ನವಾಜುದ್ದೀನ್‌ರ ‘ಸೇಕ್ರೆಡ್‌ ಗೇಮ್ಸ್‌’ ವೆಬ್ ಸೀರಿಸ್‌ಗೆ ಉತ್ತಮ ಪ್ರತಿಕ್ರಿಯೆ

ಅನುರಾಗ್ ಕಶ್ಯಪ್‌, ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ‘ಸೇಕ್ರೆಡ್‌ ಗೇಮ್ಸ್‌’ ವೆಬ್‌ ಸಿರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಇಂದು (ಜು.6) ಶುರುವಾಗಿದೆ. ಈ ಒರಿಜಿನಲ್ ಇಂಡಿಯನ್‌ ಸರಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಮತ್ತಷ್ಟು ವೆಬ್ ಸರಣಿಗಳ ನಿರ್ಮಾಣಕ್ಕೆ ಪ್ರೇರಣೆಯಾಗಿದೆ

“ಕಭೀ ಕಭೀ ಲಗ್ತಾ ಹೈ ಅಪುನ್ ಹಿ ಭಗ್ವಾನ್‌ ಹೈ (ಕೆಲವು ಬಾರಿ ನಾನೇ ಭಗವಂತ ಎನಿಸುತ್ತದೆ),” ಎನ್ನುವ ಗಣೇಶ್ ಗೈತೋಂಡೆ ಸಂಭಾಷಣೆಯೊಂದಿಗಿನ ‘ಸೇಕ್ರೆಡ್‌ ಗೇಮ್ಸ್‌’ ವೆಬ್‌ ಸರಣಿಯ‌ ಟೀಸರ್‌ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದೀಗ ಸರಣಿ ಆರಂಭವಾಗಿದ್ದು ಬಾಲಿವುಡ್ ತಂತ್ರಜ್ಞರು ಸೇರಿದಂತೆ ವೆಬ್‌ ವೀಕ್ಷಕರು ಕಂಟೆಂಟ್‌ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಬ್‌ ಸರಣಿಯಲ್ಲಿ ಭೂಗತ ಪಾತಕಿ ಗಣೇಶ್‌ ಗೈತೋಂಡೆ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಇದ್ದಾರೆ. ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿರುವ ನಿರ್ದೇಶಕರಾದ ಅನುರಾಗ್‌ ಕಶ್ಯಪ್‌ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಮಹತ್ವದ ಕ್ರೈಂ ಡ್ರಾಮಾ ಇದು. ಮುಂಬಯಿ ಪೊಲೀಸ್ ಅಧಿಕಾರಿ ಸರ್ತಾಜ್‌ ಸಿಂಗ್‌ ಪಾತ್ರದಲ್ಲಿ ಸೈಫ್ ಆಲಿ ಖಾನ್‌ ಮತ್ತು ರಾಧಿಕಾ ಆಪ್ಟೆ ರಾ ಏಜೆಂಟ್‌ ಅಗಿ ನಟಿಸಿದ್ದಾರೆ. ದಿಟ್ಟ ಪೊಲೀಸ್‌ ಅಧಿಕಾರಿಯಾಗಿ ಸೈಫ್‌ ಪಾತ್ರ ಗಮನ ಸೆಳೆಯುತ್ತದೆ. ವಿಕ್ರಂ ಚಂದ್ರ ಅವರ ಇದೇ ಶೀರ್ಷಿಕೆಯ ಕೃತಿಯನ್ನಾಧರಿಸಿ ತಯಾರಾಗಿರುವ ಸರಣಿಯಿದು. ಬಾಲಿವುಡ್‌ನ ಜನಪ್ರಿಯ ಅಂಡರ್‌ವರ್ಲ್ಡ್‌ ಕ್ರೈಂ ಡ್ರಾಮಾ ಸಿನಿಮಾಗಳ ನೆರಳು ಇಲ್ಲಿ ದಟ್ಟವಾಗಿ ಕಾಣಿಸುತ್ತದೆ. ಫ್ಯಾಂಟಮ್‌ ಫಿಲ್ಮ್ಸ್‌ ನಿರ್ಮಾಣದ ಸರಣಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ತಯಾರಾಗಿದೆ. ಜನಪ್ರಿಯ ತಂತ್ರಜ್ಞರು ಹಾಗೂ ಕಲಾವಿದರ ಈ ಸರಣಿ ಬಗ್ಗೆ ಬಾಲಿವುಡ್ ಮಂದಿ ಮೆಚ್ಚುಗೆಯ ಮಾತಾಡುತ್ತಿದ್ದಾರೆ.

ಇದನ್ನೂ ಓದಿ : ಅವಿನಾಶ್ ಮನದ ಮಾತು | ಪ್ರೇಕ್ಷಕರ ನಿರೀಕ್ಷೆ ತಲುಪಿದರೆ ಸಿನಿಮಾ ಗೆಲ್ಲುತ್ತದೆ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More