ಫಂಕಿ‌ ಹೇರ್‌ಕಟ್ ವಿಡಿಯೋ ಶೇರ್‌ ಮಾಡಿ ‘ಕ್ಯಾನ್ಸರ್‌ ಗೆಲ್ಲುತ್ತೇನೆ’ ಎಂದ ಸೋನಾಲಿ

ಮೊನ್ನೆ ಜುಲೈ 4ರಂದು ಬಾಲಿವುಡ್ ನಟಿ ಸೋನಾಲಿ ತಾವು ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಹೊರಗೆಡಹಿದ್ದರು. ನ್ಯೂಯಾರ್ಕ್‌ನಲ್ಲಿರುವ ಅವರು ಚಿಕಿತ್ಸೆಯ ಭಾಗವಾಗಿ ಫಂಕಿ‌ ಹೇರ್‌ಕಟ್‌ ಮಾಡಿಸಿದ್ದಾರೆ. ಈ ವಿಡಿಯೋ ಶೇರ್‌ ಮಾಡಿರುವ ಸೋನಾಲಿ ಕ್ಯಾನ್ಸರ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ

ತಮಗೆ ಕ್ಯಾನ್ಸರ್ ಇದೆ ಎಂದು ನಟಿ ಸೋನಾಲಿ ಬೇಂದ್ರೆ ಹೇಳುತ್ತಿದ್ದಂತೆ ಬಾಲಿವುಡ್‌ನ ಹಲವು ನಟ-ನಟಿಯರು ಆಕೆಗೆ ಆತ್ಮ ಸ್ಥೈರ್ಯ ತುಂಬಿದ್ದರು. ಪ್ರಸ್ತುತ ಸೋನಾಲಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಭಾಗವಾಗಿ ಉದ್ದನೆಯ ತಲೆಗೂದಲು ಕತ್ತರಿಸಿರುವ ಸೋನಾಲಿ ಫಂಕಿ, ಸ್ಪೋರ್ಟ್‌ ಹೇರ್‌ಕಟ್‌ ಮಾಡಿಸಿಕೊಂಡಿದ್ದಾರೆ. ಕೂದಲು ಕತ್ತರಿಸುವ ವಿಡಿಯೋ ಹಾಗೂ ಆನಂತರದ ಲುಕ್‌ಗಳ ಫೋಟೋಗಳನ್ನು ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸೋನಾಲಿ ಕ್ಯಾನ್ಸರ್‌ ಗೆಲ್ಲುವ ಭರವಸೆಯ ಮಾತುಗಳನ್ನಾಡಿದ್ದಾರೆ. ವಿಡಿಯೋ ಹಾಕಿರುವ ನಟಿ, “ಸಂಕಷ್ಟದ ಪರಿಸ್ಥಿತಿ ಬಾರದ ಹೊರತಾಗಿ ನಮ್ಮಲ್ಲಿನ ನಿಜ ಮನಸ್ಥೈರ್ಯದ ಅರಿವು ನಮಗಾಗದು ಎಂದು ನನ್ನ ನೆಚ್ಚಿನ ಲೇಖಕ ಇಸಾಬೆಲ್ ಅಲೆಂಡೆ ಹೇಳುತ್ತಾರೆ. ಯುದ್ಧ, ಕಾಯಿಲೆಗಳಂತಹ ಸಂಕೀರ್ಣ ಸಂದರ್ಭಗಳನ್ನು ಗೆದ್ದು ಬರಲು ಮನುಷ್ಯರು ಎಷ್ಟೆಲ್ಲಾ ಶ್ರಮಪಡಬೇಕಾಗುತ್ತದೆ ಎನ್ನುವುದೇ ವಿಸ್ಮಯ” ಎಂದಿರುವ ಸೋನಾಲಿ ಅವರ ಮಾತುಗಳಲ್ಲಿ ಆತ್ಮವಿಶ್ವಾಸ ಜಿನುಗುತ್ತದೆ.

