ಮ ‘ಝೀರೋ’ ಸಿನಿಮಾದ ಎರಡನೇ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಇಬ್ಬರು ಖಾನ್‌ಗಳಿರುವ ವಿಡಿಯೋ ಸಿನಿಪ್ರಿಯರನ್ನು ಮೋಡಿ ಮಾಡುತ್ತಿದೆ. ಜಾವೇದ್ ಜಾಫ್ರಿ ಹಿನ್ನೆಲೆ ಧ್ವನಿಯಲ್ಲಿ ಕುಳ್ಳ ಶಾರುಖ್ ಡಾನ್ಸ್ ಫ್ಲೋರ್‌ಗೆ ಎಂಟ್ರಿ ಕೊಡುವ ದೃಶ್ಯದೊಂದಿಗೆ ಟೀಸರ್ ಶುರುವಾಗುತ್ತದೆ. ಕೂಲ್‌, ಹಾಟ್‌, ದಬಾಂಗೋ ಕಿ ಪೆಹ್ಚಾನ್‌, ಟೈಗರೋನ್‌ ಕಿ ಶಾನ್’ ಎನ್ನುವ ಘೋಷಣೆಗಳೊಂದಿಗೆ ಅಂಜಿಕೆಯಿಂದಲೇ ಬರುವ ಶಾರುಖ್‌ಗೆ ಸಲ್ಮಾನ್ ಬೆಂಬಲವಾಗಿ ನಿಲ್ಲುತ್ತಾರೆ. ಚಿತ್ರದಲ್ಲಿ ಸಲ್ಮಾನ್‌ಗೆ ಅತಿಥಿ ಪಾತ್ರವಿದೆ. ಕುಳ್ಳ ಶಾರುಖ್‌ ಡಾನ್ಸ್‌ ಫ್ಲೋರ್‌ ಮೇಲೆ ಸಲ್ಮಾನ್ ಜೊತೆ ಕುಣಿದು, ಕೊನೆಯಲ್ಲಿ ಜಿಗಿದು ಸಲ್ಮಾನ್‌ ಸೊಂಟವನ್ನು ಬಳಸಿ ಅವರಿಗೊಂದು ಕಿಸ್ ಕೊಡುತ್ತಾರೆ.

ಇದನ್ನೂ ಓದಿ : ಚಿತ್ರನಿರ್ದೇಶಕರಾಗಿ ಯಶಸ್ಸು ಕಂಡ ಬಾಲಿವುಡ್‌ ನೃತ್ಯ ಸಂಯೋಜಕರು

ಒಂದು ಕಾಲದಲ್ಲಿ ಕೋಳಿ ಜಗಳಗಳಿಂದ ಸುದ್ದಿಯಾಗಿದ್ದ ಇಬ್ಬರು ಖಾನ್‌ಗಳನ್ನು ಒಂದೇ ಸ್ಕ್ರೀನ್‌ನಲ್ಲಿ ನೋಡುವ ಖುಷಿ ಅಭಿಮಾನಿಗಳದ್ದಾಗಿದೆ. ಟ್ವಿಟರ್‌ನಲ್ಲಿ ಟೀಸರ್ ಶೇರ್ ಮಾಡಿರುವ ಶಾರುಖ್‌, “ನಿರ್ದೇಶಕ ಆನಂದ್‌ ಎಲ್ ರಾಯ್‌ ಕಡೆಯಿಂದ ಈದ್‌ಗೆಂದು ವಿಶೇಷ ಕೊಡುಗೆ. ನನ್ನ ಕಡೆಯಿಂದ ಮತ್ತು ‘ಝೀರೋ’ ಚಿತ್ರತಂಡದಿಂದ ಎಲ್ಲರಿಗೂ ಶುಭಾಶಯ. ನಿಮಗೆ ಖುಷಿಯಾಗುತ್ತದೆ ಎಂದು ಭಾವಿಸಿದ್ದೇನೆ,” ಎಂದಿದ್ದಾರೆ. ‘ತನು ವೆಡ್ಸ್ ಮನು’ ಸಿನಿಮಾ ಖ್ಯಾತಿಯ ಆನಂದ್ ಎಲ್ ರಾಯ್ ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್‌ ಮತ್ತು ಆರ್ ಮಾಧವನ್ ನಟಿಸಿದ್ದಾರೆ. ಈ ಇಬ್ಬರು ನಾಯಕಿಯರೊಂದಿಗೆ ಶಾರುಖ್‌ಗೆ ಇದು ಎರಡನೇ ಸಿನಿಮಾ. ಇದಕ್ಕೂ ಮುನ್ನ ‘ಜಬ್ ತಕ್ ಹೈ ಜಾನ್‌’ ಚಿತ್ರದಲ್ಲಿ ಮೂವರೂ ಜೊತೆಯಾಗಿ ನಟಿಸಿದ್ದರು. ಡಿಸೆಂಬರ್‌ 21ರಂದು ಸಿನಿಮಾ ಬಿಡುಗಡೆಯಾಗಲಿದೆ.

‘ಝೀರೋ’ ಮೊದಲನೇ ಟೀಸರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More