ಟ್ರೈಲರ್‌ | ಕರಣ್‌ಜಿತ್‌ ಕೌರ್‌; ದಿ ಅನ್‌ಟೋಲ್ಡ್‌ ಸ್ಟೋರಿ ಆಫ್ ಸನ್ನಿ 

ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ಗೆ ಪಾತ್ರರಾಗಿರುವ ಸೆಲೆಬ್ರಿಟಿ ಹಿರೋಯಿನ್ ಸನ್ನಿ ಲಿಯೋನ್‌. ಕರಣ್‌ಜಿತ್ ಕೌರ್‌ ‌ಹೆಸರಿನ ಅವರು ಪೋರ್ನ್ ಸ್ಟಾರ್ ಸನ್ನಿ ಲಿಯೋನ್‌ ಆಗಿದ್ದೇ ಒಂದು ಕುತೂಹಲಕಾರಿ ಕತೆ. ಅವರ ಕತೆಯೀಗ ವೆಬ್‌ ಸರಣಿಯಾಗಿ ಮೂಡಿಬರಲಿದ್ದು, ಟೀಸರ್‌ ಗಮನ ಸೆಳೆದಿದೆ

ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಖ್ಯಾತಿ ಗಳಿಸಿದ ನಟಿ ಸನ್ನಿ ಲಿಯೋನ್‌ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಪಕ್ಕದ್ಮನೆ ಹುಡ್ಗಿ ಇಮೇಜಿನ ಕರಣ್‌ಜಿತ್‌ ಕೌರ್‌ ಪೋರ್ನ್‌ ಸ್ಟಾರ್‌ ಆಗಿ, ನಂತರ ಬಾಲಿವುಡ್‌ನಲ್ಲೂ ಗುರುತಿಸಿಕೊಂಡದ್ದು ಒಂದು ಸಿನಿಮಾ ಕತೆಯಂತೆಯೇ ಇದೆ. ಅವರ ಜೀವನದ ಕತೆ ವೆಬ್‌ ಸರಣಿಯಾಗಿದ್ದು, ಇದೇ ಜುಲೈ 16ರಿಂದ ಝೀ5ನಲ್ಲಿ ಮೂಡಿಬರಲಿದೆ.

ಸದ್ಯ ಬಿಡುಗಡೆ ಆಗಿರುವ ಎರಡು ನಿಮಿಷಗಳ ಟ್ರೈಲರ್‌ನಲ್ಲಿ ಸನ್ನಿ ಲಿಯೋನ್‌ ಶಾಲಾ ದಿನಗಳು, ಕುಟುಂಬದೊಂದಿಗಿನ ಆಕೆಯ ಒಡನಾಟ, ಮನೆಯಲ್ಲಿನ ಹಣಕಾಸಿನ ತೊಡಕು, ಪೆಂಟ್‌ಹೌಸ್‌ ಮ್ಯಾಗಜಿನ್‌ನಲ್ಲಿನ ಅವರ ಮೊದಲ ಫೋಟೋಶೂಟ್‌, ಅಡಲ್ಟ್‌ ಸಿನಿಮಾಗಳಲ್ಲಿ ನಟಿಸಬೇಕಾದ ಅನಿವಾರ್ಯತೆಗಳ ಬಗ್ಗೆ ಪ್ರಸ್ತಾಪವಾಗಿದೆ. ಸ್ವತಃ ಸನ್ನಿ ಲಿಯೋನ್‌ ವೆಬ್‌ ಸರಣಿಯಲ್ಲಿ ನಟಿಸಿದ್ದಾರೆ. ‘ಟೇನೇಜ್ ಸನ್ನಿ ಲಿಯೋನ್‌’ ಆಗಿ ಹದಿನಾಲ್ಕರ ಹರೆಯದ ರಿಸಾ ಸೌಜಾನಿ ನಟಿಸಿದ್ದಾರೆ. ಇಲ್ಲಿವರೆಗೆ ಅಡಲ್ಟ್‌, ರೊಮ್ಯಾಂಟಿಕ್ ಸಿನಿಮಾಗಳ ನಟಿಯಾಗಷ್ಟೇ ಎಲ್ಲರಿಗೂ ಪರಿಚಿತರಾಗಿದ್ದ ಸನ್ನಿ ಲಿಯೋನ್‌ರ ಮತ್ತೊಂದು ಮುಖ ಈ ವೆಬ್‌ ಸರಣಿಯಲ್ಲಿ ರಿವೀಲ್‌ ಆಗಲಿದೆ.

ಟ್ವಿಟರ್‌ನಲ್ಲಿ ವೆಬ್‌ ಸರಣಿಯ ಟ್ರೈಲರ್ ಶೇರ್ ಮಾಡಿರುವ ಇಂಡೋ-ಕೆನಡಿಯನ್‌ ತಾರೆ ಸನ್ನಿ, “ನನ್ನ ಜೀವನವನ್ನು ಚಿತ್ರಿಸುವ ಪ್ರಸ್ತಾಪದ ಬಗ್ಗೆ ನನಗೆ ಮೊದಲು ಗೊಂದಲವಿತ್ತು. ನಿರ್ದೇಶಕರು ಮತ್ತು ಪ್ರೊಡಕ್ಷನ್ ಹೌಸ್‌ ಈ ಬಗ್ಗೆ ಸೂಕ್ತ ವಿವರಣೆ ನೀಡಿದ ನಂತರ ಆಸಕ್ತಿಯಿಂದ ತೊಡಗಿಸಿಕೊಂಡೆ,” ಎಂದಿದ್ದಾರೆ.

ಇದನ್ನೂ ಓದಿ : ಪ್ರಕಾಶ್‌ ರೈ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರಾ ಜಗಪತಿ ಬಾಬು?
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More