ಟ್ರೈಲರ್‌ | ‘ಜುಂಗಾ’ದಲ್ಲಿ ಕಾಮಿಡಿ ಡಾನ್ ಆಗಿ ಬದಲಾದ ವಿಜಯ್ ಸೇತುಪತಿ

‘ವಿಕ್ರಂ ವೇದ’ ತಮಿಳು ಚಿತ್ರದಲ್ಲಿ ಸಿನಿಪ್ರಿಯರ ಮನಗೆದ್ದಿದ್ದ ವಿಜಯ್‌ ಸೇತುಪತಿ ಅವರ ಹೊಸ ಸಿನಿಮಾ ‘ಜುಂಗಾ’ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕಾಮಿಡಿ ಡಾನ್ ಆಗಿ ಕಾಣಿಸಿಕೊಂಡಿರುವ ವಿಜಯ್‌ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ

ಸೂಪರ್‌ಹಿಟ್‌ ‘ವಿಕ್ರಂ ವೇದ’ ತಮಿಳು ಚಿತ್ರದಲ್ಲಿ ವಿಜಯ್ ಸೇತುಪತಿ ಖಳಪಾತ್ರದ ಲುಕ್‌ ದಕ್ಷಿಣ ಭಾರತ ಮಾತ್ರವಲ್ಲ, ಹಿಂದಿ ಚಿತ್ರರಂಗದವರನ್ನೂ ಸೆಳೆದಿತ್ತು. ಇಂಥದ್ದೊಂದು ವಿಚಿತ್ರ ಖಳಪಾತ್ರವನ್ನು ಮತ್ತಾರಿಂದಲೂ ನಿಭಾಯಿಸಲು ಸಾಧ್ಯವಿಲ್ಲ ಎಂದೇ ಸಿನಿ ವಿಶ್ಲೇಷಕರು ಹೇಳಿದ್ದರು. ಇದೀಗ ‘ಜುಂಗಾ’ ಚಿತ್ರದಲ್ಲೂ ವಿಜಯ್‌ ಡಾನ್ ಅಗಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇಲ್ಲಿ ಅವರು ಕಾಮಿಡಿ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ‍‍. ಇದು ಅವರದ್ದೇ ನಿರ್ಮಾಣದ ಸಿನಿಮಾ. ವಿಚಿತ್ರ ಆಟಿಟ್ಯೂಡ್ ಮತ್ತು ಸ್ಟೈಲ್‌ಗಳೊಂದಿಗೆ ಅವರಿಲ್ಲಿ ಗಮನ ಸೆಳೆಯುತ್ತಾರೆ. ವಿದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ವಿದೇಶಿ ನಟರು ಅಭಿನಯಿಸಿದ್ದಾರೆ. ಪಾತ್ರದ ಆಯ್ಕೆಯಲ್ಲಿನ ವಿಜಯ್‌ರ ಈ ಜಾಣನಡೆಯನ್ನು ಸಿನಿ ವಿಶ್ಲೇಷಕರು ಕೊಂಡಾಡುತ್ತಿದ್ದಾರೆ. ಗೋಕುಲ್ ನಿರ್ದೇಶನದ ಚಿತ್ರದ ನಾಯಕಿಯರಾಗಿ ಸಯೇಶಾ, ಮಡೋನ್ನಾ ಸೆಬಾಸ್ಟಿಯನ್‌ ನಟಿಸಿದ್ದಾರೆ.

ಇದನ್ನೂ ಓದಿ : ವಿಡಿಯೋ ಸಾಂಗ್‌ | ‘ಆರಾರೋ’ ಹಾಡಿನೊಂದಿಗೆ ತೆರೆಗೆ ಮರಳಿದ ನಝ್ರಿಯಾ

‘ಜಿಂಗಾ’ ಚಿತ್ರದ ಫಸ್ಟ್‌ ಲುಕ್ ಹೊರಬಿದ್ದಾಗಲೇ ಟ್ವಿಟರ್‌ನಲ್ಲಿ ಅಭಿಮಾನಿಗಳು ಸಂಭ್ರಮದಿಂದ ಪ್ರತಿಕ್ರಿಯಿಸಿದ್ದರು. ಇದೀಗ ಟ್ರೈಲರ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ವಿಕ್ರಂ ವೇದ’ ಚಿತ್ರದಲ್ಲಿ ಸೇತುಪತಿಯನ್ನು ನೋಡಿದವರಿಗೆ ‘ಜುಂಗಾ’ ಲುಕ್‌ ನಿರಾಸೆ ಮೂಡಿಸಿರಬಹುದು. ‘ಜುಂಗಾ’ ಬಿಡುಗಡೆಗೆ ಸಿದ್ಧವಾಗಿದ್ದು, ವಿಜಯ್ ಸೇತುಪತಿ ಮತ್ತೆರೆಡು ತಮಿಳು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ. ‘96’ ಚಿತ್ರದಲ್ಲಿ ತ್ರಿಷಾ ಅವರಿಗೆ ನಾಯಕಿ. ವ್ಯಕ್ತಿಯೊಬ್ಬನ ಬದುಕಿನ ಮೂರು ಹಂತಗಳನ್ನು ಇಲ್ಲಿ ಸೆರೆಹಿಡಿಯಲಾಗುತ್ತದಂತೆ. 16, 36 ಮತ್ತು 106 ವರ್ಷಗಳ ಮೂರು ಗೆಟಪ್‌ನಲ್ಲಿ ವಿಜಯ್‌ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಕುತೂಹಲ ಕೆರಳಿಸಿದೆ. ‘ಅನೀತಿ ಕಥೈಗಲ್‌’ ಅವರ ಮತ್ತೊಂದು ಸಿನಿಮಾ. ಸಮಂತಾ ಈ ಚಿತ್ರದ ನಾಯಕಿ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More