ಇದನ್ನೂ ಓದಿ : ಬಹುಭಾಷಾ ನಟಿ ಸೋನಾಲಿಗೆ ಕ್ಯಾನ್ಸರ್‌; ಶೀಘ್ರ ಚೇತರಿಕೆಗೆ ಬಾಲಿವುಡ್ ಹಾರೈಕೆ

ಪ್ರತಿದಿನ ತಾವು ಸವಾಲುಗಳನ್ನು ಎದುರಿಸುತ್ತಿದ್ದು, ಆತ್ಮೀಯರ ಹಾರೈಕೆಗಳು ಜೀವನೋತ್ಸಾಹ ತಂದಿವೆ ಎಂದಿದ್ದಾರೆ ಸೋನಾಲಿ. ನಟಿ ತಮ್ಮ ಹೊಸ ಲುಕ್‌ನ ಫೋಟೋ, ವಿಡಿಯೋ ಪೋಸ್ಟ್‌ ಮಾಡುತ್ತಿದ್ದಂತೆ ಬಾಲಿವುಡ್‌ನ ಹಲವು ನಟ-ನಟಿಯರು ಸೋನಾಲಿಗೆ ಪ್ರೀತಿಯ ಸಂದೇಶ ಕಳುಹಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ. “ಕಳೆದ ಕೆಲವು ದಿನಗಳಲ್ಲಿ ನಾನು ಪ್ರೀತಿಯ ಸಂದೇಶಗಳಿಂದ ಮೂಕಳಾಗಿದ್ದೇನೆ. ಕೆಲವರು ತಾವು ಕ್ಯಾನ್ಸರ್‌ ಗೆದ್ದು ಬಂದ ಕತೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಕತೆಗಳು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿವೆ. ಇವರಿಗೆ ವಿಶೇಷ ಕೃತಜ್ಞತೆಗಳು. ಪ್ರತಿದಿನ ಸವಾಲುಗಳನ್ನು ಎದುರಿಸುತ್ತಿರುವ ನಾನು ಪ್ರತಿ ಕ್ಷಣವೂ ಸಕಾರಾತ್ಮಕವಾಗಿ ಆಲೋಚಿಸಲು ಯತ್ನಿಸುತ್ತಿದ್ದೇನೆ” ಎಂದಿದ್ದಾರೆ ಸೋನಾಲಿ. ನಟಿ ಪೋಸ್ಟ್ ಮಾಡಿರುವ ವಿಡಿಯೋ, ಫೋಟೋಗಳಲ್ಲಿ ಅವರ ಪತಿ, ನಿರ್ಮಾಪಕ ಗೋಲ್ಡಿ ಬೆಹ್ಲ್‌ ಇದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿರುವ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. ಸೋನಾಲಿ ಪೋಸ್ಟ್‌ಗೆ ಬಾಲಿವುಡ್ ತಾರೆಯರಾದ ಬಿಪಾಶಾ ಬಸು, ಶ್ರದ್ಧಾ ಕಪೂರ್‌, ಪರಿಣೀತಿ ಚೋಪ್ರಾ, ಶಿಲ್ಪಾ ಶೆಟ್ಟಿ, ಏಕ್ತಾ ಕಪೂರ್‌, ಕರಣ್ ಜೋಹರ್‌, ಮನೀಷ್ ಮಲ್ಹೋತ್ರಾ, ಲಿಸಾ ರೇ, ಸುನೀಲ್ ಶೆಟ್ಟಿ, ಅಶುತೋಷ್ ಗೌರೀಕರ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.

ನಟಿ ಸೋನಾಲಿ ಬೇಂದ್ರೆಗೆ ಬಾಲಿವುಡ್‌ ತಾರೆಯರು ಹಾಗೂ ತಂತ್ರಜ್ಞರ ಪ್ರೀತಿಯ ಸಂದೇಶಗಳು ಇಲ್ಲಿವೆ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More